Viral News: ಮನೆಕೆಲಸಕ್ಕೆ ನೇಮಿಸಿಕೊಂಡ ಬಾಲಕಿಗೆ ಚಿತ್ರಹಿಂಸೆ, ಪೈಲಟ್ ದಂಪತಿಗೆ ಥಳಿತ

|

Updated on: Jul 20, 2023 | 9:37 AM

10 ವರ್ಷದ ಬಾಲಕಿಯನ್ನು ಮನೆಕೆಲಸಕ್ಕೆ ಇಟ್ಟುಕೊಂಡು, ಚಿತ್ರಹಿಂಸೆ ನೀಡಿರುವ ಮಹಿಳಾ ಪೈಲಟ್​​ಗೆ ಸಾರ್ವಜನಿಕರು ಥಳಿಸಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.

Viral News: ಮನೆಕೆಲಸಕ್ಕೆ ನೇಮಿಸಿಕೊಂಡ ಬಾಲಕಿಗೆ ಚಿತ್ರಹಿಂಸೆ, ಪೈಲಟ್ ದಂಪತಿಗೆ ಥಳಿತ
ವೈರಲ್​​ ವೀಡಿಯೊ
Follow us on

ದೆಹಲಿ, ಜು.19: 10 ವರ್ಷದ ಬಾಲಕಿಯನ್ನು ಮನೆಕೆಲಸಕ್ಕೆ ಇಟ್ಟುಕೊಂಡು, ಚಿತ್ರಹಿಂಸೆ ನೀಡಿರುವ ಮಹಿಳಾ ಪೈಲಟ್​​ಗೆ ಸಾರ್ವಜನಿಕರು ಥಳಿಸಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ವೀಡಿಯೊವೊಂದು ವೈರಲ್​​ ಆಗಿದ್ದು, ಈ ಮಹಿಳಾ ಪೈಲಟ್ ದಿನನಿತ್ಯ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ವಿಡಿಯೋದಲ್ಲಿ ಮಹಿಳಾ ಪೈಲಟ್​ಗೆ ಸಮವಸ್ತ್ರದಲ್ಲಿರುವಾಗಲೇ ಥಳಿಸುತ್ತಿರುವುದನ್ನು ಕಾಣಬಹುದು, ಇನ್ನೂ ಕೆಲವು ಮಹಿಳೆಯರು ಆಕೆಯ ತಲೆಕೂದಲು ಹಿಡಿದು ಎಳೆದಾಡಿ ಹಿಗ್ಗಮುಗ್ಗ ಥಳಿಸಿದ್ದಾರೆ. ವಿಡಿಯೋದಲ್ಲಿ ಆಕೆ ಕ್ಷಮಿಸಿ ಎಂದು ಕೇಳಿದ್ರು, ಬಿಡದೆ ಮನಬಂದಂತೆ ಹೊಡೆದಿದ್ದಾರೆ.

ಮತ್ತೊಂದು ಕಡೆ ಆಕೆಯ ಪತಿಗೂ ಕೂಡ ಪುರುಷರ ಗುಂಪೊಂದು ಥಳಿಸಿದೆ. ಈತನಿಗೆ ಥಳಿಸುವುದನ್ನು ನೋಡಿ ಸ್ಥಳೀಯರು ಬಂದು ಕಾಪಾಡಿದ್ದಾರೆ, ನಂತರ ಅಲ್ಲಿಂದ ಆತನು ಓಡಿ ಹೋಗಿ  ಪತ್ನಿಯನ್ನು ಬಿಡಿಸಲು ಮುಂದಾಗುತ್ತಾನೆ. ವರದಿಗಳ ಪ್ರಕಾರ 2 ತಿಂಗಳ ಹಿಂದೆ 10 ವರ್ಷದ ಬಾಲಕಿಯನ್ನು ಮನೆ ಕೆಲಸಕ್ಕೆಂದು ಇಟ್ಟುಕೊಂಡಿದ್ದಾರೆ. ಇಂದು ಬೆಳಿಗ್ಗೆ ಹುಡುಗಿಯ ದೇಹದ ಮೇಲೆ ಇರುವ ಗಾಯಗಳನ್ನು ನೋಡಿ ಮನೆಯವರು ಹುಡುಗಿಯನ್ನು ಪ್ರಶ್ನಿಸಿದ್ದಾರೆ. ಆಗ ಬಾಲಕಿ ತಾನು ಕಳ್ಳತನ ಮಾಡಿದ್ದೇನೆ ಎಂದು ದಂಪತಿಗಳು ನನಗೆ ಹೊಡೆದಿದ್ದಾರೆ ಎಂದು ಹೇಳಿದ್ದಾಳೆ.

ಈ ಬಗ್ಗೆ ಅಕ್ಕ-ಪಕ್ಕದ ಮನೆಗೂ ಹುಡುಗಿಯ ಮನೆಯವರು ತಿಳಿಸಿದ್ದಾರೆ. ಬಾಲಕಿಯ ತೋಳುಗಳ ಮೇಲೆ ಮತ್ತು ಆಕೆಯ ಕಣ್ಣುಗಳ ಕೆಳಗೆ ಗಾಯದ ಗುರುತುಗಳನ್ನು ನೋಡುತ್ತಿದ್ದಂತೆ ಅವರು ಕೂಡ ದಂಪತಿಗಳ ಮೇಲೆ ದಾಳಿ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಪೊಲೀಸ್​​​ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದು, ದಂಪತಿಗಳನ್ನು ಬಂಧಿಸಿದ್ದಾರೆ. ಈ ಪ್ರಕಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನೀವೂ ತಡವಾಗಿ ಬರುತ್ತೀರಿ, ಅದಕ್ಕೆ ನಾನು ತಡವಾಗಿ ಬರುತ್ತಿದ್ದೇನೆ: ಹಿರಿಯ ಅಧಿಕಾರಿಯ ನೋಟಿಸ್​ಗೆ​​ ಉತ್ತರಿಸಿದ ಕಿರಿಯ ಅಧಿಕಾರಿ

ಬಾಲಕಾರ್ಮಿಕ ನಿಷೇಧ ಕಾಯ್ದೆ ಪ್ರಕಾರ ಮಕ್ಕಳನ್ನು ಮನೆ ಕೆಲಸಕ್ಕೆ ನೇಮಿಸುವಂತಿಲ್ಲ ಎಂದು ಗೊತ್ತಿದ್ದರು, ಈ ನಿಮಯವನ್ನು ಅನೇಕರು ಉಲ್ಲಂಘಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ದ್ವಾರಕಾದ ಹಿರಿಯ ಪೊಲೀಸ್ ಅಧಿಕಾರಿ ಎಂ ಹರ್ಷವರ್ಧನ್ ಅವರು ಬಾಲಕಿಯ ತೋಳುಗಳಲ್ಲಿ ಸುಟ್ಟ ಗಾಯದ ಗುರುತುಗಳನ್ನು ಗುರುತಿಸಿದ್ದಾರೆ. ಆಕೆಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಬಾಲಕಿ ಜತೆಗೆ ಸಮಾಲೋಚನೆ ನಡೆಸಿದ್ದು. ಆಕೆಯ ಹೇಳಿಕೆಯ ಆಧಾರದ ಮೇಲೆ ನಾವು ಭಾರತೀಯ ದಂಡ ಸಂಹಿತೆ, ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ಮತ್ತು ಬಾಲಾಪರಾಧಿ  ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Wed, 19 July 23