Viral Video: ನೋಡನೋಡುತ್ತಿದ್ದಂತೆ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಶಾಲಾ ಬಸ್; ಶಾಕಿಂಗ್ ವಿಡಿಯೋ ವೈರಲ್
ಅದೃಷ್ಟವಶಾತ್ ಬಸ್ಸಿನಲ್ಲಿ ಶಾಲಾ ಮಕ್ಕಳಿರಲಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಶಾಲಾ ಬಸ್ ಅನ್ನು ಜೆಸಿಬಿ ಸಹಾಯದಿಂದ ನದಿಯಿಂದ ಹೊರತೆಗೆಯಲಾಯಿತು.
ನವದೆಹಲಿ: ಉತ್ತರಾಖಂಡದ ಚಂಪಾವತ್‌ನಲ್ಲಿ (Champawat) ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮಂಗಳವಾರ ಬೆಳಗ್ಗೆ ಶಾಲಾ ಮಕ್ಕಳನ್ನು (School Bus) ಹತ್ತಿಸಿಕೊಳ್ಳಲು ಹೋಗುತ್ತಿದ್ದ ಶಾಲಾ ಬಸ್ ಇಲ್ಲಿನ ಪೂರ್ಣಗಿರಿ ರಸ್ತೆಯ ಕಿರೋಡ ಚರಂಡಿಯಲ್ಲಿ ಪ್ರವಾಹದ (Flood) ನೀರಿನಲ್ಲಿ ಕೊಚ್ಚಿಹೋಗಿದೆ. ನೀರಿನ ಹೊಡೆತಕ್ಕೆ ಸಿಲುಕಿ ಉರುಳಿ ನದಿಗೆ ಬಿದ್ದಿದೆ. ಈ ಘಟನೆಯಲ್ಲಿ ಶಾಲಾ ಬಸ್ ಚಾಲಕ ಕಮಲೇಶ್ ಕರ್ಕಿ ಹಾಗೂ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೃಷ್ಟವಶಾತ್ ಬಸ್ಸಿನಲ್ಲಿ ಶಾಲಾ ಮಕ್ಕಳಿರಲಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಗ್ರಾಮಸ್ಥರ ಪ್ರಕಾರ, ನೀರಿನ ಹರಿವು ಹೆಚ್ಚಿರುವುದರಿಂದ ಶಾಲಾ ಬಸ್ ಚಾಲಕನಿಗೆ ಸ್ವಲ್ಪ ಸಮಯ ಕಾಯಲು ಹೇಳಲಾಗಿತ್ತು. ಆದರೂ ಆತ ತುಂಬಿ ಹರಿಯುತ್ತಿದ್ದ ನದಿಯ ರಸ್ತೆಯಲ್ಲಿ ಬಸ್ ಚಲಾಯಿಸಿದ್ದ. ಈ ವೇಳೆ ನೀರಿನ ರಭಸಕ್ಕೆ ಬಸ್ ಮಗುಚಿ ಬಿದ್ದಿದ್ದು, ನದಿಯಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದೆ. ಶಾಲಾ ಬಸ್ನ ಒಂದು ಭಾಗ ಅಪಘಾತದಲ್ಲಿ ಜಖಂಗೊಂಡಿದೆ.
#BusAccident Shocking accident on #Poornagiri Road in #Champawat district of #Uttarakhand when a bus washed away in Floods. Thankfully no children were in this bus at time. pic.twitter.com/qHTGKFYk4C
— Jasmeen Kaur (@Jasmeen66480371) July 19, 2022
ಇದನ್ನೂ ಓದಿ: Viral Video: ಸೈನಿಕರ ಕಾಲಿಗೆ ಬಿದ್ದು ನಮಸ್ಕರಿಸಿದ ಕಂದಮ್ಮ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ
ಶಾಲಾ ಬಸ್ ಅನ್ನು ಜೆಸಿಬಿ ಸಹಾಯದಿಂದ ನದಿಯಿಂದ ಹೊರತೆಗೆಯಲಾಯಿತು. ನದಿ ತುಂಬಿ ಹರಿಯುತ್ತಿರುವುದರಿಂದ ಪೂರ್ಣಗಿರಿ ರಸ್ತೆಯ ಸಂಚಾರವನ್ನು ಸದ್ಯಕ್ಕೆ ಬಂದ್ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ನದಿಗಳು ಮತ್ತು ಚರಂಡಿಗಳು ಉಕ್ಕಿ ಹರಿಯುತ್ತಿವೆ. ಚಂಪಾವತ್ ಜಿಲ್ಲೆಯಲ್ಲಿ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತದಿಂದ ರಸ್ತೆಗಳು ಸಹ ಮುಚ್ಚಿಹೋಗಿವೆ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.