AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೈನಿಕರ ಕಾಲಿಗೆ ಬಿದ್ದು ನಮಸ್ಕರಿಸಿದ ಕಂದಮ್ಮ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಪುಟ್ಟ ಬಾಲಕಿಯೊಬ್ಬಳು ಸೇನಾ ಸಿಬ್ಬಂದಿಯ ಪಾದಗಳನ್ನು ಮುಟ್ಟಿ ಆ ಕೈಗಳನ್ನು ಹಣೆಗೆ ಒತ್ತಿಕೊಂಡ ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದನ್ನು ಸಂಸದ ಪಿ.ಸಿ ಮೋಹನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Viral Video: ಸೈನಿಕರ ಕಾಲಿಗೆ ಬಿದ್ದು ನಮಸ್ಕರಿಸಿದ ಕಂದಮ್ಮ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ
ಸೈನಿಕರ ಕಾಲಿಗೆ ನಮಸ್ಕರಿಸಿದ ಬಾಲಕಿImage Credit source: India Today
TV9 Web
| Edited By: |

Updated on: Jul 16, 2022 | 4:05 PM

Share

ದೇಶ ಕಾಯುವ ಯೋಧರು (Soldiers) ದೇವರಿಗೆ ಸಮ. ಹಗಲಿರುಳೆನ್ನದೇ ದೇಶಕ್ಕಾಗಿ, ದೇಶದ ಜನರಿಗಾಗಿ ದುಡಿಯುವ ಇವರು ನಮ್ಮ ದೇಶದ ರಕ್ಷಕರು. ದೇಶ ಸೇವೆಯೇ ಈಶ ಸೇವೆ ಎಂದು ದೇಶದ ಹಿತಕ್ಕಾಗಿ ಜೀವ ಸವೆಸುವ ಇವರು ಪ್ರಾಣದ ಹಂಗು ತೊರೆದು ದೇಶಸೇವೆಯಲ್ಲಿ ನಿರತರಾಗಿರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋವೊಂದು ವೈರಲ್ ಆಗಿದ್ದು, ಪುಟ್ಟ ಹುಡುಗಿ ಓಡಿಹೋಗಿ ಸೈನಿಕರ ಕಾಲಿಗೆ ನಮಸ್ಕಾರ ಮಾಡುವುದನ್ನು ನೋಡಿ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

ದೇಶ ಸೇವೆಯೇ ಉಸಿರೆಂದು ಬದುಕುತ್ತಿರುವ ಯೋಧರನ್ನು ಕಂಡಾಗ ನಮ್ಮಲ್ಲಿ ಒಂದು ಗೌರವ ಹುಟ್ಟುತ್ತದೆ. ಕೆಲವರು ಅವರನ್ನು ಕಂಡೊಂಡನೆ ಕೈ ಕುಲುಕುವುದು, ಅಭಿನಂದಿಸುವುದು ಮಾಡುತ್ತೇವೆ. ಆದರೆ ಇಲ್ಲೊಂದು ಮಗು ನಿಂತಿದ್ದ ಯೋಧರ ಬಳಿ ಹೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದೆ.

ಪುಟ್ಟ ಬಾಲಕಿಯೊಬ್ಬಳು ಸೇನಾ ಸಿಬ್ಬಂದಿಯ ಪಾದಗಳನ್ನು ಮುಟ್ಟಿ ಆ ಕೈಗಳನ್ನು ಹಣೆಗೆ ಒತ್ತಿಕೊಂಡ ವಿಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದನ್ನು ಸಂಸದ ಪಿ.ಸಿ ಮೋಹನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೂ ಆ್ಯಪ್​ನಲ್ಲಿಯೂ ಈ ವಿಡಿಯೋ ವೈರಲ್ ಆಗಿದ್ದು, ಮಗುವಿಗೆ ಸೈನಿಕರು ದೇವರಂತೆ ಕಂಡಾಗ ಸೈನಿಕರೂ ಆ ಕಂದನನ್ನು ದೇವರಂತೆ ಕಂಡಿರುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್

“ದೇಶಭಕ್ತ ಯುವ ಮನಸ್ಸುಗಳನ್ನು ಬೆಳೆಸುವುದು ಈ ಮಹಾನ್ ರಾಷ್ಟ್ರಕ್ಕೆ ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ” ಎಂದು ಪಿಸಿ ಮೋಹನ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ನೋಡಿದರೆ ನಿಮಗೆ ಅರಿವಿಲ್ಲದಂತೆ ನಿಮ್ಮ ಮುಖದಲ್ಲಿ ನಗು ಮೂಡಿ, ಮನಸು ತುಂಬಿ ಬರುತ್ತದೆ. ಮುಗ್ಧ ಪ್ರೀತಿಯ ದೇವರು ನಮಗೆ ರಕ್ಷಣೆ ನೀಡುವ ದೇವರನ್ನು ಭೇಟಿಯಾದ ಕ್ಷಣ ಎಂದು ಕೂನಲ್ಲಿ ಸುದರ್ಶನ್ ಹಾರ್ನಳ್ಳಿ ಎಂಬುವವರು ಪೋಸ್ಟ್​ ಮಾಡಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಸೇನಾ ಸಿಬ್ಬಂದಿಯ ಬಳಿಗೆ ಹೋಗುತ್ತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಅವಳ ಕೆನ್ನೆಗಳನ್ನು ಮುಟ್ಟಲು ಬಾಗುತ್ತಾರೆ. ಆಗ ಆಕೆ ಕೆಳಗೆ ಬಗ್ಗಿ ಅವರ ಕಾಲನ್ನು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಆ ಹುಡುಗಿಯ ಈ ಮುದ್ದಾದ ವರ್ತನೆಯಿಂದ ಸೈನಿಕರು ಅಚ್ಚರಿಯಿಂದ ನಗುತ್ತಾರೆ.

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!