Viral Video: ಗರ್ಲ್​ಫ್ರೆಂಡ್​ ಜೊತೆ ಇದ್ದಾಗ ಹೆಂಡತಿ ಕೈಗೆ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ; ಆ ಯುವತಿ ಯಾರು?

| Updated By: ಸುಷ್ಮಾ ಚಕ್ರೆ

Updated on: Jun 04, 2022 | 12:17 PM

ತಮ್ಮ ಅಕ್ರಮ ಸಂಬಂಧದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಜುಗರಕ್ಕೀಡಾಗಿರುವ ಮಾಜಿ ಸಚಿವ ಭರತ್‌ಸಿನ್ಹ್ ಸೋಲಂಕಿ ಕೆಲವು ತಿಂಗಳುಗಳವರೆಗೆ ಸಕ್ರಿಯ ರಾಜಕೀಯದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

Viral Video: ಗರ್ಲ್​ಫ್ರೆಂಡ್​ ಜೊತೆ ಇದ್ದಾಗ ಹೆಂಡತಿ ಕೈಗೆ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ; ಆ ಯುವತಿ ಯಾರು?
ಭರತ್ ಸೋಲಂಕಿ
Image Credit source: Hindustan Times
Follow us on

ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕ ಭರತ್‌ಸಿನ್ಹ್ ಸೋಲಂಕಿ ( Bharatsinh Solanki) ತನ್ನ ಗರ್ಲ್​ಫ್ರೆಂಡ್ ಜೊತೆ ಇದ್ದಾಗ ಹೆಂಡತಿಯ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಮನೆಯೊಂದರಲ್ಲಿ ತನ್ನ ಗರ್ಲ್​ಫ್ರೆಂಡ್ ಜೊತೆಗೆ ಇದ್ದ ಭರತ್​ಸಿನ್ಹ್ ಸೋಲಂಕಿ ಅವರಿದ್ದ ಮನೆಗೆ ಬಂದ ಅವರ ಹೆಂಡತಿ ತನ್ನ ಗಂಡನ ಜೊತೆಗಿದ್ದ ಯುವತಿಯ ಕೂದಲು ಹಿಡಿದು ಎಳೆದಾಡಿ, ಬಾಯಿಗೆ ಬಂದಂತೆ ಬೈದಿರುವ ವಿಡಿಯೋ (Video Viral) ಇದೀಗ ವೈರಲ್ ಆಗಿದೆ.

ತಮ್ಮ ಅಕ್ರಮ ಸಂಬಂಧದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಜುಗರಕ್ಕೀಡಾಗಿರುವ ಮಾಜಿ ಸಚಿವ ಭರತ್‌ಸಿನ್ಹ್ ಸೋಲಂಕಿ ಕೆಲವು ತಿಂಗಳುಗಳವರೆಗೆ ಸಕ್ರಿಯ ರಾಜಕೀಯದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ. (Source)

1999ರಲ್ಲಿ ರೇಷ್ಮಾ ಪಟೇಲ್ ಜೊತೆಗೆ ಭರತ್‌ಸಿನ್ಹ್ ಸೋಲಂಕಿ ಮದುವೆಯಾಗಿದ್ದರು. ರೇಷ್ಮಾ ವಿರುದ್ಧ ಹಲವಾರು ಆರೋಪಗಳನ್ನು ಮಾಡಿರುವ ಭರತ್‌ಸಿನ್ಹ್ ಸೋಲಂಕಿ, “ನಾವು ಅನೇಕ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ. ನನ್ನ ಆಸ್ತಿಯನ್ನು ಕಸಿದುಕೊಳ್ಳಲು, ನನ್ನ ಮರ್ಯಾದೆಗೆ ಹಾನಿ ಮಾಡಲು ಪ್ರಯತ್ನಿಸಿದ್ದರಿಂದ ನಾನು ವಿಚ್ಛೇದನವನ್ನು ಕೋರುತ್ತಿದ್ದೇನೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ನನ್ನ ವಿಚ್ಛೇದನದ ಅರ್ಜಿಯನ್ನು ಜೂನ್ 15ರಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಭರತ್‌ಸಿನ್ಹ್ ಸೋಲಂಕಿ ಹೇಳಿದ್ದಾರೆ. ನನ್ನ ಹೆಂಡತಿ ನನ್ನ ಪ್ರಾಣವನ್ನು ತೆಗೆಯಲು ಮಾಂತ್ರಿಕನನ್ನು ಸಂಪರ್ಕಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Viral Video: 2 ಕಿ.ಮೀ. ದೂರದ ಅಪ್ಪನ ಆಫೀಸಿಗೆ ಊಟದ ಬಾಕ್ಸ್ ತೆಗೆದುಕೊಂಡು ಹೋಗುತ್ತೆ ಈ ನಾಯಿ; ವಿಡಿಯೋ ವೈರಲ್

ಭರತ್ ಸೋಲಂಕಿ ತಮ್ಮ ಗರ್ಲ್​ಫ್ರೆಂಡ್ ಜೊತೆಗಿದ್ದ ವೇಳೆ ಮನೆಯೊಳಗೆ ನುಗ್ಗಿದ ಅವರ ಪತ್ನಿ ರೇಷ್ಮಾ ಪಟೇಲ್ ತ್ಮ ಗಂಡ ಮತ್ತು ಆ ಯುವತಿಯ ಮೈಚಳಿ ಬಿಡಿಸಿರುವ ಕೆಲವು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗಳು ಕೋಲಾಹಲವನ್ನು ಸೃಷ್ಟಿಸಿವೆ. ಜೂನ್ 1ರಂದು ರೇಷ್ಮಾ ಪಟೇಲ್ ಮನೆಯೊಂದರ ಒಳಗೆ ಹೋದಾಗ ಅಲ್ಲಿ ಯುವತಿಯೊಬ್ಬರು ಸೋಲಂಕಿಯೊಂದಿಗೆ ಕುಳಿತಿದ್ದರು. ಇದರಿಂದ ಕೋಪಗೊಂಡ ರೇಷ್ಮಾ ಪಟೇಲ್ ಆ ಯುವತಿಯ ಮೇಲೆ ಹಲ್ಲೆ ನಡೆಸಿದ್ದು, ಇಡೀ ಸಂಚಿಕೆಯನ್ನು ವಿಡಿಯೋ ಮಾಡಲಾಗಿದೆ.

ಈ ವೇಳೆ ಆ ಮನೆಯಲ್ಲಿದ್ದ ಯುವತಿ ತನ್ನ ಮುಖ ಕಾಣದಂತೆ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ರೇಷ್ಮಾ ಆಕೆಯ ಕೂದಲನ್ನು ಹಿಡಿದು ಎಳೆದಾಡಿ, ಬೈದಿದ್ದಾರೆ. 68 ವರ್ಷದ ಭರತ್‌ಸಿನ್ಹ್ ಸೋಲಂಕಿ ತನ್ನ ಜೊತೆಗಿದ್ದ ಯುವತಿಯ ಗುರುತನ್ನು ಬಹಿರಂಗಪಡಿಸಿದ್ದಾರೆ. ರೇಷ್ಮಾಗೆ ಡೈವೋರ್ಸ್​ ನೀಡಿದ ನಂತರ ನಾನು ಆಕೆಯನ್ನೇ ಮದುವೆಯಾಗಲಿದ್ದೇನೆ. ಇದು ನನ್ನ ಮೂರನೇ ಮದುವೆಯಾಗಲಿದೆ ಎಂದು ಹೇಳಿದ್ದಾರೆ.

‘ಕೆಲವು ತಿಂಗಳುಗಳ ಕಾಲ ಸಕ್ರಿಯ ರಾಜಕಾರಣದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಮತ್ತು ಸಾಮಾಜಿಕ ಚಟುವಟಿಕೆಗಳತ್ತ ಗಮನ ಹರಿಸುತ್ತೇನೆ. ಈ ಅವಧಿಯಲ್ಲಿ ದಲಿತರು, ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ಸಮುದಾಯಗಳ ಜನರನ್ನು ಭೇಟಿಯಾಗಲು ಹೆಚ್ಚು ಸಮಯ ಕಳೆಯುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Sat, 4 June 22