Viral Video: ಹೊಸ ವರ್ಷಕ್ಕೆ ಬಂದೂಕಿನಿಂದ ಗುಂಡು ಹಾರಿಸಿ ನೃತ್ಯ ಮಾಡಿದ ಕಾಂಗ್ರೆಸ್ ಶಾಸಕ; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Jan 02, 2023 | 3:51 PM

ವೈರಲ್ ಆಗಿರುವ ವೀಡಿಯೊದಲ್ಲಿ ಶಾಸಕ ಸುನೀಲ್ ಸರಾಫ್ ಅವರು ವೇದಿಕೆಯಲ್ಲಿ ಇತರ ನಾಲ್ವರ ಜೊತೆ ನೃತ್ಯ ಮಾಡುವಾಗ ಕೈಯಲ್ಲಿ ಬಂದೂಕನ್ನು ಹಿಡಿದಿರುವುದನ್ನು ಕಾಣಬಹುದು.

Viral Video: ಹೊಸ ವರ್ಷಕ್ಕೆ ಬಂದೂಕಿನಿಂದ ಗುಂಡು ಹಾರಿಸಿ ನೃತ್ಯ ಮಾಡಿದ ಕಾಂಗ್ರೆಸ್ ಶಾಸಕ; ವಿಡಿಯೋ ವೈರಲ್
ಶಾಸಕ ಸುನಿಲ್ ಸರಾಫ್ ನೃತ್ಯ ಮಾಡುತ್ತಿರುವುದು
Follow us on

ಪಾಟ್ನಾ: ಮಧ್ಯಪ್ರದೇಶದಲ್ಲಿ ಕೋಟ್ಮಾದ ಕಾಂಗ್ರೆಸ್ ಶಾಸಕ (Congress MLA) ಖಾಸಗಿ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಬಂದೂಕು ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಶಾಸಕ ಸುನೀಲ್ ಸರಾಫ್ (Suneel Saraf) ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ ಶಾಸಕ ಸುನೀಲ್ ಸರಾಫ್ ಅವರು ವೇದಿಕೆಯಲ್ಲಿ ಇತರ ನಾಲ್ವರ ಜೊತೆ ನೃತ್ಯ ಮಾಡುವಾಗ ಕೈಯಲ್ಲಿ ಬಂದೂಕನ್ನು ಹಿಡಿದಿರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕಾಂಗ್ರೆಸ್ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನುಪ್ಪುರ್ ಎಸ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೇಕಾಫ್ ಮಾಡುವಾಗ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್​ನ ವಿಡಿಯೋ ವೈರಲ್

ಅಕ್ಟೋಬರ್‌ನಲ್ಲಿ ರೇವಾಂಚಲ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಸುನೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನ ಪತಿ ಮತ್ತು 7 ತಿಂಗಳ ಮಗುವಿನೊಂದಿಗೆ ರೇವಾದಿಂದ ಭೋಪಾಲ್‌ಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಸುನೀಲ್ ಸರಾಫ್ ಮತ್ತು ಇನ್ನೊಬ್ಬ ಶಾಸಕ ಕಿರುಕುಳ ನೀಡಿದ್ದರು. ಆಗ ಸುನೀಲ್ ಕಂಠಪೂರ್ತಿ ಕುಡಿದಿದ್ದರು.

ಆ ಮಹಿಳೆಯ ಪತಿ ನಂತರ ಟ್ವಿಟ್ಟರ್‌ನಲ್ಲಿ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರು. ಅದನ್ನು ನೋಡಿದ ಸಾಗರ್‌ನಲ್ಲಿನ ರೈಲ್ವೆ ಪೊಲೀಸರು ರೈಲು ಹತ್ತಿ ಆಕೆಗೆ ಸಹಾಯ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ