Bhagwant Mann: ಪಂಜಾಬ್ ಸಿಎಂ ನಿವಾಸದ ಬಳಿ ಬಾಂಬ್ ಪತ್ತೆ, ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ
ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು ಸ್ಫೋಟಕ ಸಾಧನ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ.
ಚಂಡೀಗಢ: ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು ಸ್ಫೋಟಕ ಸಾಧನ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಸಿಎಂ ಹೌಸ್‌ನ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಯಿತು.
ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದಿದ್ದು, ಚಂಡೀಗಢ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಕೂಡ ತನಿಖೆಗೆ ನಡೆಸಿದೆ. ಸಂಜೆ 4.30ರ ಸುಮಾರಿಗೆ ಕೊಳವೆಬಾವಿ ನಿರ್ವಾಹಕರೊಬ್ಬರು ಪಂಜಾಬ್ ಮುಖ್ಯಮಂತ್ರಿಯವರ ಹೆಲಿಪ್ಯಾಡ್ ಮತ್ತು ನಿವಾಸದ ಬಳಿಯಿರುವ ಮಾವಿನ ತೋಟದಲ್ಲಿ ಬಾಂಬ್ನ್ನು ಗುರುತಿಸಿದ್ದಾರೆ. ಭಗವಂತ್ ಮಾನ್ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಅವರು ನಿವಾಸ ಇದೆ.
ಇದನ್ನು ಓದಿ: Bhagwant Mann: ಪಂಜಾಬ್ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್ ಪಾಲಿಗೆ; ಮುಂದಿನ ಸಿಎಂ ಭಗವಂತ್ ಮಾನ್ ರಾಜಕೀಯ ಜರ್ನಿ ಹೀಗಿತ್ತು
ಸಜೀವ ಬಾಂಬ್ ಪತ್ತೆಯಾಗಿದೆ. ಇದನ್ನು ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ವಶಪಡಿಸಿಕೊಳ್ಳಲಾಗಿದೆ. ಸೇನಾ ತಂಡವನ್ನು ಕರೆಸಲಾಗಿದೆ. ಪ್ರದೇಶವನ್ನು ಸುತ್ತುವರಿಯಲಾಗುತ್ತಿದೆ ಎಂದು ಚಂಡೀಗಢದ ಡಯಾಸೆಟರ್ ಮ್ಯಾನೇಜ್‌ಮೆಂಟ್‌ನ ನೋಡಲ್ ಅಧಿಕಾರಿ ಸಂಜೀವ್ ಕೊಹ್ಲಿಯನ್ನು ಎಎನ್‌ಐಗೆ ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Mon, 2 January 23