Viral Video: ದೇವಸ್ಥಾನದಲ್ಲಿ ‘ಮುನ್ನಿ ಬದ್ನಾಂ’ ಹಾಡಿಗೆ ರೀಲ್ಸ್ ಮಾಡಿದ ಯುವತಿಯ ಮೇಲೆ ಎಫ್‌ಐಆರ್
ರಾಜ್ಯದ ಛತ್ತರ್‌ಪುರ ಜಿಲ್ಲೆಯ ದೇವಸ್ಥಾನವೊಂದರ ಆವರಣದಲ್ಲಿ ನೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುವತಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ಮಧ್ಯಪ್ರದೇಶ: ರಾಜ್ಯದ ಛತ್ತರ್‌ಪುರ ಜಿಲ್ಲೆಯ ದೇವಸ್ಥಾನವೊಂದರ ಆವರಣದಲ್ಲಿ ನೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುವತಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ಅಕ್ಟೋಬರ್ 1 ರಂದು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಯುವತಿ ನೇಹಾ, ಕೆಲವು ಬಜರಂಗದಳ ಸದಸ್ಯರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ನಂತರ ಅದನ್ನು ಆಕೆ ಅಳಿಸಿ ಕ್ಷಮೆಯಾಚಿಸಿದ್ದಾರೆ.
ಬಾಲಿವುಡ್‌ನ ಹಿಟ್ ಹಾಡು “ಮುನ್ನಿ ಬದ್ನಾಮ್ ಹುಯಿ” ಟ್ಯೂನ್‌ಗೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ರೀಲ್ ಚಿತ್ರೀಕರಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ನೇಹಾ ಡ್ರೆಸ್ ಮಾಡಿಕೊಂಡ ರೀತಿ ಮತ್ತು ವಿಡಿಯೋ ಚಿತ್ರೀಕರಣ ಆಕ್ಷೇಪಾರ್ಹವಾಗಿತ್ತು. ನಾನು ಈ ಹಿಂದೆ ಇಂತಹ ಘಟನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದೆ ಮತ್ತು ಅಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದರು. ಎಚ್ಚರಿಕೆಯ ಹೊರತಾಗಿಯೂ ಅವರು ಇದನ್ನು ಮಾಡಿದ್ದಾರೆ ಎಂದು ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.
View this post on Instagram
ಅವಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಾನು ಛತ್ತರ್‌ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಸರ್ಕಾರದ ಗೃಹ ಸಚಿವರು ಹೇಳಿದರು. ಬಜರಂಗದಳದ ಕಾರ್ಯಕರ್ತರ ಆಕ್ಷೇಪದ ನಂತರ, ಮಹಿಳೆ ಡ್ಯಾನ್ಸ್ ರೀಲ್ ಅನ್ನು ಅಳಿಸಿ ಹೊಸ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆ ಕೇಳುವೇ ಎಂದು ಹೇಳಿದ್ದಾರೆ.
Published On - 4:27 pm, Tue, 4 October 22