Viral Video: 5 ರೂ.ಗಾಗಿ ಹಣ್ಣಿನ ವ್ಯಾಪಾರಿಗೆ ಥಳಿಸಿದ ಯುವಕರು; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Jan 19, 2023 | 12:30 PM

ಅಮಿತ್ ಎಂಬ ಯುವಕ ಅಜಯನ ಹಣ್ಣಿನ ಅಂಗಡಿಗೆ ಬಂದು ಸೇಬಿನ ಬೆಲೆಯನ್ನು ಕೇಳಿದರು. ಅಜಯ್ 1 ಕೆಜಿಗೆ 90 ರೂ. ಎಂದು ಹೇಳಿದರು. ಆದರೆ, ಅಮಿತ್ ಕೆಜಿಗೆ 85 ರೂ. ನೀಡುವುದಾಗಿ ಹೇಳಿದರು. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಶುರುವಾಯಿತು.

Viral Video: 5 ರೂ.ಗಾಗಿ ಹಣ್ಣಿನ ವ್ಯಾಪಾರಿಗೆ ಥಳಿಸಿದ ಯುವಕರು; ವಿಡಿಯೋ ವೈರಲ್
ಹಣ್ಣಿನ ವ್ಯಾಪಾರಿಗೆ ಥಳಿಸುತ್ತಿರುವ ಯುವಕರು
Image Credit source: India.com
Follow us on

ನೊಯ್ಡಾ: ನೊಯ್ಡಾದಲ್ಲಿ (Noida) ಕೇವಲ 5 ರೂ. ಹಣಕ್ಕಾಗಿ ನಡೆದ ಗಲಾಟೆ ದೊಡ್ಡದಾಗಿ ಯುವಕರೆಲ್ಲ ಸೇರಿ ಹಣ್ಣಿನ ವ್ಯಾಪಾರಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಯುವಕರು ಹಣ್ಣಿನ ವ್ಯಾಪಾರಿಯನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಜನವರಿ 16ರ ಸಂಜೆ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೇಬು ಹಣ್ಣು ಖರೀದಿಸಲು ಬಂದ ಯುವಕರು ಸೇಬಿನ ಬೆಲೆಗೆ ಸಂಬಂಧಿಸಿದಂತೆ ಹಣ್ಣು ವ್ಯಾಪಾರಿಯ ಜೊತೆ ಜಗಳವಾಡಿದ್ದಾರೆ.

ಅಜಯ್ ಎಂಬಾತ ಹಣ್ಣು ಮಾರಾಟಗಾರನಾಗಿದ್ದು, ಹರೌಲಾ ಮಂಡಿಯಲ್ಲಿ ಅಂಗಡಿ ನಡೆಸುತ್ತಿದ್ದಾನೆ. ಸೋಮವಾರ ಅಮಿತ್ ಎಂಬ ಯುವಕ ಅವರ ಅಂಗಡಿಗೆ ಬಂದು ಸೇಬಿನ ಬೆಲೆಯನ್ನು ಕೇಳಿದರು. ಅಜಯ್ 1 ಕೆಜಿಗೆ 90 ರೂ. ಎಂದು ಹೇಳಿದರು. ಆದರೆ, ಅಮಿತ್ ಕೆಜಿಗೆ 85 ರೂ. ನೀಡುವುದಾಗಿ ಹೇಳಿದರು. ಬಳಿಕ ಇಬ್ಬರ ನಡುವೆ ಇದೇ ವಿಷಯಕ್ಕೆ ವಾಗ್ವಾದ ನಡೆದಿದೆ. 5 ರೂ. ಕಡಿಮೆ ಮಾಡಲು ಒಪ್ಪದ ಅಜಯ್ ಮೇಲೆ ಕೋಪಗೊಂಡ ಅಮಿತ್ ತನ್ನ ಸ್ನೇಹಿತನ ಜೊತೆ ಸೇರಿ ಅಜಯ್​ಗೆ ಥಳಿಸಿದ್ದಾನೆ.

ಇದನ್ನೂ ಓದಿ: ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಅಲ್ಲಿದ್ದ ಕೆಲವು ಹುಡುಗರು ಈ ಗಲಾಟೆಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಮಧ್ಯಪ್ರವೇಶಿಸಲು ಬಂದ ವ್ಯಕ್ತಿಗೂ ಅಮಿತ್ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ