ಜಿಮ್‌ ಸೆಂಟರ್​​ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕುಸಿದು ಬಿದ್ದು 67 ವರ್ಷದ ವ್ಯಕ್ತಿ ಸಾವು

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಪಟ್ಟಣದ 67 ವರ್ಷದ ವ್ಯಕ್ತಿಯೊಬ್ಬರು ಜಿಮ್‌ ಸೆಂಟರ್​​ನಲ್ಲಿ ನಿನ್ನೆ (ಜ.18) ವ್ಯಾಯಾಮ ಮಾಡುವಾಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಮ್‌ ಸೆಂಟರ್​​ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕುಸಿದು ಬಿದ್ದು 67 ವರ್ಷದ ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ Image Credit source: NDTV
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 19, 2023 | 12:17 PM

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಪಟ್ಟಣದ 67 ವರ್ಷದ ವ್ಯಕ್ತಿಯೊಬ್ಬರು ಜಿಮ್‌ ಸೆಂಟರ್​​ನಲ್ಲಿ ನಿನ್ನೆ (ಜ.18) ವ್ಯಾಯಾಮ ಮಾಡುವಾಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಪ್ರಲ್ಹಾದ್ ನಿಕಮ್ ಎಂದು ಗುರುತಿಸಲಾಗಿದೆ. ಪ್ರಲ್ಹಾದ್ ನಿಕಮ್ ಅವರು ರಾತ್ರಿ 7.30 ರ ಸುಮಾರಿಗೆ ಜಿಮ್‌ ಸೆಂಟರ್​ನಲ್ಲಿ ತಮ್ಮ ಪ್ರತಿದಿನದ ವ್ಯಾಯಾಮವನ್ನು ಮಾಡುತ್ತಿದ್ದಾಗ ತಲೆತಿರುಗಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ:Heart Attack Symptoms: ಕೇವಲ ಎದೆನೋವು ಮಾತ್ರವಲ್ಲ ಹೃದಯಾಘಾತದ ಈ ಲಕ್ಷಣಗಳ ಬಗ್ಗೆಯೂ ಎಚ್ಚರವಿರಲಿ

ಇವರನ್ನು ಮಹಾರಾಷ್ಟ್ರದ ವ್ಯಕ್ತಿ ಎಂದು ಹೇಳಲಾಗಿದೆ. 67 ವರ್ಷದ ಪ್ರಲ್ಹಾದ್ ನಿಕಮ್ ಅವರು ಜಿಮ್‌ ಸೆಂಟರ್​ನಲ್ಲಿ ವ್ಯಾಯಾಮ ಮಾಡುವ ಸಮಯದಲ್ಲಿ ಕುಸಿದು ಬಿದ್ದಿದ್ದಾರೆ, ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ವೈದ್ಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ  ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯ ಸ್ತಂಭನ

ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯ ಸ್ತಂಭನ ಉಂಟಾಗಿ ಕುಸಿದುಬಿದ್ದಿದ್ದರು. ಇದನ್ನು ಕಂಡು ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಚಿಕತ್ಸೆ ನೀಡಿ ಅವರನ್ನು ಕಾಪಾಡಿದ್ದಾರೆ. ಭಾರತಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯ ಸ್ತಂಭ ಉಂಟಾಗಿ ತಾನು ಬದುಕಿದ ಬಗ್ಗೆ ವಿವರಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ.ವಿಶ್ವರಾಜ್ ವೇಮಲಾ ಅವರು ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದುಬಿದ್ದರು. ವಿಮಾನದಲ್ಲಿದ್ದ ವೈದ್ಯಕೀಯ ಸಾಮಗ್ರಿಗಳು ಹಾಗೂ ಅವರ ಜೊತೆಗೆ ಇದ್ದ ವೈದ್ಯಕೀಯ ಪರಿಕರಗಳ ನೆರವಿನಿಂದ, ಡಾ ವೇಮಲಾ ತನ್ನ ಸಹ ಪ್ರಯಾಣಿಕರಿಗೆ ಎರಡು ಬಾರಿ ಚಿಕಿತ್ಸೆ ನೀಡಿ ಅವರ ಜೀವನ ಉಳಿಸಿದ್ದಾರೆ. ಈ ಬಗ್ಗೆ ಹೃದಯಾಘಾತವಾದ ವ್ಯಕ್ತಿ ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ