Raghuram Rajan on Rahul Gandhi: ರಾಹುಲ್ ಗಾಂಧಿ ಪಪ್ಪು ಅಲ್ಲ, ಬುದ್ಧಿವಂತ; ರಘುರಾಮ್ ರಾಜನ್ ಮೆಚ್ಚುಗೆ

ರಾಹುಲ್ ಬಹಳ ಬುದ್ಧಿವಂತ. ಅವರನ್ನು ಪಪ್ಪು ಎಂದು ಬಿಂಬಿಸಿರುವುದು ದುರದೃಷ್ಟಕರ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

Raghuram Rajan on Rahul Gandhi: ರಾಹುಲ್ ಗಾಂಧಿ ಪಪ್ಪು ಅಲ್ಲ, ಬುದ್ಧಿವಂತ; ರಘುರಾಮ್ ರಾಜನ್ ಮೆಚ್ಚುಗೆ
ರಾಹುಲ್ ಗಾಂಧಿ ಜೊತೆ ರಘುರಾಮ್ ರಾಜನ್Image Credit source: Twitter
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 19, 2023 | 11:03 AM

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಕೂಡ ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿಯ (Rahul Gandhi) ಕುರಿತು ಮಾತನಾಡಿರುವ ಅವರು, ರಾಹುಲ್ ಗಾಂಧಿ ಯಾವುದೇ ರೀತಿಯಲ್ಲೂ “ಪಪ್ಪು” (ಮೂರ್ಖ) ಅಲ್ಲ. ಅವರು ಬಹಳ ಬುದ್ಧಿವಂತ ವ್ಯಕ್ತಿ. ಅವರನ್ನು ಸಾರ್ವಜನಿಕವಾಗಿ ಮೂರ್ಖನಂತೆ ಬಿಂಬಿಸಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.

ಸಾರ್ವಜನಿಕವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ರಾಜಕೀಯ ಪಯಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್, ರಾಹುಲ್ ಬಹಳ ಬುದ್ಧಿವಂತ. ಅವರನ್ನು ಪಪ್ಪು ಎಂದು ಬಿಂಬಿಸಿರುವುದು ದುರದೃಷ್ಟಕರ ಎಂದು ನಾನು ಭಾವಿಸುತ್ತೇನೆ. ನಾನು ಅವರೊಂದಿಗೆ 1 ದಶಕದಿಂದ ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ಯಾವುದೇ ರೀತಿಯಲ್ಲಿಯೂ ಪಪ್ಪು ಅಲ್ಲ. ಅವರು ಬುದ್ಧಿವಂತ ವ್ಯಕ್ತಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತಾ ವೈಫಲ್ಯ; ಓಡಿಬಂದು ರಾಹುಲ್ ಗಾಂಧಿಯನ್ನು ತಬ್ಬಿಕೊಂಡ ಯುವಕ

ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ವಯನಾಡ್ ಸಂಸದ ರಾಹುಲ್ ಗಾಂಧಿ ಜೊತೆ ರಘುರಾಮ್ ರಾಜನ್ ಹೆಜ್ಜೆ ಹಾಕಿದ್ದರು.

ಕೇಂದ್ರ ಸರ್ಕಾರದ ನೀತಿ ನಿರೂಪಕರ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ರಘುರಾಮ್ ರಾಜನ್, 2023 ಭಾರತೀಯ ಆರ್ಥಿಕತೆಗೆ ಮತ್ತು ಪ್ರಪಂಚದ ಇತರ ಭಾಗಗಳಿಗೆ ಕಷ್ಟಕರವಾಗಿರುತ್ತದೆ. ನಮ್ಮ ದೇಶವು ಬೆಳವಣಿಗೆಗೆ ಅಗತ್ಯವಾದ ಸುಧಾರಣೆಗಳನ್ನು ರಚಿಸಲು ವಿಫಲವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ವರುಣ್ ಗಾಂಧಿಯವರ ಸಿದ್ಧಾಂತ ಬೇರೆ, ಅದನ್ನು ಒಪ್ಪಲಾರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಭಾರತವು ಈಗಾಗಲೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ಪರಿಸ್ಥಿತಿಯು ಮುಂದೆ ಬದಲಾಗಬಹುದು. ಭಾರತ ಬೆಳೆಯುತ್ತಿದೆ ಮತ್ತು ತನ್ನನ್ನು ವಿಸ್ತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ