Viral Video: 5 ರೂ.ಗಾಗಿ ಹಣ್ಣಿನ ವ್ಯಾಪಾರಿಗೆ ಥಳಿಸಿದ ಯುವಕರು; ವಿಡಿಯೋ ವೈರಲ್
ಅಮಿತ್ ಎಂಬ ಯುವಕ ಅಜಯನ ಹಣ್ಣಿನ ಅಂಗಡಿಗೆ ಬಂದು ಸೇಬಿನ ಬೆಲೆಯನ್ನು ಕೇಳಿದರು. ಅಜಯ್ 1 ಕೆಜಿಗೆ 90 ರೂ. ಎಂದು ಹೇಳಿದರು. ಆದರೆ, ಅಮಿತ್ ಕೆಜಿಗೆ 85 ರೂ. ನೀಡುವುದಾಗಿ ಹೇಳಿದರು. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಶುರುವಾಯಿತು.
ನೊಯ್ಡಾ: ನೊಯ್ಡಾದಲ್ಲಿ (Noida) ಕೇವಲ 5 ರೂ. ಹಣಕ್ಕಾಗಿ ನಡೆದ ಗಲಾಟೆ ದೊಡ್ಡದಾಗಿ ಯುವಕರೆಲ್ಲ ಸೇರಿ ಹಣ್ಣಿನ ವ್ಯಾಪಾರಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಯುವಕರು ಹಣ್ಣಿನ ವ್ಯಾಪಾರಿಯನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಜನವರಿ 16ರ ಸಂಜೆ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೇಬು ಹಣ್ಣು ಖರೀದಿಸಲು ಬಂದ ಯುವಕರು ಸೇಬಿನ ಬೆಲೆಗೆ ಸಂಬಂಧಿಸಿದಂತೆ ಹಣ್ಣು ವ್ಯಾಪಾರಿಯ ಜೊತೆ ಜಗಳವಾಡಿದ್ದಾರೆ.
ಅಜಯ್ ಎಂಬಾತ ಹಣ್ಣು ಮಾರಾಟಗಾರನಾಗಿದ್ದು, ಹರೌಲಾ ಮಂಡಿಯಲ್ಲಿ ಅಂಗಡಿ ನಡೆಸುತ್ತಿದ್ದಾನೆ. ಸೋಮವಾರ ಅಮಿತ್ ಎಂಬ ಯುವಕ ಅವರ ಅಂಗಡಿಗೆ ಬಂದು ಸೇಬಿನ ಬೆಲೆಯನ್ನು ಕೇಳಿದರು. ಅಜಯ್ 1 ಕೆಜಿಗೆ 90 ರೂ. ಎಂದು ಹೇಳಿದರು. ಆದರೆ, ಅಮಿತ್ ಕೆಜಿಗೆ 85 ರೂ. ನೀಡುವುದಾಗಿ ಹೇಳಿದರು. ಬಳಿಕ ಇಬ್ಬರ ನಡುವೆ ಇದೇ ವಿಷಯಕ್ಕೆ ವಾಗ್ವಾದ ನಡೆದಿದೆ. 5 ರೂ. ಕಡಿಮೆ ಮಾಡಲು ಒಪ್ಪದ ಅಜಯ್ ಮೇಲೆ ಕೋಪಗೊಂಡ ಅಮಿತ್ ತನ್ನ ಸ್ನೇಹಿತನ ಜೊತೆ ಸೇರಿ ಅಜಯ್ಗೆ ಥಳಿಸಿದ್ದಾನೆ.
नोएडा में सुरक्षा व्यवस्था कैसी है कि इस वीडियो से पता चलता है थाना फ़ेज 1 से चंद कदमों की दूरी पर गुंडा गर्दी पुलिस का कोई ख़ौफ़ नहीं @noidapolice @dgpup @DCP_Noida pic.twitter.com/GDvCEGUcqw
— Mohd Imran (@ImranJaihind) January 17, 2023
ಇದನ್ನೂ ಓದಿ: ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ
ಅಲ್ಲಿದ್ದ ಕೆಲವು ಹುಡುಗರು ಈ ಗಲಾಟೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಮಧ್ಯಪ್ರವೇಶಿಸಲು ಬಂದ ವ್ಯಕ್ತಿಗೂ ಅಮಿತ್ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಬಂಧಿಸಿದ್ದಾರೆ.