AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಸುದ್ದಿಗಳನ್ನು ಕೇಂದ್ರ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ: ಐಟಿ ನಿಯಮಗಳ ತಿದ್ದುಪಡಿ ಬಗ್ಗೆ ಎಡಿಟರ್ಸ್ ಗಿಲ್ಡ್

ಈ ಹೊಸ ತಿದ್ದುಪಡಿಯನ್ನು ತೆಗೆದುಹಾಕಲು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸದಂತೆ ಡಿಜಿಟಲ್ ಮಾಧ್ಯಮದ ನಿಯಂತ್ರಕ ಚೌಕಟ್ಟಿನ ಕುರಿತು ಪತ್ರಿಕಾ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಅರ್ಥಪೂರ್ಣ ಸಮಾಲೋಚನೆಗಳನ್ನು ಪ್ರಾರಂಭಿಸಲು ಗಿಲ್ಡ್, ಸಚಿವಾಲಯವನ್ನು ಒತ್ತಾಯಿಸುತ್ತದೆ

ನಕಲಿ ಸುದ್ದಿಗಳನ್ನು ಕೇಂದ್ರ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ: ಐಟಿ ನಿಯಮಗಳ ತಿದ್ದುಪಡಿ ಬಗ್ಗೆ ಎಡಿಟರ್ಸ್ ಗಿಲ್ಡ್
ಎಡಿಟರ್ಸ್ ಗಿಲ್ಡ್Image Credit source: www.exchange4media.com
TV9 Web
| Edited By: |

Updated on: Jan 19, 2023 | 1:58 PM

Share

ದೆಹಲಿ: ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB)ಯಿಂದ ಫೇಕ್ (Fake) ಎಂದು ಪರಿಗಣಿಸಲಾದ ಸುದ್ದಿ ಲೇಖನಗಳನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಕೇಳುವ ಐಟಿ ನಿಯಮಗಳಿಗೆ ಕರಡು ತಿದ್ದುಪಡಿಯನ್ನು ತೆಗೆದುಹಾಕಲು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (Editors Guild of India) ಸರ್ಕಾರವನ್ನು ಒತ್ತಾಯಿಸಿದೆ. ಈ ಹೊಸ ತಿದ್ದುಪಡಿಯನ್ನು ತೆಗೆದುಹಾಕಲು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸದಂತೆ ಡಿಜಿಟಲ್ ಮಾಧ್ಯಮದ ನಿಯಂತ್ರಕ ಚೌಕಟ್ಟಿನ ಕುರಿತು ಪತ್ರಿಕಾ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಅರ್ಥಪೂರ್ಣ ಸಮಾಲೋಚನೆಗಳನ್ನು ಪ್ರಾರಂಭಿಸಲು ಗಿಲ್ಡ್, ಸಚಿವಾಲಯವನ್ನು ಒತ್ತಾಯಿಸುತ್ತದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ. ನಕಲಿ ಸುದ್ದಿಗಳ ನಿರ್ಣಯವು ಸರ್ಕಾರದ ಕೈಯಲ್ಲಿ ಮಾತ್ರ ಇರಬಾರದು. ಇದು ಪತ್ರಿಕಾ ಸೆನ್ಸಾರ್​​ಶಿಪ್​ಗೆ ಕಾರಣವಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ನಿಯಮದ ಕರಡು ತಿದ್ದುಪಡಿಯ ಬಗ್ಗೆ ಗಿಲ್ಡ್  ಕಳವಳ ವ್ಯಕ್ತಪಡಿಸಿದೆ.

ವಾಸ್ತವಿಕವಾಗಿ ತಪ್ಪಾಗಿರುವ ವಿಷಯವನ್ನು ಎದುರಿಸಲು ಈಗಾಗಲೇ ಅನೇಕ ಕಾನೂನುಗಳು ಅಸ್ತಿತ್ವದಲ್ಲಿವೆ ಎಂದು ಅದು ಹೇಳಿದೆ. “ಈ ಹೊಸ ಕಾರ್ಯವಿಧಾನವು ಮೂಲಭೂತವಾಗಿ ಮುಕ್ತ ಮುದ್ರಣವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. PIB ಗೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ, ಅಥವಾ ಯಾವುದೇ ಫ್ಯಾಕ್ಟ್ ಚೆಕಿಂಗ್​​​ಗಾಗಿ ಕೇಂದ್ರ ಸರ್ಕಾರದಿಂದ ಅಧಿಕಾರ ಹೊಂದಿರುವ ಯಾವುದೇ ಸಂಸ್ಥೆ’ಯು ಸರ್ಕಾರಕ್ಕೆ ಸಮಸ್ಯಾತ್ಮಕ ಎಂದು ತೋರುವ ಸಂಗತಿ ಆನ್‌ಲೈನ್ ಮಾಧ್ಯಮದಲ್ಲಿ ಪ್ರಕಟವಾದರೆ ಅದನ್ನು ತೆಗೆದುಹಾಕಲು ಒತ್ತಾಯಿಸುತ್ತದೆ ಎಂದು ಗಿಲ್ಡ್ ಹೇಳಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮಂಗಳವಾರ ಕರಡು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಗೆ ಮಾರ್ಪಾಡು ಮಾಡಿದ್ದು ಅದನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ.

ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗಾಗಿ “ಡ್ಯೂ ಡಿಲಿಜೆನ್ಸ್ ವಿಭಾಗದಲ್ಲಿ” ಮಾಡಲಾದ ಸೇರ್ಪಡೆಯು, “ಸಂದೇಶದ ಮೂಲದ ಬಗ್ಗೆ ಬಳಕೆದಾರರನ್ನು ಮೋಸಗೊಳಿಸುವ ಅಥವಾ ತಪ್ಪುದಾರಿಗೆಳೆಯುವ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಮಾಹಿತಿಯನ್ನು ತಿಳಿಸುವ” ಮಾಹಿತಿಯನ್ನು ಪ್ರಕಟಿಸಲು ಮಧ್ಯವರ್ತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ PIB ಫ್ಯಾಕ್ಟ್ ಚೆಕ್ ಘಟಕದಿಂದ ನಕಲಿ ಅಥವಾ ಸುಳ್ಳು ಎಂದು ಗುರುತಿಸಲಾದ ಅಥವಾ ಕೇಂದ್ರ ಸರ್ಕಾರದಿಂದ ಅಧಿಕಾರ ಪಡೆದ ಇತರ ಫ್ಯಾಕ್ಟ್ ಚೆಕಿಂಗ್ ಸಂಸ್ಥೆ, ಆನ್ ಲೈನ್ ಮಾಧ್ಯಮದಲ್ಲಿ ಪ್ರಕಟಿಸಿರುವ ಮಾಹಿತಿ ನಕಲಿ ಎಂದು ಹೇಳಿದರೆ ಆ ಮಾಹಿತಿಯನ್ನು ಪ್ರಸಾರ ಮಾಡಲು ಅನುಮತಿಸಲಾಗುವುದಿಲ್ಲ  ಎಂದು ಇದು ಹೇಳುತ್ತದೆ.

ಇದನ್ನೂ ಓದಿ: Raghuram Rajan on Rahul Gandhi: ರಾಹುಲ್ ಗಾಂಧಿ ಪಪ್ಪು ಅಲ್ಲ, ಬುದ್ಧಿವಂತ; ರಘುರಾಮ್ ರಾಜನ್ ಮೆಚ್ಚುಗೆ

ಇದಲ್ಲದೆ, ‘ಕೇಂದ್ರ ಸರ್ಕಾರದ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ’ ಎಂಬ ಪದಗಳು ಸರ್ಕಾರಕ್ಕೆ ತನ್ನ ಸ್ವಂತ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದು ನಕಲಿ ಅಥವಾ ಅಲ್ಲ ಎಂಬುದನ್ನು ನಿರ್ಧರಿಸಲು ಪೂರ್ಣಾಧಿಕಾರವನ್ನು ನೀಡುತ್ತದೆ. ಇದು ಸರ್ಕಾರದ ನ್ಯಾಯಸಮ್ಮತ ಟೀಕೆಗಳನ್ನು ನಿಗ್ರಹಿಸುತ್ತದೆ. ಹೀಗಾದರೆ ಸರ್ಕಾರಗಳನ್ನು ಪ್ರಶ್ನಿಸುವ, ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರವಹಿಸುವ ಪತ್ರಿಕಾ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಗಿಲ್ಡ್ ಹೇಳಿದೆ.

ಮಾರ್ಚ್ 2021 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಐಟಿ ನಿಯಮಗಳ ಬಗ್ಗೆ ಗಿಲ್ಡ್ ತೀವ್ರವಾದ ಕಾಳಜಿಯನ್ನು ವ್ಯಕ್ತಪಡಿಸಿತ್ತು. ಇದು ಯಾವುದೇ ನ್ಯಾಯಾಂಗ ಮೇಲ್ವಿಚಾರಣೆಯಿಲ್ಲದೆ ದೇಶದಲ್ಲಿ ಎಲ್ಲಿಯಾದರೂ ಪ್ರಕಟಿತ ಸುದ್ದಿಗಳನ್ನು ನಿರ್ಬಂಧಿಸಲು, ಅಳಿಸಲು ಅಥವಾ ಮಾರ್ಪಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ಗಿಲ್ಡ್ ಹೇಳಿತ್ತು. ಈ ನಿಯಮಗಳಲ್ಲಿನ ವಿವಿಧ ನಿಬಂಧನೆಗಳು ಡಿಜಿಟಲ್ ಸುದ್ದಿ ಮಾಧ್ಯಮದ ಮೇಲೆ ಅಸಮಂಜಸವಾದ ನಿರ್ಬಂಧಗಳನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ಮಾಧ್ಯಮದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಗಿಲ್ಡ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ