Fact Check: ಸುಳ್ಳು ಸುದ್ದಿ ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ಬಹಿರಂಗಪಡಿಸಿದ ಪಿಐಬಿ ಫ್ಯಾಕ್ಟ್ ಚೆಕ್ ಘಟಕ
ಪಿಐಬಿ ಫ್ಯಾಕ್ಟ್ ಚೆಕ್ ಘಟಕದಿಂದ ಲಕ್ಷಗಟ್ಟಲೆ ವೀಕ್ಷಣೆ ಹೊಂದಿದ ಭಾರತದ ಸುಪ್ರೀಂಕೋರ್ಟ್, ಮುಖ್ಯ ನ್ಯಾಯಮೂರ್ತಿ ಮತ್ತು ಪ್ರಧಾನ ಮಂತ್ರಿಗಳ ಬಗ್ಗೆ ನಕಲಿ ವಿಡಿಯೋಗಳ ಅಸಲಿತನ ಬಯಲಿಗೆ.
ಭಾರತದಲ್ಲಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್ (YouTube channels) ಗಳನ್ನು ಪಿಐಬಿ ಫ್ಯಾಕ್ಟ್ ಚೆಕ್ (PIB fact check) ಘಟಕ (ಎಫ್ ಸಿಯು) ಬಯಲಿಗೆಳೆದಿದೆ. ಸುಮಾರು 40ಕ್ಕೂ ಅಧಿಕ ಸತ್ಯಾಂಶ ಪರಿಶೀಲನೆ (ಫ್ಯಾಕ್ಟ್ ಚಕ್) ಸರಣಿಯಲ್ಲಿ ಇದು ಕೂಡ ಒಂದಾಗಿದೆ. ಈ ಯೂಟ್ಯೂಬ್ ಚಾನೆಲ್‌ಗಳು ಸುಮಾರು 33 ಲಕ್ಷ ಚಂದಾದಾರರನ್ನು ಹೊಂದಿದ್ದು, 30 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಚಾನೆಲ್ಗಳಲ್ಲಿರುವ ವಿಡಿಯೋಗಳು ಬಹುತೇಕ ಸುಳ್ಳಿನಿಂದ ಕೂಡಿರುವುದಾಗಿ ಕಂಡುಬಂದಿದೆ. ಇದೇ ಮೊದಲ ಬಾರಿಗೆ ಪಿಐಬಿ, ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಮಾಧ್ಯಮದಲ್ಲಿನ ವೈಯಕ್ತಿಕ ಪೋಸ್ಟ್‌ಗಳನ್ನು ಒಳಗೊಂಡ ಸಂಪೂರ್ಣ ಯೂಟ್ಯೂಬ್ ಚಾನೆಲ್‌ಗಳನ್ನು ಬಹಿರಂಗಪಡಿಸಿದೆ. ಪಿಐಬಿಯಿಂದ ಪರಿಶೀಲಿಸಲಾದ ಯೂಟ್ಯೂಬ್ ಚಾನಲ್‌ಗಳ ವಿವರಗಳು ಕೆಳಕಂಡಂತಿವೆ.
1. ನ್ಯೂಸ್ ಹೆಡ್ಲೈನ್: 9.67 ಲಕ್ಷ ಚಂದಾದಾರರನ್ನು ಹೊಂದಿದ್ದು, 31,75,32,290 ವೀಕ್ಷಣೆ ಕಂಡಿದೆ.
2. ಸರ್ಕಾರಿ ಅಪ್ಡೇಟ್: 22.6 ಲಕ್ಷ ಚಂದಾದಾರರು, 8,83,594 ವೀಕ್ಷಣೆ ಕಂಡಿದೆ.
3. ಆಜ್ ತಕ್ ಲೈವ್: 65.6 ಸಾವಿರ ಚಂದಾದಾರರನ್ನು ಹೊಂದಿದ್ದು, 1,25,04,177 ವಿಕ್ಷಣೆ ಕಂಡಿದೆ.
ಇದನ್ನೂ ಓದಿ: Taj Mahal: ಪ್ರೀತಿಯ ಪ್ರತೀಕವಾದ ತಾಜ್ಮಹಲ್ಗೂ ತಟ್ಟಿದ ಕೋಟಿ ಕೋಟಿ ತೆರಿಗೆ ಬಿಸಿ
ಭಾರತದ ಚುನಾವಣಾ ಆಯೋಗ, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆಯೂ ತಪ್ಪು ಮಾಹಿತಿ
ಈ ಯೂಟ್ಯೂಬ್ ಚಾನೆಲ್‌ಗಳು ಭಾರತದ ಘನತೆವೆತ್ತ ಸುಪ್ರೀಂಕೋರ್ಟ್, ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರಿ ಯೋಜನೆಗಳು, ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂಗಳು), ಕೃಷಿ ಸಾಲ ಮನ್ನಾ ಇತ್ಯಾದಿಗಳ ಬಗ್ಗೆ ಸುಳ್ಳು ಮತ್ತು ಸಂವೇದನಾರಹಿತ ಸುದ್ದಿಗಳನ್ನು ಇತರೆ ನಕಲಿ ಸುದ್ದಿಗಳಲ್ಲಿ ಹರಡುತ್ತವೆ. ಉದಾಹರಣೆಗೆ ಮುಂದಿನ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸಲಾಗುವುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಂತಹ ನಕಲಿ ಸುದ್ದಿಗಳನ್ನು ಒಳಗೊಂಡಿದೆ. ಬ್ಯಾಂಕ್ ಖಾತೆಗಳು, ಆಧಾರ್ ಕಾರ್ಡ್‌ಗಳು ಮತ್ತು ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುವ ಜನರಿಗೆ ಸರ್ಕಾರ ಹಣವನ್ನು ನೀಡುವುದು. ಇವಿಎಂಗಳ ನಿಷೇಧ ಇತ್ಯಾದಿ.
#PIBFactCheck hereby clarifies that the fake news spreading YouTube channel “आज तक LIVE” (Handle name: user-nz3gh5uu8o) is not associated in any way with the @IndiaToday Group or the @aajtak channel https://t.co/r6iYnYOAkZ
— PIB Fact Check (@PIBFactCheck) December 20, 2022
ಇದನ್ನೂ ಓದಿ: Millets Food Festival 2022: ಸಂಸತ್ನಲ್ಲಿ ಇಂದು ಸಿರಿಧಾನ್ಯ ಆಹಾರ ಉತ್ಸವ, ವಿವಿಧ ಖಾದ್ಯಗಳನ್ನು ಸವಿಯಲಿರುವ ಸಂಸದರು
ಯೂಟ್ಯೂಬ್ನಲ್ಲಿ ತಪ್ಪು ಮಾಹಿತಿಯಿಂದ ಹಣಗಳಿಕೆ
ಯೂಟ್ಯೂಬ್ ಚಾನೆಲ್‌ಗಳು ಟಿವಿ ಚಾನೆಲ್‌ಗಳ ಲೋಗೋಗಳೊಂದಿಗೆ ನಕಲಿ ಮತ್ತು ಸಂವೇದನಾಶೀಲ ಆಸಕ್ತಿ ಹುಟ್ಟಿಸುವ ಅಂಶಗಳನ್ನು ಬಳಸುತ್ತಿರುವುದನ್ನು ಗಮನಿಸಲಾಗಿದೆ ಮತ್ತು ಸುದ್ದಿಯು ಅಧಿಕೃತವಾಗಿದೆ ಎಂದು ವೀಕ್ಷಕರನ್ನು ತಪ್ಪುದಾರಿಗೆಳೆಯಲು ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಲಾಗಿದೆ. ಈ ಚಾನಲ್‌ಗಳು ತಮ್ಮ ವಿಡಿಯೋಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವುದು ಮತ್ತು ಯೂಟ್ಯೂಬ್ನಲ್ಲಿ ತಪ್ಪು ಮಾಹಿತಿಯಿಂದ ಹಣಗಳಿಸುತ್ತಿರುವುದು ಕಂಡುಬಂದಿದೆ. ಕಳೆದ ಒಂದು ವರ್ಷದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೂರಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ ನಂತರ ಪಿಐಬಿ ಫ್ಯಾಕ್ಟ್ ಚೆಕ್ ಘಟಕ ತೆಗೆದುಕೊಂಡ ಕ್ರಮ ಇದಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Tue, 20 December 22