ನನ್ನ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು 4ನೇ ಸಲ ಕಲಬುರಗಿಗೆ ಹೋಗಿದ್ದಾರೆ: ಪ್ರಿಯಾಂಕ್ ಖರ್ಗೆ
ಕೇವಲ ತನ್ನ ವಿರುದ್ಧ ಹೋರಾಟ ಮಾಡಲು ಮಾತ್ರ ಬಿಜೆಪಿ ನಾಯಕರು ಕಲಬುರಗಿಗೆ ಹೋಗುತ್ತಿದ್ದಾರೆ, ಖರ್ಗೆ ಹಠಾವ್ ಬಿಜೆಪಿ ಬಚಾವ್ ಇವರ ಅಜೆಂಡಾ ಆಗಿದೆ, ಹಿಂದೆ ಬಿಜೆಪಿಯ ಅಭ್ಯರ್ಥಿಯಾಗಿ ಚಿತಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಕ್ಕಿಕಳ್ಳ ಮಣಿಕಂಠನ ಪರವಾಗಿ ಪ್ರತಿಭಟನೆ ನಡೆಸಲು ಕಲಬುರಗಿಗೆ ಬಂದಿದ್ದರು, ತನ್ನ ವಿರುದ್ಧ ಬಿಜೆಪಿ ನಾಯಕರು ನಡೆಸಿದ ಹೋರಾಟಗಳೆಲ್ಲ ಬಿದ್ದುಹೋಗಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು, ಮೇ 24: ಅತ್ತ ಕಲಬುರಗಿಯಲ್ಲಿ ಬಿಜೆಪಿ ನಾಯಕರು (BJP leaders) ತನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಬೆಂಗಳೂರಲ್ಲಿ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರಾದ ಆರ್ ಅಶೋಕ, ವಿಜಯೇಂದ್ರ, ಸಿಟಿ ರವಿ, ಎನ್ ರವಿಕುಮಾರ್ ಮೊದಲಾದವರೆಲ್ಲ ಪದೇಪದೆ ಕಲಬುರಗಿಗೆ ಭೇಟಿ ನೀಡುತ್ತಿರುವುದು ಬಹಳ ಸಂತಸವನ್ನುಂಟು ಮಾಡಿದೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇದೇ ನಾಯಕರು ಒಮ್ಮೆಯೂ ಕಲಬುರಗಿಗೆ ಭೇಟಿ ನೀಡಿರಲಿಲ್ಲ ಎಂದು ಹೇಳಿದರು. ಆದರೆ ಇವರು ಬಿಜೆಪಿ ಸ್ಥಳೀಯ ನಾಯಕರ ಮಾತನ್ನು ನಂಬಿಕೊಂಡು ಬರುತ್ತಿದ್ದಾರೆ, ಇವರಿಗೆ ನಾಚಿಕೆ ಅನ್ನೋದಿಲ್ಲ, ಕಾಮನ್ ಸೆನ್ಸ್ ಇಲ್ಲ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ರಾಜ್ಯಪಾಲರನ್ನ ಭೇಟಿಯಾದ ಬಿಜೆಪಿ ನಿಯೋಗ, ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾಕ್ಕೆ ಮನವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

