Heart Attack Symptoms: ಕೇವಲ ಎದೆನೋವು ಮಾತ್ರವಲ್ಲ ಹೃದಯಾಘಾತದ ಈ ಲಕ್ಷಣಗಳ ಬಗ್ಗೆಯೂ ಎಚ್ಚರವಿರಲಿ

ಹೃದಯಾಘಾತ(Heart Attack) ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಎದೆನೋವು, ಹೃದಯ ಬಡಿತ ಏಕಾಏಕಿ ಹೆಚ್ಚಳವಾಗುವುದು, ಉಸಿರಾಟ ತೊಂದರೆ ಆದರೆ ಅದನ್ನು ಹೊರತುಪಡಿಸಿ ಕೂಡ ಕೆಲವು ಲಕ್ಷಣಗಳಿರುತ್ತವೆ, ನೀವು ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

Heart Attack Symptoms: ಕೇವಲ ಎದೆನೋವು ಮಾತ್ರವಲ್ಲ ಹೃದಯಾಘಾತದ ಈ ಲಕ್ಷಣಗಳ ಬಗ್ಗೆಯೂ ಎಚ್ಚರವಿರಲಿ
ರಕ್ತ ಹೆಪ್ಪುಗಟ್ಟುವಿಕೆImage Credit source: Times Now
Follow us
| Updated By: ನಯನಾ ರಾಜೀವ್

Updated on: Dec 13, 2022 | 9:57 AM

ಹೃದಯಾಘಾತ(Heart Attack) ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಎದೆನೋವು, ಹೃದಯ ಬಡಿತ ಏಕಾಏಕಿ ಹೆಚ್ಚಳವಾಗುವುದು, ಉಸಿರಾಟ ತೊಂದರೆ ಆದರೆ ಅದನ್ನು ಹೊರತುಪಡಿಸಿ ಕೂಡ ಕೆಲವು ಲಕ್ಷಣಗಳಿರುತ್ತವೆ, ನೀವು ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದರೆ ಹೃದಯಾಘಾತದ ಇತರೆ ಲಕ್ಷಣಗಳ ಬಗ್ಗೆ ತಿಳಿಯೋಣ. ದೀರ್ಘಕಾಲದ ಕೋವಿಡ್ ಸೋಂಕು ಅಥವಾ ಕಳಪೆ ಜೀವನಶೈಲಿಯಿಂದಾಗಿ ಹೃದಯಾಘಾತ ಸಂಭವಿಸುತ್ತಿದೆ.

ಜಿಮ್​ನಲ್ಲಿ, ವಾಕಿಂಗ್ ಮಾಡುತ್ತಿರುವಾಗ, ಮನೆಯಲ್ಲಿಯೇ ಕುಸಿದುಬಿದ್ದಿರುವ ಎಷ್ಟೋ ಘಟನೆಗಳು ನಮ್ಮ ಕಣ್ಣಮುಂದಿವೆ. ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ ಸಂಭವಿಸುತ್ತದೆ, ನೀವು ನಿಮ್ಮ ದೇಹದಲ್ಲಿ ಎಲ್ಲಾದರೂ ರಕ್ತ ಹೆಪ್ಪುಗಟ್ಟುವಿಕೆಯ ಚಿಹ್ನೆ ಇದೆಯೇ? ಎಂಬುದನ್ನು ಪರೀಕ್ಷಿಸುತ್ತಿರಿ.

ಹೃದಯಾಘಾತ ಎಂದರೇನು? ಹೃದಯಾಘಾತ ಎಂಬುದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದೆ, ಅಪಧಮನಿಗಳಲ್ಲಿನ ಅಡಚಣೆಯಿಂದಾಗಿ ಹೃದಯಕ್ಕೆ ರಕ್ತ ಹಾಗೂ ಆಮ್ಲಜನಕದ ಹರಿವಿನಲ್ಲಿ ಅಡ್ಡಿಯುಂಟಾಗುತ್ತದೆ. ಆಮ್ಲಜನಕದ ಕೊರತೆಯಿಂದಾಗಿ ಹೃದಯ ಸ್ನಾಯುಗಳಿಗೆ ತೊಂದರೆಯುಂಟಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು.

ಮತ್ತಷ್ಟು ಓದಿ: Heart Attack and Cardiac Arrest : ಹೃದಯಾಘಾತ ಹಾಗೂ ಹೃದಯಸ್ತಂಭನ ನಡುವಿನ ವ್ಯತ್ಯಾಸವೇನು?

ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾದರೆ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಾವುವು?

ಚರ್ಮದ ಬಣ್ಣ ನೀಲಿ ಅಥವಾ ಕೆಂಪಾಗುವುದು ಒಂದು ವೇಳೆ ಹೆಪ್ಪುಗಟ್ಟುವಿಕೆ ತೋಳು ಅಥವಾ ಕಾಲುಗಳ ರಕ್ತನಾಳಗಳಲ್ಲಿ ಪ್ಲಗ್ ಅಪ್ ಆಗುತ್ತದೆ, ಆಗ ಚರ್ಮವು ನೀಲಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗೆಯೇ ಇದು ಚರ್ಮವನ್ನು ತೆಳುವಾಗಿ ಕಾಣುವಂತೆ ಮಾಡುತ್ತದೆ.

ಮತ್ತಷ್ಟು ಓದಿ: Chest Pain: ಎದೆ ನೋವು ಹೃದಯಾಘಾತದ ಲಕ್ಷಣ ಮಾತ್ರವಲ್ಲ, ಈ ಕಾಯಿಲೆಯ ಸಂಕೇತವೂ ಆಗಿರಬಹುದು

ಊತ: ರಕ್ತ ಹೆಪ್ಪುಗಟ್ಟುವಿಕೆಯು ದೇಹದಲ್ಲಿ ಸರಾಗವಾಗಿ ಹರಿಯುತ್ತಿರುವ ರಕ್ತವನ್ನು ತಡೆಯುತ್ತದೆ ಮತ್ತು ರಕ್ತನಾಳಗಳ ಊತಕ್ಕೆ ಕಾರಣವಾಗುತ್ತದೆ.

ಎದೆ ನೋವು: ಹಠಾತ್ ಎದೆನೋವು ನಿಮ್ಮನ್ನು ಕಾಡಬಹುದು, ಹೃದಯ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯುಂಟಾದಾಗ ಹಠಾತ್ ಎದೆನೋವು ನಿಮಗೆ ಕಾಣಿಸಿಕೊಳ್ಳಬಹುಉದ ಇದು ಕೂಡ ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಒಂದು.

ಹೃದಯಾಘಾತದ ಇತರೆ ಲಕ್ಷಣಗಳು -ಎದೆ ನೋವು -ಒಂದು ಅಥವಾ ಎರಡೂ ತೋಳುಗಳಲ್ಲಿ ನೋವು -ದವಡೆಗಳಲ್ಲಿ ನೋವು -ಉಸಿರಾಟದ ತೊಂದರೆ -ಎದೆಯುರಿ -ಉಸಿರಾಟದ ತೊಂದರೆ -ತಣ್ಣನೆಯ ಬೆವರು -ಮೂರ್ಛೆ ಹೋಗುವುದು -ಹೃದಯ ಬಡಿತ ಏಕಾಏಕಿ ಹೆಚ್ಚಳ

ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ