Zika Virus: ಕರ್ನಾಟಕದಲ್ಲಿ ಝಿಕಾ ವೈರಸ್ ಪತ್ತೆ: ಲಕ್ಷಣಗಳು, ವೈರಸ್ ಇತಿಹಾಸ, ಮುನ್ನೆಚ್ಚರಿಕಾ ಕ್ರಮಗಳೇನು, ಇಲ್ಲಿದೆ ಮಾಹಿತಿ

ಕೇರಳದಲ್ಲಿ 2021ರಲ್ಲಿ ಮೊದಲ ಬಾರಿಗೆ ಝಿಕಾ ವೈರಸ್(Zika Virus) ಪತ್ತೆಯಾದಾಗ ಕರ್ನಾಟಕದ ಜನತೆ ಆತಂಕಕ್ಕೀಡಾಗಿತ್ತು, ನಮ್ಮ ರಾಜ್ಯಕ್ಕೂ ಬಂದರೇನು ಗತಿ, ಈಗಾಗಲೇ ಕೋವಿಡ್​ನಿಂದ ಸಾಕಷ್ಟು ಅನುಭವಿಸಿದ್ದೇವೆ ಎಂಬುದು ಜನರ ಅಳಲಾಗಿತ್ತು.

Zika Virus: ಕರ್ನಾಟಕದಲ್ಲಿ ಝಿಕಾ ವೈರಸ್ ಪತ್ತೆ: ಲಕ್ಷಣಗಳು, ವೈರಸ್ ಇತಿಹಾಸ, ಮುನ್ನೆಚ್ಚರಿಕಾ ಕ್ರಮಗಳೇನು, ಇಲ್ಲಿದೆ ಮಾಹಿತಿ
Zika Virus
Follow us
TV9 Web
| Updated By: ನಯನಾ ರಾಜೀವ್

Updated on: Dec 13, 2022 | 11:43 AM

ಕೇರಳದಲ್ಲಿ 2021ರಲ್ಲಿ ಮೊದಲ ಬಾರಿಗೆ ಝಿಕಾ ವೈರಸ್(Zika Virus) ಪತ್ತೆಯಾದಾಗ ಕರ್ನಾಟಕದ ಜನತೆ ಆತಂಕಕ್ಕೀಡಾಗಿತ್ತು, ನಮ್ಮ ರಾಜ್ಯಕ್ಕೂ ಬಂದರೇನು ಗತಿ, ಈಗಾಗಲೇ ಕೋವಿಡ್​ನಿಂದ ಸಾಕಷ್ಟು ಅನುಭವಿಸಿದ್ದೇವೆ  ಎಂದು ಭಯಪಟ್ಟಿದ್ದರು, ಆದರೆ ಝಿಕಾ ವೈರಸ್ ಪ್ರಭಾವ ಆಗ ಹೆಚ್ಚಿರಲಿಲ್ಲ, ಕೇರಳದ ಗಡಿ ದಾಟಿ ಬರಲಿಲ್ಲ, ಆದರೆ ಇದೀಗ ರಾಯಚೂರಿನಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ. 5 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ. ರಾಯಚೂರಿನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ.

ಪುಣೆ ವೈರಾಲಜಿ ಲ್ಯಾಬ್‌ನಿಂದ ಪಾಸಿಟಿವ್ ರಿಪೋರ್ಟ್‌ ಬಂದಿದೆ. ಝೀಕಾ ವೈರಸ್‌ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಇನ್ನು ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಬಾಲಕಿ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುತ್ತಿದೆ.

ಮತ್ತಷ್ಟು ಓದಿ:  ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ: ಖಚಿತಪಡಿಸಿದ ಸಚಿವ ಸುಧಾಕರ್

ಸೊಳ್ಳೆ ಕಡಿತದಿಂದ ಬರುವ ಝಿಕಾ ವೈರಸ್‌, ಆಂಧ್ರ, ತೆಲಂಗಾಣ ಸೇರಿ ರಾಜ್ಯದ ಬೇರೆ ಯಾವ ಜಿಲ್ಲೆಯ ಲಿಂಕ್ ಇದೆ ಅನ್ನೋದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೇಂದ್ರದ ವೈದ್ಯರ ತಂಡ ಏಕಾಏಕಿ‌ ದಿಢೀರ್ ಭೇಟಿ ನೀಡಿ ಝಿಕಾ ವೈರಸ್‌ಗೆ ಒಳಗಾದ ಬಾಲಕಿ ಹಾಗೂ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಿದೆ.

ಮೆಡಿಕಲ್ ರಿಪೋರ್ಟ್ಸ್, ಪುಣೆಯ ಲ್ಯಾಬ್ ರಿಪೋರ್ಟ್​ನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೆ ಸುಧಾರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಝಿಕಾ ವೈರಸ್‌ನ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ ಸಚಿವರು, ಸರ್ಕಾರವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಂಜೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಝಿಕಾ ವೈರಸ್ ಇತಿಹಾಸ ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಝಿಕಾ ವೈರಸ್ ಸೋಂಕು ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ. ಈ ವೈರಸ್ ಅನ್ನು ಮೊದಲು 1947ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಕೇರಳದಲ್ಲಿ 2021ರಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು.

ಝಿಕಾ ವೈರಸ್ ನಿವಾರಣಾ ಕ್ರಮವೇನು? ಈ ಸೋಂಕು ತಗುಲಿದವರಿಗೆ ಹೆಚ್ಚು ದ್ರವಾಹಾರ ಸೇವಿಸುವಂತೆ ತಿಳಿಸಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳದ ಆಹಾರ ಸೇವಿಸಲು ಸಲಹೆ ನೀಡಲಾಗಿದೆ.

ಝಿಕಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಔಷಧವಿಲ್ಲ, ಸೊಳ್ಳೆ ನಿರೋಧಕ ತೈಲಗಳನ್ನು ಬಳಸಬಹುದಾಗಿದೆ. 23 ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಕೆರೆಬಿಯನ್, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೋ, ಈಜಿಪ್ಟ್‌, ನೈಜೀರಿಯಾ, ಕೊಲಂಬಿಯಾ, ಮಲೇಷಿಯಾ, ಪಾಕಿಸ್ತಾನ, ಥೈಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಭಾರತದ ಕೇರಳ ರಾಜ್ಯದಲ್ಲಿಯೂ ಕಂಡುಬಂದಿದೆ.

ಝಿಕಾ ವೈರಸ್ ಬರುವುದು ಹೇಗೆ? ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ಸೋಂಕು. ಏಡೆಸ್ ಜೆನಸ್ ಎಂಬ ಸೊಳ್ಳೆ ಈ ವೈರಾಣುವಿನ ಹರಡುವಿಕೆಗೆ ಕಾರಣವಾಗಿರುತ್ತದೆ. ಬೆಳಗ್ಗಿನ ಜಾವ, ಸಂಜೆ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಡೆಂಗೆ, ಚಿಕುನ್ ಗುನ್ಯಾಗೆ ಕಾರಣವಾಗುವ ಸೊಳ್ಳೆಯೇ ಈ ಸೋಂಕಿಗೂ ಕಾರಣವಾಗಿರುತ್ತದೆ. ಈ ಸೊಳ್ಳೆ ಕಚ್ಚುವುದರಿಂದ ಮನುಷ್ಯರಿಗೆ ಸೋಂಕು ತಗುಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಝಿಕಾ ಸೋಂಕಿನ ಲಕ್ಷಣಗಳೇನು? ಸೋಂಕು ಅತಿ ಗಂಭೀರ ಸ್ವರೂಪ ತಾಳುವುದಿಲ್ಲ. ಈ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆಯೂ ಕಡಿಮೆ. ಎರಡು ದಿನಗಳಿಂದ ಏಳು ದಿನಗಳವರೆಗೆ ಈ ಲಕ್ಷಣಗಳು ಇರುತ್ತವೆ. ಜಾಂಡಿಸ್ ಬಗೆಯ ಲಕ್ಷಣಗಳು ರೋಗಿಯಲ್ಲಿ ಗೋಚರವಾಗಬಹುದು. ಕಣ್ಣು ಕೆಂಪಗಾಗುವುದು, ಜ್ವರ, ಗಂಟು ನೋವು, ಕೀಲು, ಸ್ನಾಯು ನೋವು ಇದರ ಸಾಮಾನ್ಯ ಲಕ್ಷಣ. ತಲೆನೋವು, ಕೆಂಪು ಕಲೆಗಳೂ ಆಗುತ್ತವೆ.

ಗರ್ಭಿಣಿಯರಿಗೆ ಹೆಚ್ಚಿನ ಅಪಾಯ:  ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರದ ಪ್ರಕಾರ ಗರ್ಭಿಣಿಯರಿಗೆ ಈ ಝಿಕಾ ವೈರಸ್ ಅಪಾಯಕಾರಿಯಾಗಿದೆ. ಮಹಿಳೆಯಿಂದ ಮಗುವಿಗೂ ಈ ಸೋಂಕು ಹರಡುತ್ತದೆ. ಇದು ಹುಟ್ಟಲಿರುವ ಮಗುವಿನಲ್ಲಿ ಆರೋಗ್ಯ ತೊಂದರೆಗಳನ್ನು ತರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೂ ಸೋಂಕು ಹರಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ