ಮಲಪ್ಪುರಂ: ಮಳೆಗಾಲ ಬಂತೆಂದರೆ ಎಲ್ಲ ಕಡೆಯೂ ರಸ್ತೆಗಳಲ್ಲಿ ಗುಂಡಿ (Pothole) ಬೀಳುವುದು ಮಾಮೂಲು. ಬೆಂಗಳೂರಿನಲ್ಲೂ ರಸ್ತೆಗುಂಡಿಗಳಿಗೇನೂ ಕಡಿಮೆಯಿಲ್ಲ. ಈ ರಸ್ತೆ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು, ಪೇಂಟ್ ಬಳಿದು ಅನೇಕ ರೀತಿಯ ಪ್ರತಿಭಟನೆಗಳನ್ನು ಮಾಡಿದವರಿದ್ದಾರೆ. ಆದರೆ, ಕೇರಳದ ಮಲಪ್ಪುರಂನಲ್ಲಿ (Malappuram) ವ್ಯಕ್ತಿಯೊಬ್ಬರು ರಸ್ತೆಯ ಹೊಂಡಗಳ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ (Protest) ಮಾಡಿದ್ದಾರೆ. ಶಾಸಕರ ಎದುರೇ ನೀರು ನಿಂತ ರಸ್ತೆ ಗುಂಡಿಯಲ್ಲಿ ಯೋಗಾಸನ (Yoga) ಮಾಡಿ, ಆ ಕೊಳಚೆ ನೀರಿನಲ್ಲೇ ಸ್ನಾನ ಮಾಡುವ ಮೂಲಕ ಆ ವ್ಯಕ್ತಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಈ ಘಟನೆಯ ವಿಡಿಯೋವೊಂದು ಬೆಳಕಿಗೆ ಬಂದಿದೆ. ಮಳೆನೀರು ತುಂಬಿದ ರಸ್ತೆ ಗುಂಡಿಯಲ್ಲಿ ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹಾಗೇ, ಆತ ಕೆಸರಿನ ನೀರಿನಲ್ಲಿ ಬಟ್ಟೆಯನ್ನೂ ಒಗೆದಿದ್ದಾರೆ. ಅದೇ ಗುಂಡಿಯಲ್ಲಿ ಕುಳಿತು ಯೋಗಾಸನವನ್ನೂ ಮಾಡಿದ್ದಾರೆ.
ಇದನ್ನೂ ಓದಿ: Viral Video: 68 ವರ್ಷದ ಇವರು ಮಾರುವ ಹಪ್ಪಳ ಕೇವಲ 20 ರೂಪಾಯಿ
ಹಮ್ಜಾ ಪೊರಾಲಿ ಎಂಬ ವ್ಯಕ್ತಿ ಸ್ಥಳೀಯ ಶಾಸಕ ಯು.ಎ ಲತೀಫ್ ಅವರ ಮುಂದೆ ರಸ್ತೆ ಗುಂಡಿಯಲ್ಲಿ ಯೋಗ ಮಾಡಿದ್ದಾರೆ. ಸ್ಥಳೀಯ ಮುಖಂಡರ ಕಾರು ಆ ಸ್ಥಳಕ್ಕೆ ಬಂದಾಗ, ಪೊರಾಲಿ ರಸ್ತೆ ಗುಂಡಿಯಲ್ಲಿ ಕುಳಿತು ಧ್ಯಾನ ಮಾಡಲು ಪ್ರಾರಂಭಿಸಿದರು. ಇದರಿಂದ ಕಾರು ಮುಂದೆ ಹೋಗಲಾಗದೆ ಶಾಸಕರು ಕಾರಿನಿಂದ ಇಳಿಯಬೇಕಾಯಿತು. ಆಗ ಆತ ಶಾಸಕರ ಮುಂದೆ ಯೋಗಾಸನ ಮಾಡಿ, ರಸ್ತೆ ಗುಂಡಿಯ ನೀರಿನಲ್ಲೇ ಸ್ನಾನ ಮಾಡಿದ್ದಾರೆ.
#WATCH | Kerala: A man in Malappuram protested against potholes on roads in a unique way by bathing & performing yoga in a water-logged pothole in front of MLA on the way pic.twitter.com/XSOCPrwD5f
— ANI (@ANI) August 9, 2022
ಕಳೆದ ವಾರ ಕೇರಳದಲ್ಲಿ ರಸ್ತೆಗಳ ದುರವಸ್ಥೆಯ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿದ್ದವು. ಆದರೂ ಆ ಪ್ರತಿಭಟನೆಗಳು ರಾಜಕಾರಣಿಗಳ ಗಮನವನ್ನು ಸೆಳೆಯಲು ವಿಫಲವಾಗಿತ್ತು. ಹೀಗಾಗಿ, ಶಾಸಕರ ಎದುರೇ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಈ ವ್ಯಕ್ತಿ ಗಮನ ಸೆಳೆದಿದ್ದಾರೆ. ಎರ್ನಾಕುಲಂ ಜಿಲ್ಲೆಯ ನೆಡುಂಬಸ್ಸೆರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಗುಂಡಿಯೊಂದರಿಂದ ರಸ್ತೆಗೆ ಬಿದ್ದು 52 ವರ್ಷದ ವ್ಯಕ್ತಿಯೊಬ್ಬರು ಟ್ರಕ್‌ಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: Viral Video: 68 ವರ್ಷದ ಇವರು ಮಾರುವ ಹಪ್ಪಳ ಕೇವಲ 20 ರೂಪಾಯಿ
ತಮ್ಮ ನಿಯಂತ್ರಣದಲ್ಲಿರುವ ಪ್ರತಿಯೊಂದು ರಸ್ತೆಯನ್ನು ಸರಿಪಡಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದೆ. ರಸ್ತೆ ರಿಪೇರಿ ಕಾರ್ಯವನ್ನು ವಿಳಂಬ ಮಾಡದೆ ಒಂದು ವಾರದೊಳಗೆ ಕಾಮಗಾರಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.
Published On - 11:24 am, Wed, 10 August 22