Viral Video: 68 ವರ್ಷದ ಇವರು ಮಾರುವ ಹಪ್ಪಳ ಕೇವಲ 20 ರೂಪಾಯಿ

Trending : ಈ ಅಜ್ಜಿಗೆ ನಾವು ಹೇಗೆ ಸಹಾಯ ಮಾಡಬಹುದು ದಯವಿಟ್ಟು ತಿಳಿಸಿ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋ ನೋಡಿ...

Viral Video: 68 ವರ್ಷದ ಇವರು ಮಾರುವ ಹಪ್ಪಳ ಕೇವಲ 20 ರೂಪಾಯಿ
ಈ ವಯಸ್ಸನಲ್ಲಿ ಬೀದಿಯಲ್ಲಿ ಹಪ್ಪಳ ಮಾರುತ್ತಾ....
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 07, 2022 | 6:45 PM

Viral : ಅರವತ್ತು ದಾಟಿದ ನಂತರ ವಿಶ್ರಾಂತಿ ಪಡೆಯಬೇಕಲ್ಲವೆ? ಆದರೆ ನಮ್ಮ ಸುತ್ತಮುತ್ತಲಿರುವ ಎಷ್ಟೋ ಹಿರಿಯ ನಾಗರಿಕರಿಗೆ ಎಲ್ಲಿದೆ ವಿಶ್ರಾಂತಿ? ಜೈಪುರದ ಜಂತರ್​ಮಂತರ್​ ಬಳಿ ಇರುವ ಜಿಲೇಬಿ ಚೌಕ್​ಗೆ ಬಂದರೆ 68 ವರ್ಷದ ಹಿರಿಯಮಹಿಳೆ ನಿಮ್ಮನ್ನು ಎದುರುಗೊಳ್ಳುತ್ತಾರೆ. ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಎರಡೂ ಮೊಣಕೈಗಳ ತನಕ ಮುಟ್ಟುವಷ್ಟು ದೊಡ್ಡದಾದ ಗರಿಗರಿಯಾದ ಹಪ್ಪಳದ ಮೇಲೆ ಮಿತವಾಗಿ ಖಾರಪುಡಿ ಉದುರಿಸಿ ನಿಮ್ಮ ಕೈಗಿಡುತ್ತಾರೆ. ಒಂದು ಹಪ್ಪಳಕ್ಕೆ ಕೇವಲ ರೂ. 20! ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಯಸ್ಸಿನಲ್ಲಿಯೂ ಸ್ವಾಭಿಮಾನ ಮತ್ತು ಘನತೆಯೊಂದಿಗೆ ಬದುಕುತ್ತಿರುವ ಇವರ ಪ್ರಾಮಾಣಿಕತೆಗೆ ನೆಟ್ಟಿಗರು ಶಭಾಷ್​ ಎಂದಿದ್ದಾರೆ!

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Street Food Recipes (@streetfoodrecipe)

ಇನ್​ಸ್ಟಾಗ್ರಾಮ್​ನಲ್ಲಿರುವ ಪೋಸ್ಟ್​ನಲ್ಲಿ, ‘68 ವರ್ಷದ ಈ ಮಹಿಳೆ ಈಗಲೂ ಕಷ್ಟಪಟ್ಟು ದುಡಿದು ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ. ಕೇವಲ 20 ರೂಪಾಯಿಗೆ ಹಪ್ಪಳವನ್ನು ಮಾರುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಶರವೇಗದಲ್ಲಿ ಇವರ ಹಪ್ಪಳಗಳು ಮಾರಾಟವಾಗುತ್ತಿವೆ. ಇಡೀ ಕುಟುಂಬವನ್ನು ಇಬರೊಬ್ಬರೇ ದುಡಿದು ಸಾಕುತ್ತಿದ್ದಾರೆ.’ ಎಂಬ ಒಕ್ಕಣೆ ಇದೆ.

ನೆಟ್ಟಿಗರು ಮನಕರಗಿ, ದಯವಿಟ್ಟು ಇವರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಸಿ ಎಂದು ಕೇಳಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯ ನೆಟ್ಟಿಗರು ಹೇಗಾದರೂ ನಾವವರಿಗೆ ಸಹಾಯ ಮಾಡಲೇಬೇಕು, ಹೇಗೆಂದು ತಿಳಿಸಿ ಎಂದು ಕೋರಿಕೊಂಡಿದ್ದಾರೆ. ಅವರು ಮಾರುವ ಹಪ್ಪಳವನ್ನು ನಾನು ಮಾರಬಯಸುತ್ತೇನೆ ಎಂದೂ ಕೆಲವರು ಹೇಳಿದ್ದಾರೆ. ಅದಕ್ಕೆ ಕೆಲವರು ನೇರ ಜೈಪುರಕ್ಕೆ ಹೋಗಿ ಇವರನ್ನು ಭೇಟಿಮಾಡಿ ಎಂದಿದ್ದಾರೆ ಒಬ್ಬರು.

ಇದನ್ನು ನೋಡಿದ ನಾವು ಘನತೆ, ಸ್ವಾಭಿಮಾನ ಎಂದು ಕೊಂಡಾಡುತ್ತೇವೆ. ಆದರೆ ಈ ಇಳಿವಯಸ್ಸಿನಲ್ಲಿ ಇವರು ಇಂಥ ಪರಿಸ್ಥಿತಿಯಲ್ಲಿರಬೇಕೆ? ಎಂದು ಅವರು ಆರಾಮಾಗಿ ನಿಶ್ಚಿಂತೆಯಿಂದ ಬದುಕುವುದು? ಯೋಚಿಸಿ.

ಇನ್ನಷ್ಟು ವೈರಲ್ ವಿಡಯೋಗಳಿಗಾಗಿ ಕ್ಲಿಕ್ ಮಾಡಿ

IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ