Viral Video: 71ರ ಮೆಕ್ಸಿಕೋದ ಈ ಅಜ್ಜಿ ಎನ್​ಬಿಎ ಸ್ಟಾರ್​ನಂತೆ ಬಾಸ್ಕೆಟ್​ ಬಾಲ್​ ಆಡುತ್ತಾರೆ!

TV9 Digital Desk

| Edited By: ಶ್ರೀದೇವಿ ಕಳಸದ

Updated on:Aug 07, 2022 | 5:25 PM

Granny Plays Basketball : ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ನೋಡಿ...

Viral Video: 71ರ ಮೆಕ್ಸಿಕೋದ ಈ ಅಜ್ಜಿ ಎನ್​ಬಿಎ ಸ್ಟಾರ್​ನಂತೆ ಬಾಸ್ಕೆಟ್​ ಬಾಲ್​ ಆಡುತ್ತಾರೆ!
ಈ ವಯಸ್ಸಿನಲ್ಲಿ ಈ ಅಜ್ಜಿ!

Viral : ಮೆಕ್ಸಿಕೋದ 71 ವರ್ಷದ ಆ್ಯಂಡ್ರಿಯಾ ಗಾರ್ಸಿಯಾ ಲೋಪೇಝ್ ಈಗ ಇಂಟರ್ನೆಟ್​ ತಾರೆ! ಈಕೆ ಈ ಇಳಿವಯಸ್ಸಿನಲ್ಲಿಯೂ ಅತ್ಯಂತ ಕೌಶಲದಿಂದ ಬಾಸ್ಕೆಟ್​ ಬಾಲ್​ ಆಡುವುದನ್ನು ನೋಡಿದ ನೆಟ್ಟಿಗರು ಅಚ್ಚರಿಗೆ ಬಿದ್ದಿದ್ದಾರೆ. ಇವರನ್ನು ಎನ್​ಬಿಎ ಸ್ಪರ್ಧೆಗೆ ಕಳಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋವನ್ನು ಆ್ಯಂಡ್ರಿಯಾ ಅವರ ಮೊಮ್ಮಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಆದರೆ ಆ್ಯಂಡ್ರಿಯಾ ತನಗೀಗ ಮೊಣಕಾಲಿನ ಸಮಸ್ಯೆಯಾಗಿದ್ದು ಆಡಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆ್ಯಂಡ್ರಿಯಾ ಅವರು ಆತ್ಮವಿಶ್ವಾಸದಿಂದ ಆಡುವುದನ್ನು ನೋಡಿದ ನೆಟ್ಟಿಗರು ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ನಿಜವಾಗಿಯೂ ಇವರು ಎನ್​ಬಿಎ ಸ್ಟಾರ್​ನಂತೆ ಆಡುತ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.

ಈ ಹಿಂದೆ, ಜೇಮ್ಸ್ ಎಂಬ 64 ವರ್ಷದ ಹಿರಿಯರೊಬ್ಬರ ಫುಟ್ಬಾಲ್ ಕೌಶಲಕ್ಕಾಗಿ ನೆಟ್ಟಿಗರು ಪ್ರಶಂಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕೇರಳದ ವ್ಯಕ್ತಿಯ ಈ ವೀಡಿಯೊವನ್ನು ಪ್ರದೀಪ್ ಎನ್ನುವವರು ಇನ್​ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ಈಗಲೂ ಫುಟ್ಬಾಲ್ ಆಡುವ ಈ 64 ವರ್ಷದ ವ್ಯಕ್ತಿಯನ್ನು ಭೇಟಿಯಾಗುವ ಭಾಗ್ಯ ಅಂತೂ ನನಗೆ ಸಿಕ್ಕಿತು. ಜೀವನೋಪಾಯಕ್ಕಾಗಿ ಟ್ರಕ್ ಓಡಿಸುವ ಇವರು ಲಾರಿಯಲ್ಲಿ ತನ್ನ ಫುಟ್ಬಾಲ್ ಕಿಟ್ ಅನ್ನು ತನ್ನೊಂದಿಗೇ ತೆಗೆದುಕೊಂಡು ಹೋಗುತ್ತಾರೆ. ಈ ಮೊದಲು ವಯನಾಡ್ ಫುಟ್ಬಾಲ್ ತಂಡದ ಸದಸ್ಯರಾಗಿದ್ದರು. ಇವರಿಂದ ನಾನು ಕಲಿತ ಒಂದು ವಿಷಯವೆಂದರೆ, ನೀನು ಏನನ್ನಾದರೂ ಮಾಡು. ಅದನ್ನು ಇಷ್ಟಪಟ್ಟು ಮಾಡು.ನ್ನು ಮಾಡು.”

ಇದನ್ನೂ ಓದಿ

ಇನ್ನಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada