Viral Video: ಮಹಾರಾಷ್ಟ್ರದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಪಲ್ಟಿ; ವಿಡಿಯೋ ವೈರಲ್
ಕಟ್ಟಡವೊಂದರ ಮುಂದೆ ಶಾಲಾ ಬಸ್ ಚಾಲಕ ಬಸ್ ಅನ್ನು ರಿವರ್ಸ್ ತೆಗೆಯಲು ಪ್ರಯತ್ನಿಸುವಾಗ ಬಸ್ ನಿಯಂತ್ರಣ ಕಳೆದುಕೊಂಡು, ಪಲ್ಟಿ ಹೊಡೆಯಿತು.
ಮುಂಬೈ: ಮಹಾರಾಷ್ಟ್ರದ ಅಂಬರನಾಥ್ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಸ್ಕೂಲ್ ಬಸ್ಸೊಂದು (School Bus) ಪಲ್ಟಿಯಾಗಿ ಬಿದ್ದಿರುವ ವಿಡಿಯೋ ವೈರಲ್ (Video Viral) ಆಗಿದೆ. ಮುಂಬೈನ ಅಂಬರನಾಥ್ ಗ್ರೀನ್ ಸಿಟಿ ಕಾಂಪ್ಲೆಕ್ಸ್ ಬಳಿ ಸೋಮವಾರ ಬೆಳಿಗ್ಗೆ 6.50ರ ಸುಮಾರಿಗೆ ಶಾಲಾ ಬಸ್ ಚಾಲಕ ಇಳಿಜಾರಿರುವ ರಸ್ತೆಯಲ್ಲಿ ಬಸ್ ಅನ್ನು ರಿವರ್ಸ್ ತೆಗೆಯಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ.
ಕಟ್ಟಡವೊಂದರ ಮುಂದೆ ಶಾಲಾ ಬಸ್ ಚಾಲಕ ಬಸ್ ಅನ್ನು ರಿವರ್ಸ್ ತೆಗೆಯಲು ಪ್ರಯತ್ನಿಸುವಾಗ ಬಸ್ ನಿಯಂತ್ರಣ ಕಳೆದುಕೊಂಡು, ಪಲ್ಟಿ ಹೊಡೆಯಿತು. ಅಂಬರನಾಥದ ಗ್ರೀನ್ ಸಿಟಿ ಕಾಂಪ್ಲೆಕ್ಸ್ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಘಟನೆ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ನಂತರ ಶಾಲಾ ಬಸ್ ಪಲ್ಟಿಯಾದ ನಂತರ ಬಸ್ ಕೆಳಗೆ ಬಿದ್ದಿರುವುದನ್ನು ಕಾಣಬಹುದು.
@PMOIndia@nitin_gadkari@CMOMaharashtra @DGPMaharashtra @ThaneCityPolice @ThaneCollector Ambernath(Thane) #INNERQWHEELSCHOOL bus (MH43H0479)got accident inside #GreenCityComplex Ambernath e.Seems rejected bus was used 2Transport school students as no details found on #RTOOnline pic.twitter.com/5EfGtFv8FH
— Ambernath Citizen’s Forum (ACF) (@ACF8983506000) September 26, 2022
ಇದನ್ನೂ ಓದಿ: Madhya Pradesh: 40 ಮಕ್ಕಳಿದ್ದ ಶಾಲಾ ಬಸ್ ಅಪಘಾತ, 1 ಮಗು ಸಾವು
ಅದೃಷ್ಟವಶಾತ್, ಸ್ಥಳೀಯರು ಮತ್ತು ಸುತ್ತಮುತ್ತಲಿನ ಜನರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಲ್ಟಿಯಾದ ಬಸ್‌ನಿಂದ ಮಕ್ಕಳನ್ನು ರಕ್ಷಿಸಿದ್ದರಿಂದ ಯಾರಿಗೂ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಈ ಬಸ್ ಶಾಲೆಗೆ ಸೇರಿದ್ದಲ್ಲ ಎಂದು ರೋಟರಿ ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದ್ದು, ಬಸ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿದೆ. ಈ ಬಸ್ ಖಾಸಗಿಯಾಗಿದ್ದು, ಪೋಷಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಬಸ್ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಮತ್ತೊಂದೆಡೆ ಸ್ಥಳೀಯರು ಬಸ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್‌ಗೆ ವಿಮೆ ಮಾಡಲಾಗಿಲ್ಲ ಮತ್ತು ಬಸ್‌ನ ಸ್ಥಿತಿ ತುಂಬಾ ಹದಗೆಟ್ಟಿದೆ ಎನ್ನಲಾಗಿದೆ.