ಬರ್ಮರ್: ರಾಜಸ್ಥಾನದ ಬರ್ಮರ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಜೆಸಿಬಿ ಹತ್ತಿಸಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Video Viral) ಆಗಿದೆ. ತನ್ನ ಮೇಲೆ ಬರಲು ಪ್ರಯತ್ನಿಸಿದ ಜೆಸಿಬಿ (JCB) ಯಂತ್ರದ ಮೇಲೆ ಮಹಿಳೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದಲ್ಲಿ (Rajasthan) ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಬಿಜೆಪಿ ಹೇಳಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಘಟನೆ ಎರಡು ಗುಂಪುಗಳ ನಡುವಿನ ವಿವಾದಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಬರ್ಮರ್ನ ಈ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಅದೇ ಕಾರಣದಿಂದ ಈ ಗಲಾಟೆಯೂ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಬರ್ಮರ್ ಎಸ್‌ಪಿ ದೀಪಕ್ ಭಾರ್ಗವ್ ಹೇಳಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದ್ದು, ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದೆ.
While @priyankagandhi is fooling people with her ‘Ladki hoon lad sakti hoon’ slogan in #UttarPradesh, in #Congress ruled #Rajasthan, a single woman was physically assaulted today in broad daylight by a bunch of hooligans who have absolutely no fear of the law!! #Shame pic.twitter.com/dGlJuDJu9Q
— Priti Gandhi – प्रीति गांधी (@MrsGandhi) November 18, 2021
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರು ತಮ್ಮ ‘ಲಡ್ಕಿ ಹೂ ಲಾಡ್ ಸಕ್ತಿ ಹೂ’ ಘೋಷಣೆಯ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಇಂದು ಹಗಲು ಹೊತ್ತಿನಲ್ಲಿ ಯಾವುದೇ ಭಯವಿಲ್ಲದ ಪುಂಡ ಪೋಕರಿಗಳಿಂದ ಒಂಟಿ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಟೀಕಿಸಿದ್ದಾರೆ.
राजस्थान में अब ऐसी वारदातें आम हो गई हैं। NCRB के आंकड़े भी इस बात की पुष्टि करते हैं कि राजस्थान में गंभीर अपराधों में अभूतपूर्व वृद्धि हुई है। लेकिन, राजस्थान कांग्रेस सरकार तो केवल एक मूकदर्शक बनी बैठी है। उन्हें केवल कुर्सी की चिंता है, जनता की नहीं। https://t.co/C1TgGUu6Dl
— RajyavardhanRathore (@Ra_THORe) November 18, 2021
ರಾಜಸ್ಥಾನ ರಾಜ್ಯದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ ಎಂದು ರಾಜಸ್ಥಾನ ಸಂಸದ ರಾಜ್ಯವರ್ಧನ್ ರಾಥೋಡ್ ಹೇಳಿದ್ದಾರೆ. ಎನ್‌ಸಿಆರ್‌ಬಿ ಅಂಕಿ-ಅಂಶಗಳು ರಾಜಸ್ಥಾನದಲ್ಲಿ ಗಂಭೀರ ಅಪರಾಧಗಳು ಹೆಚ್ಚಳವಾಗಿದೆ ಎಂದು ಖಚಿತಪಡಿಸಿವೆ. ಆದರೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಮಾತ್ರ ಮೂಕಪ್ರೇಕ್ಷಕನಂತೆ ಕುಳಿತಿದೆ. ಅವರು ಕುರ್ಚಿಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ, ಸಾರ್ವಜನಿಕರ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿಲ್ಲ ಎಂದು ಅವರು ಹೇಳಿದ್ದಾರೆ. ನವೆಂಬರ್ 13ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ
Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?