ನವದೆಹಲಿ: ಸಮಾಜವಾದಿ ಪಕ್ಷದ ಮೈನ್‌ಪುರಿ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ (Devendra Singh) ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ನಂತರ ಅವರ ಕಾರನ್ನು ಸುಮಾರು 500 ಮೀಟರ್‌ಗಳವರೆಗೆ ಎಳೆದ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ. ಈ ಘಟನೆಯಿಂದ ಸಮಾಜವಾದಿ ಪಕ್ಷದ (Samajwadi Party) ನಾಯಕನಿಗೆ ಗಾಯಗಳಾಗಿದ್ದು, ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ (Video Viral) ಆಗಿದೆ.
ದೇವೇಂದ್ರ ಸಿಂಗ್ ಅವರ ಕಾರನ್ನು ಮೈನ್ಪುರಿಯ ಸದರ್ ಕೊಟ್ವಾಲಿ ಪ್ರದೇಶದ ಅವರ ಮನೆಯ ಬಳಿ ಟ್ರಕ್ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ನಂತರ ಸ್ಥಳೀಯರು ಕಾರಿನಲ್ಲಿದ್ದ ದೇವೇಂದ್ರ ಸಿಂಗ್ ಅವರನ್ನು ರಕ್ಷಿಸಿದರು. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.
#WATCH A truck dragged the car of SP District President Devendra Singh Yadav for about 500 meters in UP’s Mainpuri pic.twitter.com/86qujRmENr
— ANI UP/Uttarakhand (@ANINewsUP) August 8, 2022
ಈ ಅಪಘಾತದ ವಿಡಿಯೋದಲ್ಲಿ ದೇವೇಂದ್ರ ಸಿಂಗ್ ಅವರ ವಾಹನವನ್ನು ನಿಲ್ಲಿಸುವ ಮೊದಲು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗುವುದನ್ನು ನೋಡಬಹುದು. ಕಾರು ನಿಂತ ತಕ್ಷಣ ರಸ್ತೆಯಲ್ಲಿದ್ದ ಹಲವರು ಸ್ಥಳಕ್ಕೆ ಧಾವಿಸಿ ಸಮಾಜವಾದಿ ಪಕ್ಷದ ನಾಯಕ ದೇವೇಂದ್ರ ಸಿಂಗ್ ಅವರನ್ನು ರಕ್ಷಿಸಲು ಯತ್ನಿಸಿದರು.
ಇದನ್ನೂ ಓದಿ: ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ
ಭಾನುವಾರ ರಾತ್ರಿ ದೇವೇಂದ್ರ ಸಿಂಗ್ ಅವರು ಕರ್ಹಾಲ್ ರಸ್ತೆಯ ಮೂಲಕ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಮೈನ್‌ಪುರಿ ಸದರ್ ಕೊಟ್ವಾಲಿ ಪ್ರದೇಶದ ಭದಾವರ್ ಹೌಸ್ ಬಳಿ ಈ ಘಟನೆ ನಡೆದಿದೆ. ಘಟನೆ ವೇಳೆ ಅವರು ಕಾರಿನಲ್ಲಿ ಒಬ್ಬರೇ ಇದ್ದರು. ಪೊಲೀಸರ ಪ್ರಕಾರ, ಟ್ರಕ್ ಚಾಲಕ ಇಟಾವಾ ಮೂಲದವನು.
“ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ, ನಂತರ ಅದನ್ನು 500 ಮೀಟರ್‌ಗೂ ಹೆಚ್ಚು ಎಳೆದಿದೆ. ಇಟಾವಾದಲ್ಲಿ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಎಸ್‌ಪಿ ಕಮಲೇಶ್ ದೀಕ್ಷಿತ್ ಹೇಳಿದ್ದಾರೆ.
ಅಪಘಾತದ ನಂತರ, ದೇವೇಂದ್ರ ಯಾದವ್ ಮೈನ್‌ಪುರಿ ಸದರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.
Published On - 1:30 pm, Mon, 8 August 22