BIG NEWS: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಓರ್ವ ವ್ಯಕ್ತಿ ಸಾವು, ಇಬ್ಬರಿಗೆ ಗಾಯ
ಚಂಬಾ ಜಿಲ್ಲೆಯಲ್ಲಿ ಇಂದು ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಚಂಬಾ ಜಿಲ್ಲೆಯಲ್ಲಿನ ಕಂದಾವರ ಗ್ರಾಮ ಪಂಚಾಯತ್ನಲ್ಲಿ ಮೇಘಸ್ಫೋಟದಿಂದಾಗಿ (Cloudburst) ಭಾರೀ ನಾಶನಷ್ಟವುಂಟಾಗಿದೆ. 15ರ ಹರೆಯದ ಬಾಲಕನೊಬ್ಬ ಮೃತಪಟ್ಟಿದ್ದು, ಐದಾರು ಮನೆಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಾಲೈ- ಕಂದಾವರ್ ಒಳಚರಂಡಿ ಮೇಲಿನ ಸೇತುವೆಗೆ ಹಾನಿ ಸಂಭವಿಸಿದ್ದು, ಕೃಷಿಭೂಮಿ ಮುಳುಗಿದೆ. ಮೇಘಸ್ಫೋಟದಿಂದಾಗಿ ಗುಳೆಲ್ ಗ್ರಾಮಕ್ಕೂ ಹಾನಿಯಾಗಿದೆ. ಚಂಬಾ-ಟೆಸ್ಸಾ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಘಟನೆಯ ನಂತರ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ರಕ್ಷಣಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಸಹ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಹಲವೆಡೆ ಭೂಕುಸಿತ ವರದಿಯಾಗಿವೆ. ಮಳೆಯಿಂದಾಗಿ ರಾಜ್ಯದೆಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
#WATCH | Cloud burst in Khandwa in Chamba of Himachal Pradesh, several roads, bridges closed pic.twitter.com/jkHkSA9cgH
ಇದನ್ನೂ ಓದಿ— ANI (@ANI) August 8, 2022
ಮೇಘಸ್ಫೋಟದಿಂದಾಗಿ ಎರಡು ಗ್ರಾಮಗಳು ಮುಳುಗಿದ್ದು ಭದೋಗ ಗ್ರಾಮದಲ್ಲಿ ವಿಜಯ್ ಕುಮಾರ್ ಎಂಬ 15ರ ಹರೆಯದ ಬಾಲಕ ಮೃತಪಟ್ಟಿದ್ದು ಇಬ್ಬರಿಗೆ ಗಾಯಗಳಾಗಿವೆ. ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಮೇಘಸ್ಫೋಟ ಮತ್ತು ಪ್ರವಾಹದಿಂದಾಗಿ ನೂರರಷ್ಟು ಜನರ ಬದುಕು ಅಸ್ತವ್ಯಸ್ತವಾಗಿದೆ.
Published On - 1:49 pm, Mon, 8 August 22