Azadi Ka Amrit Mahotsav: ಆಂಧ್ರಪ್ರದೇಶದಲ್ಲಿ 300ಮೀ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಬೃಹತ್ ರ‍್ಯಾಲಿ

ಶಾಖಪಟ್ಟಣಂನಲ್ಲಿ 300 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಭಾನುವಾರ ಬೃಹತ್ ಆಜಾದಿ ಕಾ ಅಮೃತ್ ಮಹೋತ್ಸವ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಹರ್ ಘರ್ ತಿರಂಗಾದ ಏಳನೇ ದಿನವನ್ನು ಗುರುತಿಸಿ, ವಿಕ್ಟರಿ ಅಟ್ ಸೀನಿಂದ ಪಾರ್ಕ್ ಹೋಟೆಲ್ ಜಂಕ್ಷನ್‌ವರೆಗೆ ನಡೆದ ರ್ಯಾಲಿಯಲ್ಲಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು

Azadi Ka Amrit Mahotsav: ಆಂಧ್ರಪ್ರದೇಶದಲ್ಲಿ 300ಮೀ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಬೃಹತ್ ರ‍್ಯಾಲಿ
National Flag Rall
TV9kannada Web Team

| Edited By: ಅಕ್ಷಯ್​ ಕುಮಾರ್​​

Aug 08, 2022 | 1:07 PM

ಆಂಧ್ರಪ್ರದೇಶ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 300 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಭಾನುವಾರ ಬೃಹತ್ ಆಜಾದಿ ಕಾ ಅಮೃತ್ ಮಹೋತ್ಸವ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಹರ್ ಘರ್ ತಿರಂಗಾದ ಏಳನೇ ದಿನವನ್ನು ಗುರುತಿಸಿ, ವಿಕ್ಟರಿ ಅಟ್ ಸೀನಿಂದ ಪಾರ್ಕ್ ಹೋಟೆಲ್ ಜಂಕ್ಷನ್‌ವರೆಗೆ ನಡೆದ ರ್ಯಾಲಿಯಲ್ಲಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಸುದ್ದಿ ಸಂಸ್ಥೆ ANI ಹಂಚಿಕೊಂಡ ಚಿತ್ರಗಳಲ್ಲಿ ಭಾಗವಹಿಸುವವರು ಮಾನವ ಸರಪಳಿಯನ್ನು ರಚಿಸುವುದನ್ನು ಕಾಣಬಹುದು.

ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಆಗಸ್ಟ್ 15 ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ವರೆಗೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 13 ಮತ್ತು 15 ರ ನಡುವೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಅಥವಾ ಪ್ರದರ್ಶಿಸುವ ಮೂಲಕ ಹರ್ ಘರ್ ತಿರಂಗಾ ಆಂದೋಲನವನ್ನು ಮಾಡುವಂತೆ ನಾಗರಿಕರಿಗೆ ಮನವಿ ಮಾಡಿದ್ದರು. ಜೊತೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಖಪುಟದ ಚಿತ್ರ (profile picture)ದಲ್ಲಿ ತಿರಂಗಾ ಧ್ವಜದ ಚಿತ್ರವನ್ನು ಹಾಕುವಂತೆ ಹೇಳಿದ್ದಾರೆ.

ಭಾರತದ 75ನೇ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗದ ಆಚರಣೆಯನ್ನು ಪರಿಶೀಲಿಸಲು ಮೂರನೇ ರಾಷ್ಟ್ರೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಗಳು ಯುವಕರಿಗೆ ನೆಲದ ವಾಸ್ತವತೆಯನ್ನು ಪರಿಚಯಿಸುವ ಅವಕಾಶವಾಗಿದೆ ಎಂದು ಹೇಳಿದರು. ಆಜಾದಿ ಕಾ ಅಮೃತ್ ಮಹೋತ್ಸವದ ಯಶಸ್ಸಿಗೆ ದೇಶದ ಪ್ರತಿಯೊಬ್ಬ ನಾಗರಿಕನ ಕೊಡುಗೆ ಕಾರಣ, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಆಜಾದಿ ಕಾ ಅಮೃತ್ ಮಹೋತ್ಸವದ ಬಗ್ಗೆ ಜನಸಾಮಾನ್ಯರಿಗೆ ತಿಳಿಸಸಲು ಮತ್ತು ಅದರಲ್ಲಿ ಭಾಗವಹಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada