Quit India Movement Day ಸ್ವಾತಂತ್ರ್ಯ ಹೋರಾಟದ ಆಗಸ್ಟ್ ಕ್ರಾಂತಿಯ ಕಹಳೆ ‘ಭಾರತ ಬಿಟ್ಟು ತೊಲಗಿ ಚಳವಳಿ’

ಮಹಾತ್ಮ ಗಾಂಧಿ ನೇತೃತ್ವದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಬಾಂಬೆಯಲ್ಲಿ 1942 ಆಗಸ್ಟ್8ರಂದು ಕ್ವಿಟ್ ಇಂಡಿಯಾ ನಿರ್ಣಯವನ್ನು ಮಂಡಿಸಿತ್ತು.

Quit India Movement Day ಸ್ವಾತಂತ್ರ್ಯ ಹೋರಾಟದ ಆಗಸ್ಟ್ ಕ್ರಾಂತಿಯ ಕಹಳೆ ‘ಭಾರತ ಬಿಟ್ಟು ತೊಲಗಿ ಚಳವಳಿ’
ಕ್ವಿಟ್ ಇಂಡಿಯಾ ಚಳವಳಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 08, 2022 | 1:03 PM

ಆಗಸ್ಟ್ 8, 1942ರಂದು ಮಹಾತ್ಮಾ ಗಾಂಧಿ ಕ್ವಿಟ್ ಇಂಡಿಯಾ ಚಳವಳಿ (Quit India Movement) ಅಥವಾ ಭಾರತ ಬಿಟ್ಟು ತೊಲಗಿ ಆಂದೋಲನ ಆರಂಭಿಸಿದ್ದು. ಆಗಸ್ಟ್ ಕ್ರಾಂತಿ (August Kranti) ಎಂದು ಕರೆಯಲ್ಪಡುವ ಈ ಚಳುವಳಿಯ ನೆನಪಿಗೆ ಆಗಸ್ಟ್ 8ನ್ನು ಕ್ವಿಟ್ ಇಂಡಿಯಾ ಚಳವಳಿ ದಿನ ಎಂದು ಸ್ಮರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಧಾನ ಪಾತ್ರವಹಿಸಿತ್ತು. ಮಹಾತ್ಮ ಗಾಂಧಿ ಅವರು ಈ ಚಳವಳಿಯನ್ನು ಆರಂಭಿಸಿ ಮಾಡಿದ ಭಾಷಣದಲ್ಲಿ ಈ ಹೋರಾಟ ಮಾಡು ಇಲ್ಲವೇ ಮಡಿ ಎಂದು ಹೇಳಿದ್ದರು. ಅಸಹಕಾರ ಚಳವಳಿಯು ಶಾಂತ ಮತ್ತು ಅಹಿಂಸಾ ಚಳವಳಿ ಆಗಿದ್ದು, ಬ್ರಿಟಿಷರನ್ನು ಭಾರತದಿಂದ ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.

ಇತಿಹಾಸ

ಮಹಾತ್ಮ ಗಾಂಧಿ ನೇತೃತ್ವದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಬಾಂಬೆಯಲ್ಲಿ 1942 ಆಗಸ್ಟ್8ರಂದು ಕ್ವಿಟ್ ಇಂಡಿಯಾ ನಿರ್ಣಯವನ್ನು ಮಂಡಿಸಿದ್ದು, ಅವು ಹೀಗಿವೆ

1. ಭಾರತದ ಮೇಲಿನ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ತಕ್ಷಣವೇ ಕೊನೆಗೊಳಿಸಬೇಕು

2. ಎಲ್ಲಾ ರೀತಿಯ ಫ್ಯಾಸಿಸಂ ಮತ್ತು ಸಾಮ್ರಾಜ್ಯಶಾಹಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಕ್ತ ಭಾರತದ ಬದ್ಧತೆಯ ಘೋಷಣೆ.

3. ಬ್ರಿಟಿಷರು ಹೋದ ನಂತರ ಭಾರತದಲ್ಲಿ ತಾತ್ಕಾಲಿಕ ಸರ್ಕಾರವನ್ನು ರಚಿಸಬೇಕು.

4. ಬ್ರಿಟಿಷ್ ಆಡಳಿತದ ವಿರುದ್ಧ ನಾಗರಿಕ ಅಸಹಕಾರ ಚಳುವಳಿ.

ಆಂದೋಲನವನ್ನು ವಸಾಹತುಶಾಹಿ ಸರ್ಕಾರವು ಹಿಂಸಾತ್ಮಕ ರೀತಿಯಲ್ಲಿ ಹತ್ತಿಕ್ಕಿತು. ಸುಮಾರು ಒಂದು ಲಕ್ಷ ಜನರನ್ನು ಬಂಧಿಸಲಾಯಿತು, ಜನರ ಮೇಲೆ ಲಾಠಿ ಪ್ರಹಾರ ಮಾಡಲಾಯಿತು. ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಯಿತು ಮತ್ತು ಕಾಂಗ್ರೆಸ್ ಪಕ್ಷವನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಲಾಯಿತು.

ಹೋರಾಟದ  ಮಹತ್ವ

ಈ ಚಳುವಳಿ ತುಂಬಾ ಮಹತ್ವದ್ದಾಗಿದ್ದು, ಬ್ರಿಟಿಷರು ಭಾರತ ಬಿಟ್ಟು ತೊಲಗುವುದಕ್ಕೆ ಕಾರಣವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಪ್ರಾಣವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ

ಕ್ವಿಟ್ ಇಂಡಿಯಾ ಚಳವಳಿ

1. ಬ್ರಿಟಿಷ್ ಪಡೆಗಳಿಂದ ಹಿಂಸಾತ್ಮಕ ನಿಗ್ರಹದ ಬೆದರಿಕೆಗಳ ಹೊರತಾಗಿಯೂ ಜನರು ಹೋರಾಟ ಮತ್ತು ಹೋರಾಟವನ್ನು ಮುಂದುವರೆಸಿದರು.

2. ಕ್ರಿಪ್ಸ್ ಮಿಷನ್ ಮಹಾತ್ಮಾ ಗಾಂಧಿಯನ್ನು ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಲು ಪ್ರಚೋದಿಸಿತು. ಕ್ರಿಪ್ಸ್ ಮಿಷನ್ 2 ನೇ ಮಹಾಯುದ್ಧದಲ್ಲಿ ಭಾರತದಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಪಡೆಯಲು ಬ್ರಿಟಿಷ್ ಸರ್ಕಾರದ ವಿಫಲ ಪ್ರಯತ್ನವಾಗಿತ್ತು.

3. ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಯೂಸುಫ್ ಮೆಹರ್ ಅಲಿ ಅವರು ‘ಕ್ವಿಟ್ ಇಂಡಿಯಾ’ ಎಂಬ ಪದವನ್ನು ಸೃಷ್ಟಿಸಿದರು. ಇವರು ಮುಂಬೈನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು.

4. ಮಹಾತ್ಮ ಗಾಂಧಿಯವರ ‘ಮಾಡು ಇಲ್ಲವೇ ಮಡಿ’ ಭಾಷಣದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರನ್ನು ಯಾವುದೇ ವಿಚಾರಣೆಗೊಳಪಡಿಸದೆ ಬಂಧಿಸಲಾಯಿತು.

5. ಜನರು ವಸಾಹತುಶಾಹಿ ವಿರುದ್ಧ ದಂಗೆ ಎದ್ದು ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸಿದರು, . ಬ್ಯಾಂಕುಗಳನ್ನು ಲೂಟಿ ಮಾಡಿದರು ಮತ್ತು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದರು.

Published On - 1:02 pm, Mon, 8 August 22

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್