ಲಕ್ನೋ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಉತ್ತರ ಪ್ರದೇಶದ (Uttar Pradesh Police) ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ (Independence Day) ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸರು ರಸ್ತೆ ಮಧ್ಯೆ ಜನರ ಜೊತೆ ಸೇರಿ ಹಾವಿನಂತೆ ನಾಗಿಣಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ (Video Viral) ಆಗಿತ್ತು. ಈ ವಿಡಿಯೋವನ್ನು ಗಮನಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಆ ಇಬ್ಬರು ಪೊಲೀಸರನ್ನು ವರ್ಗಾವಣೆ ಮಾಡಿದ್ದಾರೆ.
ಉತ್ತರ ಪ್ರದೇಶದ ಕೊತ್ವಾಲಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನದಂದು ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ನಾಗಿಣಿ ನೃತ್ಯ ಮಾಡುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ಹುಲಿವೇಷದವರ ಜೊತೆ ಸೇರಿ ಡ್ಯಾನ್ಸ್ ಮಾಡಿದ ಉಡುಪಿಯ ಬಾಲಕಿ; ಈ ಮುದ್ದಾದ ವಿಡಿಯೋ ಮಿಸ್ ಮಾಡಬೇಡಿ
ಈ ವಿಡಿಯೋ ಕ್ಲಿಪ್‌ನಲ್ಲಿ ಪೊಲೀಸ್ ಅಧಿಕಾರಿಗಳು ಬ್ಯಾಂಡ್‌ನ ಬೀಟ್‌ಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಬ್ಇನ್‌ಸ್ಪೆಕ್ಟರ್ ಸ್ಯಾಕ್ಸೋಫೋನ್ ಅನ್ನೇ ಪುಂಗಿಯಂತೆ ಹಿಡಿದು ಊದುತ್ತಾ ಸುತ್ತಲೂ ತಿರುಗುತ್ತಿದ್ದರೆ, ಕಾನ್‌ಸ್ಟೆಬಲ್ ನಾಗಿಣಿಯಂತೆ ನೃತ್ಯವನ್ನು ಮಾಡಿದ್ದಾರೆ. ಈ ನೃತ್ಯಕ್ಕೆ ಅಲ್ಲಿದ್ದ ಹಲವಾರು ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಚಪ್ಪಾಳೆ ತಟ್ಟುವುದನ್ನು ವಿಡಿಯೋದಲ್ಲಿ ಕಾಣಬಹುದು.
जब दारोगा जी बने सपेरा, नागिन कांस्टेबल को अपनी बीन पर नचाया।? pic.twitter.com/eVHCx3hJgo
— Jaiky Yadav (@JaikyYadav16) August 16, 2022
ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಟ್ವಿಟರ್‌ನಲ್ಲಿ 76,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.