ಮುಂಬೈ-ಫ್ರಾಂಕ್‌ಫರ್ಟ್ ವಿಮಾನದಲ್ಲಿ ಬಾಂಬ್ ಬೆದರಿಕೆಯ ನಂತರ ಟರ್ಕಿಯಲ್ಲಿ ಸಿಲುಕಿದ ಪ್ರಯಾಣಿಕರನ್ನು ಕರೆತರಲಿದೆ ವಿಸ್ತಾರಾ ಏರ್‌ಲೈನ್ಸ್

|

Updated on: Sep 07, 2024 | 3:02 PM

ಗ್ರಾಹಕರಿಗೆ ಉಪಹಾರ ಮತ್ತು ಊಟವನ್ನು ನೀಡುವುದು ಸೇರಿದಂತೆ ಅವರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಅವರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಎಂದಿನಂತೆ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಭದ್ರತೆ ಮತ್ತು ಸುರಕ್ಷತೆಯು ವಿಸ್ತಾರಾಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವಿಸ್ತಾರಾ ಏರ್​​ಲೈನ್ಸ್ ಹೇಳಿದೆ.

ಮುಂಬೈ-ಫ್ರಾಂಕ್‌ಫರ್ಟ್ ವಿಮಾನದಲ್ಲಿ ಬಾಂಬ್ ಬೆದರಿಕೆಯ ನಂತರ ಟರ್ಕಿಯಲ್ಲಿ ಸಿಲುಕಿದ ಪ್ರಯಾಣಿಕರನ್ನು ಕರೆತರಲಿದೆ ವಿಸ್ತಾರಾ ಏರ್‌ಲೈನ್ಸ್
ವಿಸ್ತಾರಾ
Follow us on

ದೆಹಲಿ ಸೆಪ್ಟೆಂಬರ್ 07: ಟರ್ಕಿಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ವಿಸ್ತಾರಾ ಏರ್‌ಲೈನ್ಸ್ (Vistara Airlines)  ಶನಿವಾರ ಪರ್ಯಾಯ ವಿಮಾನವನ್ನು ರವಾನಿಸಲಿದೆ. ಮುಂಬೈನಿಂದ ಶುಕ್ರವಾರದಂದು ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ (Bomb Threat) ಬಂದ ಕಾರಣ ವಿಮಾನವನ್ನು ಟರ್ಕಿಯ ಎರ್ಜುರಮ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಈ ಬಗ್ಗೆ ಎಕ್ಸ್​​ನಲ್ಲಿ ಅಪ್ಡೇಟ್ಸ್ ನೀಡಿದ ವಿಮಾನಯಾನ ಸಂಸ್ಥೆ, “ಎಲ್ಲಾ ಅಗತ್ಯ ತಪಾಸಣೆಗಳನ್ನು ನಡೆಸಲಾಗಿದೆ. ಸಿಬ್ಬಂದಿ ಮತ್ತು ವಿಮಾನದೊಂದಿಗೆ ಗ್ರಾಹಕರನ್ನು ಭದ್ರತಾ ಏಜೆನ್ಸಿಗಳು ತೆರವುಗೊಳಿಸಿವೆ. ಸಿಬ್ಬಂದಿ ತಮ್ಮ ಕರ್ತವ್ಯದ ಸಮಯದ ಮಿತಿಯನ್ನು ಮೀರಿರುವುದರಿಂದ, ನಾವು ಹೊಸ ಸಿಬ್ಬಂದಿಯೊಂದಿಗೆ ಪರ್ಯಾಯ ವಿಮಾನವನ್ನು ಟರ್ಕಿಯ ಎರ್ಜುರಮ್ ವಿಮಾನ ನಿಲ್ದಾಣಕ್ಕೆ ಕಳುಹಿಸುತ್ತಿದ್ದೇವೆ, ಅದು 1225 ಗಂಟೆಗಳ (ಸ್ಥಳೀಯ ಸಮಯ) ಕ್ಕೆ ಅಲ್ಲಿಗೆ ತಲುಪಿ 1430 ಗಂಟೆಗಳವರೆಗೆ (ಸ್ಥಳೀಯ ಸಮಯ) ಎಲ್ಲರೊಂದಿಗೆ ಅಲ್ಲಿಂದ ಫ್ರಾಂಕ್‌ಫರ್ಟ್‌ಗೆ ಹೊರಡುವ ನಿರೀಕ್ಷೆಯಿದೆ.

ಗ್ರಾಹಕರಿಗೆ ಉಪಹಾರ ಮತ್ತು ಊಟವನ್ನು ನೀಡುವುದು ಸೇರಿದಂತೆ ಅವರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಅವರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಎಂದಿನಂತೆ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಭದ್ರತೆ ಮತ್ತು ಸುರಕ್ಷತೆಯು ವಿಸ್ತಾರಾಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದೆ.

ಏನಾಯಿತು?

ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನ ಯುಕೆ 27, ಶುಕ್ರವಾರ ಮಧ್ಯಾಹ್ನ 1.01 ಕ್ಕೆ ಒಂದು ಗಂಟೆ ವಿಳಂಬದ ನಂತರ ಟೇಕ್ ಆಫ್ ಆಗಿದ್ದು, ಶುಕ್ರವಾರ ಸ್ಥಳೀಯ ಸಮಯ 5.30 ಕ್ಕೆ ಜರ್ಮನಿಯ ಫ್ರಾಂಕ್‌ಫರ್ಟ್ ತಲುಪುವ ನಿರೀಕ್ಷೆಯಿದೆ. ಆದಾಗ್ಯೂ, ವಿಸ್ತಾರಾ ಮೂಲಗಳ ಪ್ರಕಾರ, ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನದಲ್ಲಿ ಬಾಂಬ್ ಬೆದರಿಕೆಯನ್ನು ಸೂಚಿಸುವ ಟಿಪ್ಪಣಿಯನ್ನು ಪತ್ತೆ ಮಾಡಿದ ನಂತರ ಅದನ್ನು ಟರ್ಕಿಗೆ ತಿರುಗಿಸಲಾಯಿತು. ಏರ್‌ಲೈನ್ಸ್ ಪ್ರಕಾರ, ವಿಮಾನವು ಸ್ಥಳೀಯ ಸಮಯ ರಾತ್ರಿ 7.05 ಕ್ಕೆ ಎರ್ಜುರಮ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.

ವಿಮಾನದ ಶೌಚಾಲಯದಲ್ಲಿ “ಬಾಂಬ್ ಆನ್ ಬೋರ್ಡ್” ಎಂದು ಸೂಚಿಸುವ ಟಿಪ್ಪಣಿ ಸಿಕ್ಕಿತ್ತು.ಬಾಂಬ್ ವಿಲೇವಾರಿ ತಂಡಗಳು ಬಂದು ವಿಮಾನವನ್ನು ಶೋಧಿಸಲಾಯಿತು. ಅದರ 234 ಪ್ರಯಾಣಿಕರು ಮತ್ತು 13 ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು.ಟಿಪ್ಪಣಿ ಬಿಟ್ಟು ಹೋದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಎರ್ಜುರಮ್ ಗವರ್ನರ್ ಮುಸ್ತಫಾ ಸಿಫ್ಟಿ ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಆರಂಭದಲ್ಲಿ, ವಿಮಾನವನ್ನು ಉತ್ತರ ಟರ್ಕಿಯ ಓರ್ಡುವಿನಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿಸಲು ನಿರ್ಧರಿಸಲಾಯಿತು, ಆದರೆ ನಿರ್ಮಾಣ ಕಾರ್ಯದಿಂದಾಗಿ, ಅಂತಿಮವಾಗಿ ಎರ್ಜುರಮ್‌ಗೆ ನಿರ್ದೇಶಿಸುವ ಮೊದಲು ಅದನ್ನು ಟ್ರಾಬ್ಜಾನ್‌ಗೆ ತಿರುಗಿಸಲಾಯಿತು. ಕಡಿಮೆ ದಟ್ಟಣೆಯ ವಾಯು ಸಂಚಾರಕ್ಕಾಗಿ ಎರ್ಜುರಮ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಸಿಫ್ಟಿ ವಿವರಿಸಿದರು. ಪರಿಣಾಮವಾಗಿ, ಎರ್ಜುರಮ್‌ನಲ್ಲಿ ಎಲ್ಲಾ ನಿರ್ಗಮನಗಳು ಮತ್ತು ಲ್ಯಾಂಡಿಂಗ್‌ಗಳನ್ನು ಸ್ಥಳೀಯ ಸಮಯ ರಾತ್ರಿ 9 ಗಂಟೆಯವರೆಗೆ ನಿಲ್ಲಿಸಲಾಯಿತು.

ಇದನ್ನೂ ಓದಿ: ದೆಹಲಿ-ವಾರಣಾಸಿ ಇಂಡಿಗೋ ವಿಮಾನದಲ್ಲಿ ಕೈಕೊಟ್ಟ ಎಸಿ; ಅಸ್ವಸ್ಥರಾದ ಪ್ರಯಾಣಿಕರು

ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ UK27 ವಿಮಾನವನ್ನು ಭದ್ರತಾ ಕಾರಣಗಳಿಗಾಗಿ ಟರ್ಕಿಯ ಎರ್ಜುರಮ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದ. ಸ್ಥಳೀಯ ಸಮಯ 7.05 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಶುಕ್ರವಾರ ಏರ್‌ಲೈನ್ಸ್ ಘೋಷಿಸಿತು. ವಿಮಾನದಲ್ಲಿದ್ದ ಪ್ರಯಾಣಿಕರು ಅಥವಾ ಸಿಬ್ಬಂದಿಯ ಸಂಖ್ಯೆಯನ್ನು ವಿಮಾನಯಾನ ಸಂಸ್ಥೆಯು ನಿರ್ದಿಷ್ಟಪಡಿಸಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ