AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ-ವಾರಣಾಸಿ ಇಂಡಿಗೋ ವಿಮಾನದಲ್ಲಿ ಕೈಕೊಟ್ಟ ಎಸಿ; ಅಸ್ವಸ್ಥರಾದ ಪ್ರಯಾಣಿಕರು

ಸೆಪ್ಟೆಂಬರ್ 5, 2024 ರಂದು ದೆಹಲಿಯಿಂದ ವಾರಣಾಸಿಗೆ ಹಾರಾಟ ನಡೆಸುತ್ತಿರುವ 6E 2235 ಫ್ಲೈಟ್‌ನಲ್ಲಿ ಅನುಭವಿಸಿದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಅಸ್ವಸ್ಥತೆಗೆ ಕ್ಯಾಬಿನ್ ತಾಪಮಾನದಲ್ಲಿನ ಏರಿಳಿತಗಳು ಕಾರಣವೆಂದು ಹೇಳಲಾಗಿದೆ, ಇದನ್ನು ಪ್ರಯಾಣಿಕರ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ಸರಿಹೊಂದಿಸಲಾಗಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿ-ವಾರಣಾಸಿ ಇಂಡಿಗೋ ವಿಮಾನದಲ್ಲಿ ಕೈಕೊಟ್ಟ ಎಸಿ; ಅಸ್ವಸ್ಥರಾದ ಪ್ರಯಾಣಿಕರು
ಇಂಡಿಗೋ ಪ್ರಯಾಣಿಕರು
ರಶ್ಮಿ ಕಲ್ಲಕಟ್ಟ
|

Updated on: Sep 07, 2024 | 2:29 PM

Share

ದೆಹಲಿ ಸೆಪ್ಟೆಂಬರ್ 07: ದಿಲ್ಲಿಯಿಂದ ವಾರಣಾಸಿಗೆ (Delhi-Varanasi) ತೆರಳುತ್ತಿದ್ದ ಇಂಡಿಗೋ (Indigo) ವಿಮಾನದ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಸಮಸ್ಯೆ ತಲೆದೋರಿದ್ದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. 6E 2235 ವಿಮಾನದಲ್ಲಿ AC ಕಾರ್ಯನಿರ್ವಹಿಸದ ಕಾರಣ ಹಲವಾರು ಪ್ರಯಾಣಿಕರು ಅಸ್ವಸ್ಥರಾಗಿದ್ದು ಉಸಿರುಗಟ್ಟುವಿಕೆಗೆ ದೂರು ನೀಡಿದರು. ಗುರುವಾರ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನದೊಳಗೆ ಕೋಪಗೊಂಡ ಪ್ರಯಾಣಿಕರು ಪ್ರತಿಭಟನೆ ನಡೆಸುತ್ತಿರುವುದು ವಿಡಿಯೊದಲ್ಲಿದೆ. ಕೆಲವರು ಗಾಳಿ ಬೀಸಲು ವಿಮಾನದಲ್ಲಿನ ಮ್ಯಾಗಜೀನ್‌ಗಳು ಮತ್ತು ಏರ್‌ಕ್ರಾಫ್ಟ್ ಸುರಕ್ಷತಾ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ.

ಕೆಲವು ವರದಿಗಳ ಪ್ರಕಾರ, ಕೆಲವು ಮಹಿಳಾ ಪ್ರಯಾಣಿಕರ ಆರೋಗ್ಯ ಹದಗೆಟ್ಟಿದೆ. ಒಬ್ಬ ಮಹಿಳೆ ಮೂರ್ಛೆ ಹೋಗಿದ್ದಾರೆ. ವಾರಣಾಸಿಗೆ ಹೋಗುವ ವಿಮಾನದ ಪ್ರಯಾಣಿಕರೊಬ್ಬರು ಯಾರಿಗಾದರೂ ಏನಾದರೂ ಸಂಭವಿಸಿದರೆ ಯಾರು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಾರೆ ಎಂದು ಕೇಳಿದರು.ತ್ತು ಟೇಕ್-ಆಫ್ ಆಗುವ ಮೊದಲು ತಮ್ಮ ಪುನರಾವರ್ತಿತ ದೂರುಗಳ ಹೊರತಾಗಿಯೂ ಸಮಸ್ಯೆಯನ್ನು ಸರಿಪಡಿಸಲು ತಂತ್ರಜ್ಞರನ್ನು ಕರೆಯಲು ವಿಮಾನಯಾನ ಸಂಸ್ಥೆ ಕಾಳಜಿ ವಹಿಸಲಿಲ್ಲ ಎಂದು ಅವರ ದೂರಿದ್ದಾರೆ.

ಕ್ಷಮೆಯಾಚಿಸಿದ ಇಂಡಿಗೋ

ವಿಮಾನಯಾನ ಸಂಸ್ಥೆಯು ತನ್ನ ದೆಹಲಿ-ವಾರಣಾಸಿ ವಿಮಾನದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದ್ದು ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಪ್ರಯಾಣಿಕರಿಗೆ ಸಹಾಯವನ್ನೊದಗಿಸಿದೆ ಎಂದು ಹೇಳಿದೆ. ವಿಮಾನದ ಹವಾನಿಯಂತ್ರಣ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕ್ಯಾಬಿನ್ ತಾಪಮಾನದಲ್ಲಿನ ಏರಿಳಿತಗಳು ಉಸಿರುಗಟ್ಟುವಿಕೆಗೆ ಕಾರಣವಾಯಿತು ಎಂದು ಅದು ಹೇಳಿದೆ. “ಸೆಪ್ಟೆಂಬರ್ 5, 2024 ರಂದು ದೆಹಲಿಯಿಂದ ವಾರಣಾಸಿಗೆ ಹಾರಾಟ ನಡೆಸುತ್ತಿರುವ 6E 2235 ಫ್ಲೈಟ್‌ನಲ್ಲಿ ಅನುಭವಿಸಿದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಅಸ್ವಸ್ಥತೆಗೆ ಕ್ಯಾಬಿನ್ ತಾಪಮಾನದಲ್ಲಿನ ಏರಿಳಿತಗಳು ಕಾರಣವೆಂದು ಹೇಳಲಾಗಿದೆ, ಇದನ್ನು ಪ್ರಯಾಣಿಕರ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ಸರಿಹೊಂದಿಸಲಾಗಿದೆ. ಪರಿಸ್ಥಿತಿಯನ್ನು ಪರಿಹರಿಸಲು ನಮ್ಮ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಪ್ರಯಾಣಿಕರಿಗೆ ಸಹಾಯವೊದಗಿಸಿದ್ದಾರೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ಎಂದಿಗೂ ಪುನಃಸ್ಥಾಪಿಸಲಾಗುವುದಿಲ್ಲ: ಅಮಿತ್ ಶಾ

ಜೂನ್‌ನಲ್ಲಿ, ದೆಹಲಿಯಿಂದ ಬಾಗ್ಡೋಗ್ರಾಕ್ಕೆ ಇಂಡಿಗೋ ವಿಮಾನದಲ್ಲಿ ವಿಮಾನದ ಹವಾನಿಯಂತ್ರಣವು ಒಂದು ಗಂಟೆಗಳ ಕಾಲ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಇದೇ ರೀತಿಯ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದವು. ಅನೇಕ ಪ್ರಯಾಣಿಕರು, ಹೆಚ್ಚಾಗಿ ವಯಸ್ಸಾದವರು, ಉಸಿರಾಟದ ಸಮಸ್ಯೆ ಮತ್ತು ಉಸಿರುಗಟ್ಟುವಿಕೆ ಬಗ್ಗೆ ದೂರು ನೀಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ