AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎನ್‌ಜಿಎ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಇಲ್ಲ; ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಸ್ ಜೈಶಂಕರ್

ಯುಎನ್‌ಜಿಎ ಜನರಲ್ ಡಿಬೇಟ್‌ನಲ್ಲಿ ಮೋದಿ ಸಾಂಪ್ರದಾಯಿಕ ಭಾಷಣ ಮಾಡದಿದ್ದರೂ, ಅವರು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 22 ರಂದು ಅವಪು ಲಾಂಗ್ ಐಲ್ಯಾಂಡ್‌ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಪ್ರಮುಖ ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರ ದೊಡ್ಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಯುಎನ್‌ಜಿಎ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಇಲ್ಲ; ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಸ್ ಜೈಶಂಕರ್
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Sep 07, 2024 | 1:18 PM

Share

ದೆಹಲಿ ಸೆಪ್ಟೆಂಬರ್ 07: ಈ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭಾಷಣವನ್ನು ಜಗತ್ತೇ ನಿರೀಕ್ಷಿಸುತ್ತಿರುವಾಗ, ಯುಎನ್ ಬಿಡುಗಡೆ ಮಾಡಿದ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೆಪ್ಟೆಂಬರ್ 28 ರಂದು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.  ಜನರಲ್ ಅಸೆಂಬ್ಲಿ ಮತ್ತು ಕಾನ್ಫರೆನ್ಸ್ ಮ್ಯಾನೇಜ್‌ಮೆಂಟ್‌ನ ಅಂಡರ್-ಸೆಕ್ರೆಟರಿ-ಜನರಲ್, ಮೂವ್ಸೆಸ್ ಅಬೆಲಿಯನ್, ಸದಸ್ಯ ರಾಷ್ಟ್ರಗಳ ನಡುವಿನ ಸಂವಾದಗಳ ಮೂಲಕ ಪರಿಷ್ಕೃತ ಪಟ್ಟಿಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ವರ್ಷ 79 ನೇ ಯುಎನ್‌ಜಿಎ ಸಾಮಾನ್ಯ ಚರ್ಚೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ 7 ದಿನಗಳವರೆಗೆ ಮುಂದುವರಿಯುತ್ತದೆ. ಚರ್ಚೆಯ ಉದ್ಘಾಟನಾ ಸಮಾರಂಭ ಬ್ರೆಜಿಲ್​​ನಲ್ಲಿ ಸೆಪ್ಟೆಂಬರ್ 24 ರಂದು ನಡೆಯಲಿದೆ. ಚರ್ಚೆಯನ್ನು ಪ್ರಾರಂಭಿಸಿದ ನಂತರ, ಯುಎಸ್ ಅಧ್ಯಕ್ಷ ಜೋ ಬೈಡನ್ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ತಮ್ಮ ಅಂತಿಮ ಭಾಷಣವನ್ನು ನೀಡಲಿದ್ದಾರೆ.

ಯುಎನ್‌ಜಿಎ ಜನರಲ್ ಡಿಬೇಟ್‌ನಲ್ಲಿ ಮೋದಿ ಸಾಂಪ್ರದಾಯಿಕ ಭಾಷಣ ಮಾಡದಿದ್ದರೂ, ಅವರು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 22 ರಂದು ಅವಪು ಲಾಂಗ್ ಐಲ್ಯಾಂಡ್‌ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಪ್ರಮುಖ ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರ ದೊಡ್ಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮವು ಅವರ ಸಾಂಪ್ರದಾಯಿಕ 2014 ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಭಾಷಣದ ಒಂದು ದಶಕವನ್ನು ಗುರುತಿಸುತ್ತದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಸುಮಾರು 24,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ.  ಇದಲ್ಲದೆ, ಮೋದಿ ಅವರು ಸೆಪ್ಟೆಂಬರ್ 22-23 ರಂದು ಯುಎನ್‌ನ “ಸಮ್ಮಿಟ್ ಆಫ್ ದಿ ಫ್ಯೂಚರ್” ನಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಜಾಗತಿಕ ನಾಯಕರು ಜಾಗತಿಕ ಡಿಜಿಟಲ್ ಒಪ್ಪಂದ ಮತ್ತು ಭವಿಷ್ಯದ ಪೀಳಿಗೆಯ ಘೋಷಣೆಯನ್ನು ಒಳಗೊಂಡಿರುವ “ಭವಿಷ್ಯಕ್ಕಾಗಿ ಒಪ್ಪಂದ” ಕುರಿತು ಚರ್ಚಿಸಲಿದ್ದಾರೆ.

ಇದನ್ನೂ ಓದಿ: Manipur Violence: ರಾಕೆಟ್ ದಾಳಿಯ ನಂತರ ಮಣಿಪುರದ ಜಿರಿಬಾಮ್​​ನಲ್ಲಿ ಹಿಂಸಾಚಾರ, 4 ಸಾವು

ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವಿನ ಸ್ಪರ್ಧೆಯನ್ನು ಒಳಗೊಂಡಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಹೊಂದಿಕೆಯಾಗುವ ಮಹತ್ವದ ಘಟ್ಟದಲ್ಲಿ ಪಿಎಂ ಮೋದಿ ಅವರ ಈ ಭೇಟಿ ಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ