ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ಎಂದಿಗೂ ಪುನಃಸ್ಥಾಪಿಸಲಾಗುವುದಿಲ್ಲ: ಅಮಿತ್ ಶಾ
ಯಾವುದೇ ಶಕ್ತಿಯು (ಜಮ್ಮು ಮತ್ತು ಕಾಶ್ಮೀರದಲ್ಲಿ) ಸ್ವಾಯತ್ತತೆಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವುದಾಗಿ ಹೇಳುತ್ತಿದ್ದಾರೆ. ನಾನು ಅಬ್ದುಲ್ಲಾ ಸಾಹಬ್ ಮತ್ತು ರಾಹುಲ್ ಬಾಬಾರನ್ನು ಕೇಳಲು ಬಯಸುತ್ತೇನೆ, ನೀವು ಅದನ್ನು ಹೇಗೆ ಹಿಂದಿರುಗಿಸುತ್ತೀರಿ, ಹೇಳಿ? ಎಂದು ಅಮಿತ್ ಶಾ ಕೇಳಿದ್ದಾರೆ.
ಶ್ರೀನಗರ ಸೆಪ್ಟೆಂಬರ್ 07: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಸ್ವಾಯತ್ತತೆಯ ಪುನಸ್ಥಾಪಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಶನಿವಾರ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸ್ಥಾನಮಾನವನ್ನು ಮತ್ತೊಮ್ಮೆ ನೀಡುವುದಾಗಿ ಯುಟಿ ಪ್ರದೇಶದ ಜನರಿಗೆ ಭರವಸೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಕೇಂದ್ರಕ್ಕೆ ಮಾತ್ರ ಹಾಗೆ ಮಾಡುವ ಅಧಿಕಾರವಿದೆ ಎಂದು ಹೇಳಿದರು.
ಜಮ್ಮುವಿನಲ್ಲಿ ಬಿಜೆಪಿಯ ‘ವಿಜಯ್ ಸಂಕಲ್ಪ್’ ಬೂತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಳೆಯ ಆಡಳಿತವನ್ನು ಮರಳಿ ತರುವುದಾಗಿ ಪ್ರತಿಪಕ್ಷಗಳು ಹೇಳುತ್ತವೆ. ಅಂದರೆ ಅವರು ಜನರಿಗೆ ಆಗುತ್ತಿರುವ ಅನ್ಯಾಯವನ್ನು ಅವರು ಮರಳಿ ತರುತ್ತಾರೆ. ಕಣಿವೆಯಲ್ಲಿ ರಕ್ತಪಾತ ಮತ್ತು ಸಾಮೂಹಿಕ ಹತ್ಯೆಗಳಿಗೆ ಕಾರಣವಾದ ಅದೇ ಸ್ವಾಯತ್ತತೆಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡುವುದಾಗಿ ಅವರು ಹೇಳುತ್ತಾರೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ಎಂದಿಗೂ ಪುನಃಸ್ಥಾಪಿಸಲಾಗುವುದಿಲ್ಲ.
ಅಮಿತ್ ಶಾ ಭಾಷಣ
#WATCH | Jammu: Union Home Minister Amit Shah says, “…They want to release those who are involved in stone-pelting and terrorism. Their aim is to release them and bring terrorism to our Jammu, Poonch, Rajouri where there is peace. Tell me will you allow terrorism to come to… pic.twitter.com/OUAZvCd01u
— ANI (@ANI) September 7, 2024
“ಯಾವುದೇ ಶಕ್ತಿಯು (ಜಮ್ಮು ಮತ್ತು ಕಾಶ್ಮೀರದಲ್ಲಿ) ಸ್ವಾಯತ್ತತೆಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ರಾಹುಲ್ ಬಾಬಾ ( ರಾಹುಲ್ ಗಾಂಧಿ), ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವುದಾಗಿ ಹೇಳುತ್ತಿದ್ದಾರೆ. ನಾನು ಅಬ್ದುಲ್ಲಾ ಸಾಹಬ್ ಮತ್ತು ರಾಹುಲ್ ಬಾಬಾರನ್ನು ಕೇಳಲು ಬಯಸುತ್ತೇನೆ, ನೀವು ಅದನ್ನು ಹೇಗೆ ಹಿಂದಿರುಗಿಸುತ್ತೀರಿ, ಹೇಳಿ? ನೀವು ಜಮ್ಮು ಮತ್ತು ಕಾಶ್ಮೀರದ ಜನರನ್ನು ಏಕೆ ಮೂರ್ಖರನ್ನಾಗಿ ಮಾಡುತ್ತಿದ್ದೀರಿ? ಎಂದು ಶಾ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮಾತ್ರ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವ ಅಧಿಕಾರವಿದೆ. “ಚುನಾವಣೆಗಳು ಮುಗಿದ ನಂತರ ಮತ್ತು ಸೂಕ್ತ ಸಮಯದಲ್ಲಿ ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಸ್ವಲ್ಪ ಸಮಯದ ನಂತರ ಮರಳಿ ನೀಡುತ್ತೇವೆ ಎಂದು ನಾನೇ ಘೋಷಿಸಿದ್ದೇನೆ. ನಾನು ಇದನ್ನು ಯಾವುದೇ ಸಾರ್ವಜನಿಕ ಸಭೆಯಲ್ಲಿ ಹೇಳಿಲ್ಲ ಆದರೆ ಸಂಸತ್ತಿನಲ್ಲಿ ಹೇಳಿದ್ದೇನೆ ಎಂದಿದ್ದಾರೆ ಶಾ.
ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಅಕ್ಟೋಬರ್ 4 ರಂದು ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 10 ವರ್ಷಗಳ ನಂತರ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಆರ್ಟಿಕಲ್ 370 ರ ಅಡಿಯಲ್ಲಿ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮೊದಲ ಬಾರಿಗೆ ಇದನ್ನು ಆಗಸ್ಟ್ 2019 ರಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ.
‘ದೇಶದಲ್ಲಿ 2 ಪ್ರಧಾನಿಗಳು ಇರುವಂತಿಲ್ಲ’
ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಚುನಾವಣೆಯು “ಐತಿಹಾಸಿಕ ಚುನಾವಣೆ”ಯಾಗಲಿದೆ ಎಂದು ಶಾ ಹೇಳಿದ್ದಾರೆ. ಏಕೆಂದರೆ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಮತದಾರರು ಒಂದೇ ತ್ರಿವರ್ಣ ಧ್ವಜದ ಅಡಿಯಲ್ಲಿ ಮತ ಚಲಾಯಿಸುತ್ತಾರೆ. ಎರಡು ಪ್ರತ್ಯೇಕ ಧ್ವಜಗಳ ಅಡಿಯಲ್ಲಿ ಅಲ್ಲ.
“ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಜನರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಮತ ಚಲಾಯಿಸುತ್ತಾರೆ. ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರವು ಭಾರತದ ಇತರ ಭಾಗಗಳಂತೆಯೇ ಅದೇ ಪ್ರಧಾನಿಯನ್ನು ಹೊಂದಿದೆ, ನಮ್ಮ ಪ್ರೀತಿಯ ಪ್ರಧಾನಿ ಮೋದಿ ಜಿ. ದೇಶದಲ್ಲಿ ಇಬ್ಬರು ಪ್ರಧಾನಿಗಳು ಇರಲು ಸಾಧ್ಯವಿಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿ ಜನರು ಆಯ್ಕೆ ಮಾಡುವ ಒಬ್ಬ ಪ್ರಧಾನಿ ಮಾತ್ರ ಇರಲು ಸಾಧ್ಯ. ಅದು ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಯುಎನ್‌ಜಿಎ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಇಲ್ಲ; ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಸ್ ಜೈಶಂಕರ್
ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಪ್ರಾರಂಭಿಸಲು ಶಾ ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಜಮ್ಮುವಿಗೆ ತಲುಪಿದರು. ಅವರು ಅಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಐದು ಲಕ್ಷ ಉದ್ಯೋಗಗಳ ಸೃಷ್ಟಿ, ಕಾಶ್ಮೀರದಲ್ಲಿ 100 “ಪಾಳುಬಿದ್ದ ದೇವಾಲಯಗಳ” ಮರುಸ್ಥಾಪನೆ ಮತ್ತು ಕಾಶ್ಮೀರಿ ಪಂಡಿತರ ವಾಪಸಾತಿ ಮತ್ತು ಪುನರ್ವಸತಿ ಸೇರಿದಂತೆ 25 ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Sat, 7 September 24