ವಿನೇಶ್ ಫೋಗಟ್ ಅನರ್ಹಗೊಂಡಾಗ ಸಂಭ್ರಮಿಸಿದವರು ದೇಶಭಕ್ತರೇ?: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪುನಿಯಾ ವಾಗ್ದಾಳಿ

ಅದು ವಿನೇಶ್ ಅವರ ಪದಕವಲ್ಲ. ಇದು 140 ಕೋಟಿ ಭಾರತೀಯರ ಪದಕವಾಗಿತ್ತು. ಆಕೆಗೆ ಅದು ನಷ್ಟವಾಗಿದ್ದಕ್ಕೆ ಅವರು ಸಂತೋಷಪಡುತ್ತಿದ್ದಾರೆ.ವಿನೇಶ್ ಅವರ ಅನರ್ಹತೆಗೆ ಅವರು ಸಂಭ್ರಮಿಸಿದರು, ಅವರು ದೇಶಭಕ್ತರೇ? ನಾವು ಬಾಲ್ಯದಿಂದಲೂ ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಅವರು ನಮಗೆ ದೇಶಭಕ್ತಿ ಕಲಿಸಬೇಕಿದೆಯೇ? ಎಂದು ಕುಸ್ತಿಪಟು, ಕಾಂಗ್ರೆಸ್ ನಾಯಕ ಬಜರಂಗ್ ಪುನಿಯಾ, ಬ್ರಿಜ್ ಭೂಷಣ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿನೇಶ್ ಫೋಗಟ್ ಅನರ್ಹಗೊಂಡಾಗ ಸಂಭ್ರಮಿಸಿದವರು ದೇಶಭಕ್ತರೇ?: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪುನಿಯಾ ವಾಗ್ದಾಳಿ
ಬ್ರಿಜ್ ಭೂಷಣ್ ಸಿಂಗ್- ಬಜರಂಗ್ ಪುನಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on:Sep 07, 2024 | 4:08 PM

ದೆಹಲಿ ಸೆಪ್ಟೆಂಬರ್ 07:  ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ವಿನೇಶ್ ಫೋಗಟ್ (Vinesh Phogat) ವಂಚನೆ ಎಸಗಿದ್ದಾರೆ. ಟ್ರಯಲ್ಸ್‌ನಲ್ಲಿ ತನ್ನನ್ನು ಸೋಲಿಸಿದ ಹುಡುಗಿಯ ಸ್ಥಾನವನ್ನು ಪಡೆದುಕೊಂಡು ಜಗಳವಾಡಿ ಆಕೆ ಒಲಿಂಪಿಕ್ಸ್‌ಗೆ ಹೋಗಿದ್ದರು. ಆದ್ದರಿಂದ ಅವರಿಗೆ ಏನಾಯಿತೋ ಅದು ನ್ಯಾಯಯುತವಾಗಿದೆ. ಆಕೆ ಅದಕ್ಕೆ ಅರ್ಹರು ಎಂದು ಬಿಜೆಪಿಯ ಮಾಜಿ ಸಂಸದ, ಭಾರತದ ಮಾಜಿ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (Brij Bhushan Singh)  ಹೇಳಿದ್ದಾರೆ.

ಪುನಿಯಾ ಮತ್ತು ವಿನೇಶ್ ಫೋಗಟ್ ಇಬ್ಬರೂ ಕಾಂಗ್ರೆಸ್‌ಗೆ ಸೇರಿದ ಮರುದಿನ ಎಎನ್ಐ ಜತೆ ಮಾತನಾಡಿದ ಸಿಂಗ್, “ಬಜರಂಗ್ ಏಷ್ಯನ್ ಗೇಮ್ಸ್‌ಗೆ ಟ್ರಯಲ್ಸ್ ಇಲ್ಲದೆ ಹೋಗಿದ್ದಾರೆ ಎಂಬುದು ನಿಜವಲ್ಲವೇ? ನಾನು ಕುಸ್ತಿಯಲ್ಲಿ ಪರಿಣಿತರಾಗಿರುವವರನ್ನು ಕೇಳಲು ಬಯಸುತ್ತೇನೆ. ಒಬ್ಬ ಆಟಗಾರನು ಒಂದು ದಿನದಲ್ಲಿ 2 ತೂಕದ ವಿಭಾಗಗಳಲ್ಲಿ ಟ್ರಯಲ್ಸ್ ನೀಡಬಹುದೇ ಎಂದು ನಾನು ವಿನೇಶ್ ಫೋಗಟ್ ಅವರನ್ನು ಕೇಳಲು ಬಯಸುತ್ತೇನೆ? ತೂಕ ಮಾಡಿದ ನಂತರ 5 ಗಂಟೆಗಳ ಕಾಲ ಟ್ರಯಲ್ಸ್ ನಿಲ್ಲಿಸಬಹುದಾ?… ನೀನು ಕುಸ್ತಿಯಲ್ಲಿ ಗೆಲ್ಲಲಿಲ್ಲ, ಮೋಸ ಮಾಡಿ ಅಲ್ಲಿಗೆ ಹೋದೆ. ದೇವರು ನಿನಗೆ ಅದಕ್ಕೆ ಶಿಕ್ಷೆ ಕೊಟ್ಟಿದ್ದಾನೆ ಎಂದು ಹೇಳಿದ್ದರುಯ

ಬ್ರಿಜ್ ಭೂಷಣ್ ಸಿಂಗ್ ಅವರ ಈ ಹೇಳಿಕೆಗೆ ಒಲಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಮತ್ತು ಕಾಂಗ್ರೆಸ್ ನಾಯಕ ಬಜರಂಗ್ ಪುನಿಯಾ ಖಡಕ್ ತಿರುಗೇಟು ನೀಡಿದ್ದಾರೆ.  ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಪೂನಿಯಾ, ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಹೇಳಿಕೆಗಳು ದೇಶದ ಬಗ್ಗೆ ಸಿಂಗ್ ಅವರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು.

“ಅದು ವಿನೇಶ್ ಅವರ ಪದಕವಲ್ಲ. ಇದು 140 ಕೋಟಿ ಭಾರತೀಯರ ಪದಕವಾಗಿತ್ತು. ಆಕೆಗೆ ಅದು ನಷ್ಟವಾಗಿದ್ದಕ್ಕೆ ಅವರು ಸಂತೋಷಪಡುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರು ಆಗಿರುವ ಪುನಿಯಾ ಹೇಳಿದ್ದಾರೆ.  “ವಿನೇಶ್ ಅವರ ಅನರ್ಹತೆಗೆ ಅವರು ಸಂಭ್ರಮಿಸಿದರು, ಅವರು ದೇಶಭಕ್ತರೇ? ನಾವು ಬಾಲ್ಯದಿಂದಲೂ ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಅವರು ನಮಗೆ ದೇಶಭಕ್ತಿ ಕಲಿಸಬೇಕಿದೆಯೇ?. ಅವರು ಹೆಣ್ಣುಮಕ್ಕಳಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಎಂದು ಪುನಿಯಾ ಹೇಳಿದ್ದಾರೆ.

ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಕಾಂಗ್ರೆಸ್ ಸೇರ್ಪಡೆ

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಳೆದ ವರ್ಷ ನಡೆದ ಪ್ರತಿಭಟನೆ ನಡೆಸಿದ್ದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಶುಕ್ರವಾರ ಕಾಂಗ್ರೆಸ್ ಸೇರಿದ್ದಾರೆ.  ಕಾಂಗ್ರೆಸ್ ಮತ್ತು ರಾಷ್ಟ್ರವನ್ನು ಬಲಪಡಿಸಲು ನಾವು ಶ್ರಮಿಸುತ್ತೇವೆ, ವಿನೇಶ್ ಫೈನಲ್‌ಗೆ ಅರ್ಹತೆ ಪಡೆದ ದಿನ, ದೇಶವು ಸಂತೋಷವಾಗಿತ್ತು ಆದರೆ ಮರುದಿನ ಎಲ್ಲರೂ ದುಃಖಿತರಾಗಿದ್ದರು. ಆ ಸಮಯದಲ್ಲಿ, ಒಂದು ಐಟಿ ಸೆಲ್ ಸಂಭ್ರಮಾಚರಣೆ ಮಾಡುತ್ತಿತ್ತು” ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುನಿಯಾ ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ಎಂದಿಗೂ ಪುನಃಸ್ಥಾಪಿಸಲಾಗುವುದಿಲ್ಲ: ಅಮಿತ್ ಶಾ

ಹರ್ಯಾಣ ವಿಧಾನಸಭಾ ಚುನಾವಣೆಗೆ 31 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದೆ. ಪಕ್ಷವು ಜೂಲಾನಾ ಕ್ಷೇತ್ರದಿಂದ ಫೋಗಟ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.  ಪುನಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದರೆ, ವಿನೇಶ್ ಫೋಗಟ್ ಒಲಿಂಪಿಕ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Sat, 7 September 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್