ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಂತರ ವಿನೇಶ್ ಫೋಗಟ್​​ಗೆ ರೈಲ್ವೆ ಶೋಕಾಸ್ ನೋಟಿಸ್ ನೀಡಿತ್ತು: ಕಾಂಗ್ರೆಸ್ ಆರೋಪ

ವಿನೇಶ್ ಫೋಗಟ್ ಅವರಿಗೆ ರೈಲ್ವೆ ಅಧಿಕಾರಿಗಳಿಂದ ಶೋಕಾಸ್ ನೋಟಿಸ್ ಬಂದಿದೆ. ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಮಾತ್ರ ಆಕೆಯ ‘ಅಪರಾಧ’ ಎಂದು ವೇಣುಗೋಪಾಲ್ ಹೇಳಿದ್ದಾರೆ. "ರಾಜಕೀಯ ಮಾಡಬೇಡಿ, ವಿನೇಶ್ ಫೋಗಟ್ ಅವರು ಕೆಲಸ ತೊರೆಯುವಾಗ ಮಾಡಬೇಕಾದ ಪ್ರಕ್ರಿಯೆಗಳನ್ನು ಮಾಡಿ" ಎಂದು ಅವರು ರೈಲ್ವೆಗೆ ಒತ್ತಾಯಿಸಿದರು.

ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಂತರ ವಿನೇಶ್ ಫೋಗಟ್​​ಗೆ ರೈಲ್ವೆ ಶೋಕಾಸ್ ನೋಟಿಸ್ ನೀಡಿತ್ತು: ಕಾಂಗ್ರೆಸ್ ಆರೋಪ
ಕೆಸಿ ವೇಣುಗೋಪಾಲ್ ಜತೆ ವಿನೇಶ್ ಮತ್ತು ಪುನಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on: Sep 06, 2024 | 5:05 PM

ದೆಹಲಿ ಸೆಪ್ಟೆಂಬರ್ 06: ಸೆಪ್ಟೆಂಬರ್ 4 ರಂದು ನವದೆಹಲಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಭೇಟಿಯಾದ ನಂತರ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಭಾರತೀಯ ರೈಲ್ವೆಯಿಂದ ಶೋಕಾಸ್ ನೋಟಿಸ್ ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ (KC Venugopal) ಶುಕ್ರವಾರ ಆರೋಪಿಸಿದ್ದಾರೆ. ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರವರು.  ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಶುಕ್ರವಾರ ಕಾಂಗ್ರೆಸ್ ಸೇರುವ ಮೊದಲು ಭಾರತೀಯ ರೈಲ್ವೆಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.

ವಿನೇಶ್ ಫೋಗಟ್ ಅವರಿಗೆ ರೈಲ್ವೆ ಅಧಿಕಾರಿಗಳಿಂದ ಶೋಕಾಸ್ ನೋಟಿಸ್ ಬಂದಿದೆ. ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಮಾತ್ರ ಆಕೆಯ ‘ಅಪರಾಧ’. “ರಾಜಕೀಯ ಮಾಡಬೇಡಿ, ವಿನೇಶ್ ಫೋಗಟ್ ಅವರು ಕೆಲಸ ತೊರೆಯುವಾಗ ಮಾಡಬೇಕಾದ ಪ್ರಕ್ರಿಯೆಗಳನ್ನು ಮಾಡಿ” ಎಂದು ವೇಣುಗೋಪಾಲ್ ರೈಲ್ವೆಗೆ ಒತ್ತಾಯಿಸಿದ್ದಾರೆ.

ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್​​ಗೆ ಸೇರ್ಪಡೆ

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಹರ್ಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇಬ್ಬರು ಕುಸ್ತಿಪಟುಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರನ್ನು ಅವರ 10 ರಾಜಾಜಿ ಮಾರ್ಗದಲ್ಲಿ ಹಿಂದಿನ ದಿನ ಭೇಟಿಯಾಗಿದ್ದರು. ಸೆಪ್ಟೆಂಬರ್ 4 ರಂದು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು.

ಕಾಂಗ್ರೆಸ್ ಸೇರಿದ ನಂತರ ಮಾತನಾಡಿದ ವಿನೇಶ್ ಫೋಗಟ್, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಲು ಸಿದ್ಧವಾಗಿರುವ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.  “ನಮ್ಮ ಕುಸ್ತಿ ಪಯಣದಲ್ಲಿ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ನಾನು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ, ನಾವು ರಸ್ತೆಗಳಲ್ಲಿ ಎಳೆದಾಡಿದಾಗ, ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗಿದ್ದವು, ಅವರು ನಮ್ಮ ನೋವನ್ನು ಅರ್ಥಮಾಡಿಕೊಂಡರು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಡಲು ನಾನು ಸಿದ್ಧವಾಗಿರುವ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರವನ್ನು ಬಲಪಡಿಸಲು ಶ್ರಮಿಸುವುದಾಗಿ ಭಜರಂಗ್ ಪುನಿಯಾ ಹೇಳಿದ್ದಾರೆ. “…ನಾವು ಕೇವಲ ರಾಜಕೀಯ ಮಾಡಲು ಬಯಸಿದ್ದೇವೆ ಎಂದು ಇಂದು ಬಿಜೆಪಿ ಐಟಿ ಸೆಲ್ ಹೇಳುತ್ತಿದೆ, ನಮ್ಮೊಂದಿಗೆ ನಿಲ್ಲುವಂತೆ ನಾವು ಎಲ್ಲಾ ಮಹಿಳಾ ಬಿಜೆಪಿ ಸಂಸದರಿಗೆ ಪತ್ರ ಬರೆದಿದ್ದೇವೆ. ಆದರೆ ಅವರು ಇನ್ನೂ ಬಂದಿಲ್ಲ. ಮಹಿಳೆಯರ ಪರ ದನಿ ಎತ್ತಿದ್ದಕ್ಕೆ ನಾವು ಅನುಭವಿಸುತ್ತಿದ್ದೇವೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯದ ಪರವಾಗಿ ಬಿಜೆಪಿ ನಿಂತಿದೆ ಮತ್ತು ಇತರ ಎಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತಿವೆ ಎಂದು ಈಗ ನಮಗೆ ತಿಳಿದಿದೆ.

ಇದನ್ನೂ ಓದಿ: Haryana Assembly Elections: ವಿನೇಶ್ ಫೋಗಟ್, ಬಜರಂಗ್ ಪುನಿಯಾ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ

“ನಾವು ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರವನ್ನು ಬಲಪಡಿಸಲು ಶ್ರಮಿಸುತ್ತೇವೆ… ವಿನೇಶ್ ಫೈನಲ್‌ಗೆ ಅರ್ಹತೆ ಪಡೆದ ದಿನ ದೇಶಕ್ಕೆ ದೇಶವೇ ಖುಷಿ ಪಟ್ಟಿತ್ತು, ಆದರೆ ಮರುದಿನ ಎಲ್ಲರೂ ದುಃಖಿತರಾಗಿದ್ದರು. ಆ ಸಮಯದಲ್ಲಿ ಒಂದು ಐಟಿ ಸೆಲ್ ಸಂಭ್ರಮಿಸುತ್ತಿತ್ತು” ಎಂದು ಪುನಿಯಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ