Viral Video: ಮದ್ಯದ ಅಮಲಿನಲ್ಲಿ ತರಗತಿಯಲ್ಲೇ ವಿದ್ಯಾರ್ಥಿಯ ಜಡೆ ಕತ್ತರಿಸಿದ ಶಿಕ್ಷಕ

ಮದ್ಯದ ಅಮಲಿನಲ್ಲಿದ್ದ ಶಿಕ್ಷಕನೊರ್ವ ವಿದ್ಯಾರ್ಥಿಯ ಜಡೆ ಕತ್ತರಿಸಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಶಿಕ್ಷಕ ವೀರ್ ಸಿಂಗ್ ಮೇಧಾನನ್ನು ಅಮಾನತುಗೊಳಿಸಿ, ಆತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ತಿಳಿಸಿದ್ದಾರೆ.

Viral Video: ಮದ್ಯದ ಅಮಲಿನಲ್ಲಿ ತರಗತಿಯಲ್ಲೇ ವಿದ್ಯಾರ್ಥಿಯ ಜಡೆ ಕತ್ತರಿಸಿದ ಶಿಕ್ಷಕ
ವಿದ್ಯಾರ್ಥಿಯ ಜಡೆ ಕತ್ತರಿಸಿದ ಶಿಕ್ಷಕ
Follow us
|

Updated on:Sep 06, 2024 | 4:48 PM

ಮಧ್ಯಪ್ರದೇಶ: ಮದ್ಯದ ಅಮಲಿನಲ್ಲಿದ್ದ ಶಿಕ್ಷಕನೊರ್ವ ವಿದ್ಯಾರ್ಥಿಯ ಜಡೆ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಶಿಕ್ಷಕರ ದಿನದಂದು ಗುರುವಾರ (ಸೆ.05) ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಶಿಕ್ಷಕ ವೀರ್ ಸಿಂಗ್ ಮೇಧಾನನ್ನು ಅಮಾನತುಗೊಳಿಸಲಾಗಿದೆ ಮತ್ತು ಈತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ  ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸೇಮಲಖೇಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಅಳುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರೊಬ್ಬರು ತರಗತಿಯ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಶಿಕ್ಷಕ ಬಾಲಕಿಯ ಕೂದಲು ಕತ್ತರಿಸುವುದನ್ನು ಕಂಡು ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ಕಂಪನಿ ತನ್ನ ಕೆಲಸಗಾರರಿಗೆ ನೀಡುತ್ತಿದೆ ಡೇಟಿಂಗ್ ಮಾಡಲು ಟಿಂಡರ್ ಲೀವ್

ಬಾಲಕಿಯ ಕೂದಲು ಕತ್ತರಿಸದಂತೆ ಗ್ರಾಮಸ್ಥರು ತಡೆದರೂ ಕೂಡ “ನೀವು ವೀಡಿಯೊ ಮಾಡಿ, ಆದರೆ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಶಿಕ್ಷಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವ್ಯಾಪಕವಾಗಿ ವೈರಲ್​​ ಆಗಿರುವ ವೀಡಿಯೊ ಅಂತಿಮವಾಗಿ ಕಲೆಕ್ಟರ್ ವರೆಗೆ ತಲುಪಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ. ಬಾಲಕಿಯ ಹೇಳಿಕೆ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೇಧಾ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಾಥಮ್ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Fri, 6 September 24

ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​