ಕೋಲ್ಕತ್ತಾ ವೈದ್ಯೆಯ ಕೊಲೆ ಪ್ರಕರಣ: ಪಾಲಿಗ್ರಾಫ್ ಪರೀಕ್ಷೆ ವೇಳೆ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದ ಆರೋಪಿ
ಸಂಜಯ್ ರಾಯ್ಗೆ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಸಿಬಿಐ 10 ಪ್ರಶ್ನೆಗಳನ್ನು ಕೇಳಿದೆ. ತನಿಖಾ ಸಂಸ್ಥೆಯ ತನಿಖಾಧಿಕಾರಿಯೊಂದಿಗೆ ಮೂವರು ಪಾಲಿಗ್ರಾಫ್ ತಜ್ಞರು ಪರೀಕ್ಷೆಯಲ್ಲಿ ಹಾಜರಿದ್ದರು ಎಂದು ಇಂಡಿಯಾ ಟುಡೇ ವರದಿಯಲ್ಲಿ ಹೇಳಿದೆ. ಕೋಲ್ಕತ್ತಾ ಪೋಲೀಸ್‌ನ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ನ್ನು ಆಗಸ್ಟ್ 10 ರಂದು ಬಂಧಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದ
ಕೋಲ್ಕತ್ತಾ ಸೆಪ್ಟೆಂಬರ್ 07: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (Kolkata’s RG Kar Medical College and Hospital) 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಶಂಕಿತ ಸಂಜಯ್ ರಾಯ್ನ್ನು,(Sanjay Roy) ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI) ಪಾಲಿಗ್ರಾಫ್ ಪರೀಕ್ಷೆಗೊಳಪಡಿಸಿತ್ತು. ಈ ವೇಳೆ ಆತ ತಾನು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿರುವುದಾಗಿ ವರದಿ ಆಗಿದೆ. ಆಸ್ಪತ್ರೆಯಲ್ಲಿ ವೈದ್ಯೆಯ ಶವವನ್ನು ನೋಡಿದ ನಂತರ ಸಂಜಯ್ ರಾಯ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಸಂಜಯ್ ರಾಯ್ಗೆ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಸಿಬಿಐ 10 ಪ್ರಶ್ನೆಗಳನ್ನು ಕೇಳಿದೆ. ತನಿಖಾ ಸಂಸ್ಥೆಯ ತನಿಖಾಧಿಕಾರಿಯೊಂದಿಗೆ ಮೂವರು ಪಾಲಿಗ್ರಾಫ್ ತಜ್ಞರು ಪರೀಕ್ಷೆಯಲ್ಲಿ ಹಾಜರಿದ್ದರು ಎಂದು ಇಂಡಿಯಾ ಟುಡೇ ವರದಿಯಲ್ಲಿ ಹೇಳಿದೆ. ಕೋಲ್ಕತ್ತಾ ಪೋಲೀಸ್‌ನ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ನ್ನು ಆಗಸ್ಟ್ 10 ರಂದು ಬಂಧಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದ. ಆದಾಗ್ಯೂ, ನಂತರ ತಮ್ಮ ತಪ್ಪೊಪ್ಪಿಗೆಯನ್ನು ಹಿಂತೆಗೆದುಕೊಂಡಿದ್ದು, ನಾನು ನಿರಪರಾಧಿ ಎಂದು ಹೇಳಿದ್ದಾನೆ.
ಪ್ರಸ್ತುತ ಸಂಜಯ್ ರಾಯ್ ಬಂಧಿತನಾಗಿರುವ ಕೋಲ್ಕತ್ತಾದ ಪ್ರೆಸಿಡೆನ್ಸಿ ಸೆಂಟ್ರಲ್ ಜೈಲಿನಲ್ಲಿ ಆಗಸ್ಟ್ 25 ರಂದು ಪಾಲಿಗ್ರಾಫ್ ಪರೀಕ್ಷೆ ನಡೆದಿತ್ತು. ಪಾಲಿಗ್ರಾಫ್ ಫಲಿತಾಂಶಗಳು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲ ಎಂಬುದನ್ನು ಗಮನಿಸುವುದು ಮುಖ್ಯ.
“ನಾನು ಕೊಲೆ ಮಾಡಿಲ್ಲ, ಶವವನ್ನು ನೋಡಿದ ನಂತರ ನಾನು ಸೆಮಿನಾರ್ ಹಾಲ್‌ನಿಂದ ಓಡಿಹೋದೆ” ಎಂದು ಸಂಜಯ್ ರಾಯ್ ಪರೀಕ್ಷೆಯ ವೇಳೆ ಸಿಬಿಐಗೆ ತಿಳಿಸಿದ್ದಾನೆ. ಆದಾಗ್ಯೂ, ಪಾಲಿಗ್ರಾಫ್ ಹಲವಾರು ಮೋಸಗೊಳಿಸುವ ಮತ್ತು ಮನವರಿಕೆಯಾಗದ ಪ್ರತಿಕ್ರಿಯೆಗಳನ್ನು ಸೂಚಿಸಿದೆ ಎಂದು ವರದಿಯಾಗಿದೆ.
ಘೋರ ಹತ್ಯೆಯ ಒಂದು ದಿನದ ನಂತರ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಸಂಜಯ್ ರಾಯ್ನ್ನು ಆಗಸ್ಟ್ 10 ರಂದು ಬಂಧಿಸಲಾಯಿತು. ಘಟನೆ ನಡೆದ ಸೆಮಿನಾರ್ ಹಾಲ್‌ನಲ್ಲಿ ಆತನ ಬ್ಲೂಟೂತ್ ಹೆಡ್‌ಸೆಟ್ ಕೂಡ ಪತ್ತೆಯಾಗಿದೆ. ಸಂಜಯ್ ರಾಯ್ನ ವಕೀಲೆ ಕವಿತಾ ಸರ್ಕಾರ್ ಪ್ರಕಾರ, ಪಾಲಿಗ್ರಾಫ್ ಪರೀಕ್ಷೆಯಲ್ಲೂ ಆತ ನಿರಪರಾಧಿ ಎಂದಿದ್ದಾನೆ. ಮಹಿಳೆಯನ್ನು ಹತ್ಯೆ ಮಾಡಿದ ನಂತರ ಏನು ಮಾಡಿದೆ ಎಂದು ಸಂಜಯ್ ರಾಯ್ ನಲ್ಲಿ ಕೇಳಲಾಯಿತು. ತಾನು ಆಕೆಯನ್ನು ಕೊಲೆ ಮಾಡದ ಕಾರಣ ಈ ಪ್ರಶ್ನೆ ಅಮಾನ್ಯವಾಗಿದೆ ಎಂದು ಆತ ಉತ್ತರಿಸಿದ್ದ ಎಂದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ,
ಆರ್‌ಜಿ ಕರ್ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ, ಸಿಬಿಐ ಪತ್ತೆ: ವರದಿ
ಭೀಕರ ಕೊಲೆ ಮತ್ತು ಟ್ರೈನಿ ವೈದ್ಯೆಯ ಅತ್ಯಾಚಾರದಲ್ಲಿ ಸಾಮೂಹಿಕ ಅತ್ಯಾಚಾರದ ಸಾಧ್ಯತೆಯನ್ನು ಸಿಬಿಐ ತಳ್ಳಿಹಾಕಿದೆ. ಅದೇ ವೇಳೆ ಸಂಜಯ್ ರಾಯ್ ಪ್ರಕರಣದ ಏಕೈಕ ಶಂಕಿತ ಎಂದು ತನಿಖಾ ಸಂಸ್ಥೆ ಗುರುತಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಲಭ್ಯವಿರುವ ಪುರಾವೆಗಳು ಸಂಜಯ್ ರಾಯ್ ನ್ನು ಮಾತ್ರ ಸೂಚಿಸುತ್ತದೆ. ತನಿಖೆಯು “ಅಂತಿಮ ಹಂತದಲ್ಲಿ” ಇದೆ ಎಂದು ಹೆಸರಿಸದ ಮೂಲಗಳು NDTV ಗೆ ತಿಳಿಸಿದ್ದು, ಶೀಘ್ರದಲ್ಲೇ ಆರೋಪಗಳನ್ನು ಸಲ್ಲಿಸಲು ಸಂಸ್ಥೆ ಸಿದ್ಧವಾಗಿದೆ.
ಇದನ್ನೂ ಓದಿ: ವಿನೇಶ್ ಫೋಗಟ್ ಅನರ್ಹಗೊಂಡಾಗ ಸಂಭ್ರಮಿಸಿದವರು ದೇಶಭಕ್ತರೇ?: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪುನಿಯಾ ವಾಗ್ದಾಳಿ
ಎನ್‌ಡಿಟಿವಿ ಪ್ರಕಾರ, ಸಿಬಿಐ ವೈದ್ಯಕೀಯ ವರದಿಯನ್ನು ಆರೋಪಿಯ ಡಿಎನ್‌ಎಯೊಂದಿಗೆ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ತನಿಖೆಗಾಗಿ ಕಳುಹಿಸಿದೆ. ಫಲಿತಾಂಶಗಳನ್ನು ಪಡೆದ ನಂತರ ಅವರು ವರದಿಯನ್ನು ಪೂರ್ಣಗೊಳಿಸುತ್ತಾರೆ. ತನಿಖಾ ಸಂಸ್ಥೆಯು ಇದುವರೆಗೆ 100 ಕ್ಕೂ ಹೆಚ್ಚು ಹೇಳಿಕೆಗಳನ್ನು ದಾಖಲಿಸಿದೆ ಮತ್ತು 10 ಪಾಲಿಗ್ರಾಫ್ ಪರೀಕ್ಷೆಗಳನ್ನು ನಡೆಸಿದೆ. ಘಟನೆ ನಡೆದಾಗ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಸಂದೀಪ್ ಘೋಷ್ ಅವರ ಮೇಲೆ ಆರ್ಥಿಕ ಅಕ್ರಮಗಳ ಆರೋಪವನ್ನೂ ಹೊರಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ