2017ರಲ್ಲಿ ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ ನಡೆದ ಕೊಲೆ ಪ್ರಕರಣ: ಜಯಲಲಿತಾ ಮಾಜಿ ಸಹಾಯಕಿ ವಿಕೆ ಶಶಿಕಲಾ ವಿಚಾರಣೆ

| Updated By: ರಶ್ಮಿ ಕಲ್ಲಕಟ್ಟ

Updated on: Apr 21, 2022 | 4:02 PM

ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ 2017ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ ಮುಖ್ಯಸ್ಥೆ ವಿಕೆ ಶಶಿಕಲಾ ಅವರನ್ನು ತಮಿಳುನಾಡು ಪೊಲೀಸರ ವಿಶೇಷ ತಂಡ ಗುರುವಾರ ವಿಚಾರಣೆ ನಡೆಸಿತು.

2017ರಲ್ಲಿ ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ ನಡೆದ ಕೊಲೆ ಪ್ರಕರಣ: ಜಯಲಲಿತಾ ಮಾಜಿ ಸಹಾಯಕಿ ವಿಕೆ ಶಶಿಕಲಾ ವಿಚಾರಣೆ
ವಿಕೆ ಶಶಿಕಲಾ
Follow us on

ಚೆನ್ನೈ: ತಮಿಳುನಾಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ (Kodanadu estate bungalow) 2017ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಮುಖ್ಯಸ್ಥೆ ವಿಕೆ ಶಶಿಕಲಾ (VK Sasikala) ಅವರನ್ನು ತಮಿಳುನಾಡು ಪೊಲೀಸರ ವಿಶೇಷ ತಂಡ ಗುರುವಾರ ವಿಚಾರಣೆ ನಡೆಸಿತು. ಪೊಲೀಸರು ಆಕೆಯನ್ನು ಚೆನ್ನೈನ ಟಿ ನಗರದ ಮನೆಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಶಶಿಕಲಾ ಅವರು ಬೆಂಗಳೂರಿನ ಜೈಲಿನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಎಸ್ಟೇಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್‌ನನ್ನು ಹತ್ಯೆ ಮಾಡಲಾಯಿತು ಮತ್ತು ಐಷಾರಾಮಿ ಬಂಗಲೆಯನ್ನು ಒಡೆದು ಹಾಕಲಾಯಿತು. ಆ ವೇಳೆ ವಾಚ್, ಹರಳಿನಿಂದ ಮಾಡಿದ ಘೇಂಡಾಮೃಗದ ಶಿಲ್ಪ ಸೇರಿದಂತೆ ಕೆಲ ವಸ್ತುಗಳನ್ನು ಕದ್ದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಇತರ ನಾಲ್ಕು ನಿಗೂಢ ಸಾವುಗಳು ಪ್ರಕರಣವನ್ನು ಹೆಚ್ಚು ಸಂಕೀರ್ಣಗೊಳಿಸಿದವು. ಮೊದಲನೆಯದಾಗಿ ಜಯಲಲಿತಾ ಅವರ ಮಾಜಿ ಚಾಲಕ, ಪ್ರಮುಖ ಆರೋಪಿ ಕನಕರಾಜ್, ಮಾಜಿ ಮುಖ್ಯಮಂತ್ರಿ ಇ ಪಳನಿಸ್ವಾಮಿ ಅವರ ಹುಟ್ಟೂರಾದ ಎಡಪ್ಪಾಡಿ ಬಳಿ ಅಪಘಾತದಲ್ಲಿ ಸಾವಿಗೀಡಾದರು. ಅದೇ ದಿನ ಎರಡನೇ ಆರೋಪಿ ಸಯಾನ್ ಕೂಡ ಅಪಘಾತಕ್ಕೀಡಾದರು. ಈ ಅಪಘಾತದಲ್ಲಿ ಅವರು ಬದುಕುಳಿದರೂ, ಅವರ ಹೆಂಡತಿ ಮತ್ತು ಮಗಳು ಸತ್ತರು. ನಂತರ ಎಸ್ಟೇಟ್‌ನಲ್ಲಿದ್ದ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ಜಟಾಪಟಿಗೆ ಕೆಲವರು ಈ ಕೊಲೆಗಳನ್ನು ಜೋಡಿಸಿದ್ದರು. ಜೈಲಿಗೆ ಕಳುಹಿಸುವ ಮೊದಲು ಇಪಿಎಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದವರು ಶಶಿಕಲಾ ಆಗಿದ್ದರೂ, ಅವರು ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ಪ್ರತಿಸ್ಪರ್ಧಿ ಓ ಪನ್ನೀರಸೆಲ್ವಂ ಅಥವಾ ಒಪಿಎಸ್ ಅವರೊಂದಿಗೆ ಕೈಜೋಡಿಸಿದರು. ಆನಂತರ ಇಬ್ಬರೂ ಶಶಿಕಲಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥೆ ಸ್ಥಾನದಿಂದ ಹೊರಹಾಕಿದರು.

ಕಳೆದ ವರ್ಷ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಮಾಹಿತಿಯ ನಂತರ ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಬೇಕಾಗುತ್ತದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಪಳನಿಸ್ವಾಮಿ ಅಥವಾ ಇಪಿಎಸ್ ಅವರು ನವೀಕೃತ ತನಿಖೆಯನ್ನು “ನನ್ನನ್ನು ಸಿಲುಕಿಸುವ ಪ್ರಯತ್ನ” ಎಂದು ಕರೆದಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದು, ಕೊಡನಾಡು ದರೋಡೆ ಮತ್ತು ಕೊಲೆ ಪ್ರಕರಣದ ತನಿಖೆಯು ಚುನಾವಣಾ ಭರವಸೆಯಾಗಿದೆ. ನಾವು ನ್ಯಾಯಾಲಯದ ಅನುಮತಿಯೊಂದಿಗೆ ಇದನ್ನು ಮಾಡುತ್ತಿದ್ದೇವೆ, ತಪ್ಪಿತಸ್ಥರಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ, ಅಂಬಾನಿಯನ್ನ ಹುಟ್ಟಿಸಿದ್ದು ನರೇಂದ್ರ ಮೋದಿನಾ?; ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಂಸದ ಪ್ರತಾಪ್ ಸಿಂಹ