ಚೆನ್ನೈ: ತಮಿಳುನಾಡಿಗೆ ಆಡಿದ ಮಾತಿನಂತೆ ನಡೆದುಕೊಳ್ಳುವ ನಾಯಕನ ಅಗತ್ಯವಿದೆ ಎಂದು ಎಐಎಡಿಎಂಕೆ ಮಾಜಿ ನಾಯಕಿ ವಿಕೆ ಶಶಿಕಲಾ ಹೇಳಿದ್ದಾರೆ.
ಎಂಜಿಆರ್, ಜಯಲಲಿತಾರಂತೆ ಎಐಎಡಿಎಂಕೆಯನ್ನು ಮುಂದೆ ಕೊಂಡೊಯ್ಯಲು ನಾನು ಬಯಸುತ್ತೇನೆ. ಎಂಜಿಆರ್ ಮತ್ತು ಜಯಲಲಿತಾ ಅವರು ಮಾಡಿದ ರೀತಿಯಲ್ಲಿ ಪಕ್ಷವನ್ನು ಮುನ್ನಡೆಸುವುದು ತಮ್ಮ ಆಶಯವಾಗಿದೆ. ನಮ್ಮ ಕಾರ್ಯಕರ್ತರಿಗೆ ಅದು ಚೆನ್ನಾಗಿ ತಿಳಿದಿದೆ.
ಅಷ್ಟೇ ಅಲ್ಲ, ಸತ್ಯವಂತನಾಗಿರುವ ನಾಯಕನಿರಬೇಕು ಮತ್ತು ಅವನು/ಅವಳು ಹಿಂದೆ ಎಂದೂ ಒಮ್ಮೆಯೂ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡಿರಬಾರದು, ಅಂಥವರು ತಮಿಳುನಾಡಿಗೆ ಖಂಡಿತವಾಗಿಯೂ ಒಳ್ಳೆಯದನ್ನು ಮಾಡುತ್ತಾರೆ.
ಎಂಐಎಡಿಎಂಕೆಗೆ ಮತ್ತೆ ಯಾವಾಗ ಸೇರುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಕ್ಕೆ ಒಬ್ಬ ನಾಯಕ ಬೇಕೇ ಬೇಕು ಆದರೆ ಅದನ್ನು ಪಕ್ಷದ ಕಾರ್ಯಕರ್ತರು ನಿರ್ಧರಿಸುತ್ತಾರೆ ಎಂದು ಹೇಳಿದರು.
ಪಳನಿಸ್ವಾಮಿ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲು ಜುಲೈ 11 ರಂದು ಎಡಪ್ಪಾಡಿ ಕೆ ಪಳನಿಸ್ವಾಮಿ ಬೆಂಬಲಿಗರು ಕರೆದಿದ್ದ ಸಾಮಾನ್ಯ ಮಂಡಳಿ ಸಭೆಯ ಕುರಿತು ಶಶಿಕಲಾ ಮಾತನಾಡಿ, ಕಾರ್ಯಕರ್ತರ ಆಶಯವೇ ಅಂತಿಮವಾದದ್ದು ಎಂದು ನಾನು ಪದೇ ಪದೇ ಹೇಳಿದ್ದೇನೆ ಎಂದರು.
ಶಶಿಕಲಾ ಅವರು ಎಐಎಡಿಎಂಕೆಯ ಸ್ವಯಂ ಘೋಷಿತ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದು, ಅವರು ಸಕ್ರಿಯ ರಾಜಕಾರಣಕ್ಕೆ ಮರುಪ್ರವೇಶಿಸುತ್ತಿರುವ ಬಗ್ಗೆ ಖಚಿತ ಸಂದೇಶವನ್ನು ರವಾನಿಸಿದೆ. ಜೊತೆಗೆ, ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಮಾಜಿ ಸಿಎಂ ಪಳನಿಸ್ವಾಮಿ, ಪನೀರ್ ಸೆಲ್ವಂ ಅವರಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನೆನಪು ಮಾಡಿಕೊಡಲು ಪ್ರಯತ್ನ ನಡೆಸುತ್ತಿದ್ದಾರೆ.
Published On - 10:48 am, Wed, 6 July 22