‘Vocal for Local’: ಪ್ರಧಾನಿ ಮೋದಿ ‘ವೋಕಲ್ ಫಾರ್ ಲೋಕಲ್’ ಕರೆಗೆ ಉತ್ತಮ ಪ್ರತಿಕ್ರಿಯೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 11, 2023 | 3:49 PM

ಪ್ರಧಾನಿ ಮೋದಿಯವರ 'ವೋಕಲ್ ಫಾರ್ ಲೋಕಲ್' ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿಯ ನಂತರ, ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದು ಒಂದು ರೀತಿಯಲ್ಲಿ ಮೇಕ್​​ ಇನ್​​ ಇಂಡಿಯಾಕ್ಕೆ ಹೆಚ್ಚು ಬಲ ನೀಡುತ್ತದೆ ಎಂಬುದು ಪ್ರಧಾನಿ ಮೋದಿ ಅವರು ಗುರಿಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಕಲಾವಿದರು, ಸಂಶೋಧಕರು ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಮೋದಿಯವರ ಈ ಕರೆ ನಂತರ ಜನರು ಸೇರಿಸಿದಂತೆ ಸೆಲೆಬ್ರಿಟಿಗಳು ಕೂಡ ತಯಾರಕರೊಂದಿಗೆ ಸೆಲ್ಫಿ ತೆಗೆದುಕೊಂಡು 'NaMo ಆಪ್'ನಲ್ಲಿ ಅಪ್ಲೋಡ್​​​​ ಮಾಡಿದ್ದಾರೆ.

Vocal for Local: ಪ್ರಧಾನಿ ಮೋದಿ ‘ವೋಕಲ್ ಫಾರ್ ಲೋಕಲ್’ ಕರೆಗೆ ಉತ್ತಮ ಪ್ರತಿಕ್ರಿಯೆ
ವೋಕಲ್ ಫಾರ್ ಲೋಕಲ್' ಅಭಿಯಾನದಲ್ಲಿ ಮೋದಿ
Follow us on

ದೇಶದ ಜನತೆ ದೀಪಾವಳಿಯಂದು ‘ವೋಕಲ್ ಫಾರ್ ಲೋಕಲ್‘ (‘Vocal for Local’) ಬಗ್ಗೆ ಪ್ರಚಾರ ಮಾಡುವಂತೆ ಕರೆ ನೀಡಿದ್ದಾರೆ. ಇದೀಗ ಈ ಕರೆಗೆ ದೇಶಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಮತ್ತು ‘NaMo ಆಪ್’ ನಲ್ಲಿ ತಯಾರಕರೊಂದಿಗೆ ಸೆಲ್ಫಿ ಹಂಚಿಕೊಳ್ಳಲು ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದರು. ಇದರಿಂದ ಸ್ಥಳೀಯ ವ್ಯಾಪರಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ. ಜೀವನೋಪಾಯಕ್ಕಾಗಿ ಕಷ್ಟಪಡುತ್ತಿರುವ ಸ್ಥಳೀಯ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳನ್ನು ಬಲಪಡಿಸಲು ವೋಕಲ್ ಫಾರ್ ಲೋಕಲ್ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಇಂತಹ ಅನೇಕ ಯೋಜನೆಗಳನ್ನು ದೇಶದ ಮುಂದೆ ಪರಿಚಯಿಸಿದ್ದಾರೆ. ಈಗಾಗಲೇ ಸರ್ಕಾರ ಸಣ್ಣ, ಸ್ಥಳೀಯ ಕುಶಲಕರ್ಮಿಗಳು ಮತ್ತು ಉದ್ಯಮಿಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವುದಲ್ಲದೆ, ಸ್ಥಳೀಯ ಕುಶಲಕರ್ಮಿಗಳು ಮತ್ತು ಉತ್ಪನ್ನಗಳ ಬಗ್ಗೆ ಸಾಮಾನ್ಯ ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.

ಕೊರೊನಾ ಸಮಯದಲ್ಲಿ ಇಡೀ ಜಾಗತಿಕ ಆರ್ಥಿಕತೆ ಹಿಂದುಳಿತು. ಇದರಲ್ಲಿ ಭಾರತ ಕೂಡ ಒಂದು. ಭಾರತದಲ್ಲಿ ಕೊರೊನಾದಿಂದ ಮೂರು ಲಾಕ್​​ಡೌನ್​​ಗಳನ್ನು ಮಾಡಲಾಗಿತ್ತು. ಈ ಎಲ್ಲ ಕಷ್ಟಗಳನ್ನು ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾದರು. ಇಂತಹ ಪರಿಸ್ಥಿತಿಯಲ್ಲಿ ವ್ಯಾಪಾರ ವ್ಯವಸ್ಥೆಯನ್ನು ಮರಳಿ ಹಳಿಗೆ ತರಲು ಪರಿಹಾರ ಪ್ಯಾಕೇಜ್ ಘೋಷಿಸಿದರು. ಭಾರತದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುವಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತದ ಹಣ ನಮ್ಮ ದೇಶದಲ್ಲಿ ಉಳಿಯಲು ಹೆಚ್ಚು ‘ಸ್ಥಳೀಯ ವಸ್ತುಗಳನ್ನು’ ಖರೀದಿಸಲು ಜನರಿಗೆ ತಿಳಿಸಿದ್ದಾರೆ.

ಇನ್ನು ಪ್ರಧಾನಿ ಮೋದಿಯವರ ‘ವೋಕಲ್ ಫಾರ್ ಲೋಕಲ್’ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿಯ ನಂತರ, ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದು ಒಂದು ರೀತಿಯಲ್ಲಿ ಮೇಕ್​​ ಇನ್​​ ಇಂಡಿಯಾಕ್ಕೆ ಹೆಚ್ಚು ಬಲ ನೀಡುತ್ತದೆ ಎಂಬುದು ಪ್ರಧಾನಿ ಮೋದಿ ಅವರು ಗುರಿಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಕಲಾವಿದರು, ಸಂಶೋಧಕರು ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಮೋದಿಯವರ ಈ ಕರೆ ನಂತರ ಜನರು ಸೇರಿಸಿದಂತೆ ಸೆಲೆಬ್ರಿಟಿಗಳು ಕೂಡ ತಯಾರಕರೊಂದಿಗೆ ಸೆಲ್ಫಿ ಹಾಗೂ ವಿಡಿಯೋವನ್ನು ‘NaMo ಆಪ್’ನಲ್ಲಿ ಅಪ್ಲೋಡ್​​​​ ಮಾಡಿದ್ದಾರೆ.

ಕಿರಣ್ ಮಜುಂದಾರ್ ಶಾ:

ಬಯೋಕಾನ್ ಲಿಮಿಟೆಡ್ ಮತ್ತು ಬಯೋಕಾನ್ ಬಯೋಲಾಜಿಕ್ಸ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷರಾದ ಕಿರಣ್ ಮಜುಂದಾರ್-ಶಾ ಅವರು ಪ್ರಧಾನಿಯವರು ಈ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ. ‘ವೋಕಲ್ ಫಾರ್ ಲೋಕಲ್’ ಯೋಚನೆ ತುಂಬಾ ಉಪಯುಕ್ತ ನಾನು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸುವೇ. ಈ ದೀಪಾವಳಿಯಲ್ಲಿ ಭಾರತೀಯ ಉದ್ಯಮಿಗಳು ಮತ್ತು ವ್ಯವಹಾರಗಳ ಮೇಲೆ ಲಕ್ಷ್ಮೀದೇವಿಯು ಆಶೀರ್ವಾದವನ್ನು ನೀಡಲಿ ಎಂದು ಎಕ್ಸ್​​ನಲ್ಲಿ ಟ್ವೀಟ್​​​ ಮಾಡಿದ್ದಾರೆ.

ರೂಪಾಲಿ ಗಂಗೂಲಿ:

ಇನ್ನು ಕಿರುತೆರೆ ಧಾರಾವಾಹಿ ‘ಅನುಪಮಾ’ ರೂಪಾಲಿ ಗಂಗೂಲಿಯವರ ‘ವೋಕಲ್ ಫಾರ್ ಲೋಕಲ್’ ಗೆ ಬೆಂಬಲ ನೀಡಿದ್ದಾರೆ. ಈ ಮೂಲಕ ಒಂದು ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಪ್ರಧಾನಿ ಮೋದಿ ಅವರು ಕೂಡ ರೀ ಶೇರ್​​ ಮಾಡಿಕೊಂಡಿದ್ದಾರೆ. ‘ವೋಕಲ್ ಫಾರ್ ಲೋಕಲ್’ ಅಭಿಯಾನ ದೇಶದಾದ್ಯಂತ ಉತ್ತಮ ವೇಗವನ್ನು ಪಡೆಯುತ್ತಿದೆ, ನನ್ನ ಪಾಲಿಗೆ ಇದು ದೊಡ್ಡ ಹೆಮ್ಮೆಯಾಗಿದೆ ಎಂದು ಹೇಳೀದ್ದಾರೆ.

ಬಾಲಿವುಡ್​​ ನಟ ಅನುಪಮ್ ಖೇರ್:

ಅನುಪಮ್ ಖೇರ್ ಅವರು ಕೂಡ ‘ವೋಕಲ್ ಫಾರ್ ಲೋಕಲ್’ನ್ನು ಬಗ್ಗೆ ಹಂಚಿಕೊಂಡಿದ್ದಾರೆ, ಈ ಮಕ್ಕಳು ಮಾತನಾಡಲು ಸಾಧ್ಯವಿಲ್ಲ ಆದರೆ ಸ್ಥಳೀಯರಿಗೆ ಗಾಯನದಲ್ಲಿ ಅದ್ಭುತವಾಗಿ ತಮ್ಮ ಮಾತುಗಳು ತಿಳಿಸಿದ್ದಾರೆ. ನಾಕೋಡ ಕರ್ಣ ಕಿವುಡ ಶಾಲೆಯ (ಸರಾವಳಿ, ಥಾಣೆ) ವಿದ್ಯಾರ್ಥಿಗಳು ಸಹ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಯೋಚನೆಗೆ ಬದ್ಧವಾಗಿದ್ದಾರೆ. ನರೇಂದ್ರ ಮೋದಿ ‘ವೋಕಲ್ ಫಾರ್ ಲೋಕಲ್’ ಅಭಿಯಾನ ತುಂಬಾ ಅದ್ಭುತಗಳನ್ನು ಸೃಷ್ಟಿಸಲಿದೆ. ಈ ವೀಡಿಯೋ ನೋಡಿದ ಮೇಲೆ ನನಗೆ ಖುಷಿಯಾಯಿತು. ಬನ್ನಿ ಎಲ್ಲರೂ ಪೂರ್ಣ ಉತ್ಸಾಹದಿಂದ ‘ವೋಕಲ್ ಫಾರ್ ಲೋಕಲ್’ ಸೇರೋಣ ಎಂದು ಹೇಳಿದ್ದಾರೆ.

ವರುಣ್ ಶರ್ಮ:

ಚಿತ್ರ ನಟ ಹಾಗೂ ಹಾಸ್ಯ ನಟನಾಗಿರುವ ವರುಣ್ ಶರ್ಮ ಅವರು ಕೂಡ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಬೆಂಬಲ ನೀಡಿದ್ದು, ಈ ಬಗ್ಗೆ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ಖಾದಿ ನಮಗೆ ಕೇವಲ ಬಟ್ಟೆಯಲ್ಲ, ಅದು ನಮ್ಮೆಲ್ಲರ ಸ್ವಾಭಿಮಾನ. ಪ್ರಧಾನಿ ಮೋದಿ ಅವರು ಈ ಕಾರ್ಯದಲ್ಲಿ ನಾವು ಕೈಜೋಡಿಸೋಣ. ಖಾದಿ ಬಳಸಿ, ಮತ್ತು ನಮಗೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೂಟ್ಯೂಬರ್​​​ಗಳೊಂದಿಗೆ ಮೋದಿ ಮಾತು; ಸ್ವಚ್ಛತೆ, ಡಿಜಿಟಲ್ ಪಾವತಿ, ವೋಕಲ್ ಫಾರ್ ಲೋಕಲ್ ಬಗ್ಗೆ ಮಾತನಾಡಿದ ಪ್ರಧಾನಿ

ಭೂಮಿ ಪೆಡ್ನೇಕರ್:

ಖ್ಯಾತ ನಟಿ ಭೂಮಿ ಪೆಡ್ನೇಕರ್ ಅವರು ಕೂಡ ‘ವೋಕಲ್ ಫಾರ್ ಲೋಕಲ್’ ಬೆಂಬಲಿಸಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕರಕುಶಲತೆಯು ವಿಶ್ವ ಮಟ್ಟದಲ್ಲಿ ಅತ್ಯುತ್ತಮವಾಗಿದೆ. ನಮ್ಮದೇ ಪರಂಪರೆಯನ್ನು ಆಚರಿಸೋಣ ಮತ್ತು ನಮ್ಮ ಪ್ರಧಾನಮಂತ್ರಿಗಳೊಂಂದಿಗೆ ವೋಕಲ್ ಫಾರ್ ಲೋಕಲ್’ ಸೇರೋಣ, ಜತೆಗೆ ಎಷ್ಟು ಸಾಧ್ಯವೋ ಅಷ್ಟು ದೇಶಿ ವಸ್ತುಗಳನ್ನು ಬಳಸೋಣ ಎಂದು ಇನ್ಸ್ಟಾಗ್ರಾಮ್​​​​​ ಹಂಚಿಕೊಂಡಿದ್ದಾರೆ.

ಜಾಕಿ ಶ್ರಾಫ್:

ಬಾಲಿವುಡ್​​​ ನಟ ಜಾಕಿ ಶ್ರಾಫ್ ಅವರು ಕೂಡ ವೋಕಲ್ ಫಾರ್ ಲೋಕಲ್’ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ. ನಾವು ಒಂದು ಸ್ಥಳೀಯ ಉತ್ಪನ್ನವನ್ನು ಖರೀದಿಸಿದಾಗ, ಅದಕ್ಕಾಗಿ ಶ್ರಮಿಸಿದ ಜೀವಿಗಳಿಗೆ ತಲುಪುತ್ತದೆ. ಅವರು ಕೂಡ ಖುಷಿಯಾಗಿರುತ್ತಾರೆ. ಇದು ನಮ್ಮ ಪ್ರಧಾನಿ ಅವರ ಒಂದು ಸುಂದರ ಯೋಚನೆ. ಈ ದೀಪಾವಳಿಯಲ್ಲಿ #VocalForLocal ಅಭಿಯಾನಕ್ಕಾಗಿ ಪ್ರತಿಜ್ಞೆ ಮಾಡೋಣ ಎಂದು ಹೇಳಿದ್ದಾರೆ.

ಬೊಮನ್ ಇರಾನಿ:

ಬೊಮನ್ ಇರಾನಿ ಅವರು ಕೂಡ ವೋಕಲ್ ಫಾರ್ ಲೋಕಲ್’ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೀಪಾವಳಿಯು ಸಂತೋಷದ ಸಂದರ್ಭವಾಗಿದೆ. ಮೋದಿ ಸರ್ಕಾರವು ನಮ್ಮ ಕೋಟ್ಯಂತರ ನಾಗರಿಕರ ಜೀವನವನ್ನು ಹೇಗೆ ಬೆಳಗಿಸಿದೆ ಮತ್ತು ಅದರ ವಿವಿಧ ಯೋಜನೆಗಳು ಹೇಗೆ? ಫಲಿಸಿದೆ ಎಂಬುದನ್ನು ಈ ವೀಡಿಯೊವನ್ನು ನೋಡಿ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತಾಂತ್ರಿಕ ಗುರೂಜಿ:

ತಾಂತ್ರಿಕ ಗುರೂಜಿ ಎಂದು ಕರೆಯಲ್ಪಡುವ ಗೌರವ್​​​ ಚೌಧರಿ ಅವರು ವೋಕಲ್ ಫಾರ್ ಲೋಕಲ್​​ಗೆ ಬೆಂಬಲ ನೀಡಿದ್ದಾರೆ. ನಾವು ಈ ಹಬ್ಬದ ಋತುವನ್ನು ಆಚರಿಸುತ್ತಿದ್ದಾರೆ ಹಾಗೂ ವೋಕಲ್ ಫಾರ್ ಲೋಕಲ್ ಕೈಜೋಡಿಸೋಣ ಎಂದು ಹೇಳಿದ್ದಾರೆ.

ಅನಂತ್ ಲಾಧಾ:

ಇನ್ವೆಸ್ಟ್ ಆಜ್ ಫಾರ್ ಕಲ್ ಸಂಸ್ಥಾಪಕ ಅನಂತ್ ಲಾಧಾ ಅವರು ಕೂಡ ವೋಕಲ್ ಫಾರ್ ಲೋಕಲ್ ಬೆಂಬಲ ಸೂಚಿಸಿದ್ದಾರೆ. ಅನಂತ್ ಲಾಧಾ ಅವರು ತಮ್ಮ ಕುಟುಂಬದ ಜತೆಗೆ ಮಾರ್ಕೆಟ್​​​ ಹೋಗಿ ದೀಪಾವಳಿಗೆ ದೇಶಿ ವಸ್ತುಗಳನ್ನು ಖರೀದಿ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಕೀರ್ತಿ :

ಕೀರ್ತಿ ಹಿಸ್ಟರಿ ಎಂಬ ಯೂಟ್ಯೂಬ್​​​ ಬ್ಲಾಗರ್​​ ಕೂಡ ವೋಕಲ್ ಫಾರ್ ಲೋಕಲ್ ಬೆಂಬಲ ನೀಡಿ ಭಾರತದ ಹೊರದೇಶದಿಂದ ಖರೀದಿಸುತ್ತಿದ್ದ ವಸ್ತುಗಳನ್ನು ಬಗ್ಗೆ ಹಾಗೂ ವೋಕಲ್ ಫಾರ್ ಲೋಕಲ್ ಬಗ್ಗೆ ತಿಳಿಸುವ ಮೂಲಕ ಜನರಿಗೆ ವೋಕಲ್ ಫಾರ್ ಲೋಕಲ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಅಭಿ ಮತ್ತು ನಿಯು

ಅಭಿ ಮತ್ತು ನಿಯು ಎಂಬ ಯೂಟ್ಯೂಬ್​​​ ಬ್ಲಾಗರ್ ವೋಕಲ್ ಫಾರ್ ಲೋಕಲ್ ಬೆಂಬಲ ನೀಡಿದ್ದಾರೆ. ಈ ದೀಪಾವಳಿಗೆ #VocalForLocal ಬೆಂಬಲಿಸಿ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಭಾರತದಲ್ಲಿ ತಯಾರಿಸಿದ ಉಡುಗೊರೆಗಳನ್ನು ಖರೀದಿಸಿ. ಸಣ್ಣ ವ್ಯಾಪಾರಗಳನ್ನು ಬೆಂಬಲಿಸಿ ಎಂದು ಇನ್ಸ್ಟಾಗ್ರಾಮ್​​​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಹರೀಶ್ ಬಾಳಿ:

visa2explore ಎಂಬ ಯೂಟ್ಯೂಬ್​​​ ಬ್ಲಾಗರ್​​​ನ ಹರೀಶ್ ಬಾಳಿ ಅವರು ವೋಕಲ್ ಫಾರ್ ಲೋಕಲ್ ಬೆಂಬಲ ಸೂಚಿಸಿದ್ದಾರೆ. ನನ್ನ ಜಾರ್ಖಂಡ್ ಪ್ರವಾಸದ ಸಮಯದಲ್ಲಿ ನೆಟಾರ್‌ಹಟ್‌ನಿಂದ ಈ ಸುಂದರ-ಕಾಡು ಜೇನುತುಪ್ಪವನ್ನು ಖರೀದಿಸಿದೆ. #vocalforlocalನಲ್ಲಿ ಈ ಸರಣಿಯ ಸಂಚಿಕೆಯಲ್ಲಿ ಹರೀಶ್ ಬಾಲಿ ಟ್ರಾವೆಲ್ಸ್‌ನಲ್ಲಿ ಬರಲಿದೆ. ನಾನು ಇದನ್ನು ನೆಟರ್‌ಹಾಟ್‌ನಲ್ಲಿರುವ ಸರ್ಕಾರಿ ಅತಿಥಿ ಗೃಹದ ಹೊರಗಿನ ಅಂಗಡಿಯಿಂದ ಖರೀದಿಸಿದೆ. ಈ ಅಂಗಡಿಯು ಬೆಳಿಗ್ಗೆ 7 ರಿಂದ 10.30 ರವರೆಗೆ ಮಾತ್ರ ತೆರೆದಿರುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ