800 ಗ್ರಾಂ ಚಿನ್ನ, 70 ಲಕ್ಷ ಬೆಲೆ ಬಾಳುವ ಕಾರು ಕೊಟ್ಟರೂ ವರದಕ್ಷಿಣೆ ಕಾಟ, ನವವಿವಾಹಿತೆ ಆತ್ಮಹತ್ಯೆ

ಲಕ್ಷ ಲಕ್ಷ ವರದಕ್ಷಿಣೆ ಕೊಟ್ಟರೂ ಅತ್ತೆ ಮನೆಯಲ್ಲಿ ನಿರಂತರವಾಗಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಏಪ್ರಿಲ್​ನಲ್ಲಿ ಮದುವೆ ನೆರವೇರಿತ್ತು, 800 ಗ್ರಾಂ ಚಿನ್ನ ಹಾಗೂ 70 ಲಕ್ಷ ಬೆಲೆ ಬಾಳುವ ಕಾರು ನೀಡಿದ್ದರು. ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ರಿಧನ್ಯಾ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್​ನಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು.

800 ಗ್ರಾಂ ಚಿನ್ನ, 70 ಲಕ್ಷ ಬೆಲೆ ಬಾಳುವ ಕಾರು ಕೊಟ್ಟರೂ ವರದಕ್ಷಿಣೆ ಕಾಟ, ನವವಿವಾಹಿತೆ ಆತ್ಮಹತ್ಯೆ
ಮದುವೆ
Image Credit source: India Today

Updated on: Jun 30, 2025 | 11:14 AM

ಚೆನ್ನೈ, ಜೂನ್ 30: ಕಳೆದ ಏಪ್ರಿಲ್​​ನಲ್ಲಿ ಅದ್ಧೂರಿ ಮದುವೆ(Marriage) ನೆರವೇರಿತ್ತು. 800 ಗ್ರಾಂ ಚಿನ್ನ, 70 ಲಕ್ಷ ಬೆಲೆ ಬಾಳುವ ಕಾರು ವರದಕ್ಷಿಣೆಯಾಗಿ ನೀಡಿದ್ದರೂ ಕೂಡ, ಆಕೆಗೆ ಚಿತ್ರಹಿಂಸೆ ಮಾತ್ರ ತಪ್ಪಲಿಲ್ಲ. ಅದಕ್ಕೆ ಮನನೊಂದು ನವವಿವಾಹಿತೆ ರಿಧನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ದೇಶದಲ್ಲಿ ವರದಕ್ಷಿಣೆ ಪಿಡುಗು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಇಂಥಾ ಪ್ರಕರಣಗಳು ಹೆಣ್ಣು ಹೆತ್ತವರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ರಿಧನ್ಯಾ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್​ನಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಲ್ಲಿ 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು.

ಭಾನುವಾರ ರಿಧನ್ಯಾ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು, ದಾರಿಯಲ್ಲಿ ಆಕೆ ತನ್ನ ಕಾರನ್ನು ನಿಲ್ಲಿಸಿ ಕೀಟನಾಶಕ ಸೇವಿಸಿದ್ದಾರೆ. ಈ ಪ್ರದೇಶದಲ್ಲಿ ತುಂಬಾ ಹೊತ್ತಿನಿಂದ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ರಿಧನ್ಯಾಳ ಬಾಯಿಂದ ನೊರೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಪ್ರಾಣ ಬಿಟ್ಟಿದ್ದರು.

ಮತ್ತಷ್ಟು ಓದಿ: Viral: ಮುಂದಿನ ಜನ್ಮದಲ್ಲಿ ಸಿಗೋಣ… ವರನಿಗೆ ಮೆಸೇಜ್‌ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು

ಮೂಲಗಳ ಪ್ರಕಾರಮ ರಿಧನ್ಯಾ ಸಾಯುವ ಮುನ್ನ ತಂದೆಗೆ ವಾಟ್ಸಾಪ್​ನಲ್ಲಿ 7 ಆಡಿಯೋ ಸಂದೇಶಗಳನ್ನು ಕಳುಹಿಸಿದ್ದಳು. ಅದರಲ್ಲಿ ತನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದಳು.ಗಂಡನ ಮನೆಯಲ್ಲಿ ಕೊಡುತ್ತಿದ್ದ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.

ಮತ್ತೊಂದು ಸಂದೇಶದಲ್ಲಿ ಬೇರೊಬ್ಬನಿಗೆ ತನ್ನನ್ನು ಮದುವೆ ಮಾಡಿಕೊಡಲು ಅತ್ತೆಯ ಮನೆಯವರು ನಿರ್ಧರಿಸಿದ್ದಾರೆ, ಅವರು ಕೊಡುವ ಹಿಂಸೆ ತಡೆಯಲಾಗುತ್ತಿಲ್ಲ, ಯಾರ ಬಳಿ ಹೇಳಿಕೊಳ್ಳಬೇಕೆಂಬುದು ಗೊತ್ತಿಲ್ಲ ಎಂದು ನೋವಿನಿಂದ ಮಾತನಾಡಿದ್ದಳು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:12 am, Mon, 30 June 25