AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 9ರೊಳಗೆ ಅಂತಿಮಗೊಳ್ಳಲಿದೆಯಾ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ? ಟ್ಯಾರಿಫ್ ಕಂಟಕ ತಪ್ಪುತ್ತದಾ?

India US trade deal: ಅಮೆರಿಕ ಸರ್ಕಾರವು ವಿವಿಧ ದೇಶಗಳ ಮೇಲೆ ಪೂರ್ಣ ಟ್ಯಾರಿಫ್ ಹೇರಿಕೆಯಿಂದ ವಿನಾಯಿತಿ ಕೊಡಲಾಗಿದ್ದ 90 ದಿನಗಳ ಅವಧಿ ಜುಲೈ 9ಕ್ಕೆ ಮುಗಿಯುತ್ತದೆ. ಅಷ್ಟರೊಳಗೆ ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಪ್​ರಯತ್ನಿಸುತ್ತಿದೆ. ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ನೇತೃತ್ವದ ಭಾರತೀಯ ತಂಡವೊಂದು ಅಮೆರಿಕದಲ್ಲಿ ಮಾತುಕತೆ ಕುದುರಿಸುತ್ತಿದೆ.

ಜುಲೈ 9ರೊಳಗೆ ಅಂತಿಮಗೊಳ್ಳಲಿದೆಯಾ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ? ಟ್ಯಾರಿಫ್ ಕಂಟಕ ತಪ್ಪುತ್ತದಾ?
ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 30, 2025 | 12:28 PM

Share

ನವದೆಹಲಿ, ಜೂನ್ 30: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ (India US trade deal) ಏರ್ಪಡಲು ನಡೆಯುತ್ತಿರುವ ಮಾತುಕತೆ ಮತ್ತು ಸಂಧಾನ ಸದ್ಯದಲ್ಲೇ ತಾರ್ಕಿಕ ಅಂತ್ಯ ಮುಟ್ಟಬಹುದು. ವರದಿಗಳ ಪ್ರಕಾರ, ಜುಲೈ 9ರೊಳಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ. ಜುಲೈ 9ರೊಳಗೆ ಈ ಡೀಲ್ ಮುಗಿಸಲು ಭಾರತ ಆತುರಪಡಲು ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಡೆಡ್​​ಲೈನ್ (Tariff Pause) ಕೂಡ ಒಂದು ಕಾರಣ. ತೆರಿಗೆ ಹೇರಿಕೆಯಿಂದ ವಿನಾಯಿತಿ ನೀಡಲಾಗಿದ್ದ 90 ದಿನಗಳ ಕಾಲಾವಕಾಶವು ಜುಲೈ 9ಕ್ಕೆ ಮುಗಿಯುತ್ತದೆ. ಈ ವಿನಾಯಿತಿಯನ್ನು ಮುಂದುವರಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು. ಹೀಗಾಗಿ, ಅಷ್ಟರೊಳಗೆ ಅಮೆರಿಕದೊಂದಿಗೆ ಒಪ್ಪಂದ ಅಂತಿಮಗೊಳಿಸುವ ಗುರಿ ಭಾರತದ್ದಾಗಿದೆ.

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಭಾರತದ ವಾಣಿಜ್ಯ ಇಲಾಖೆ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ತಂಡವೊಂದು ಅಮೆರಿಕದಲ್ಲಿದೆ. ಅಮೆರಿಕದಲ್ಲಿ ಈ ಕುರಿತು ಮಾತನಾಡಿರುವ ರಾಜೇಶ್ ಅಗರ್ವಾಲ್, ಈ ಒಪ್ಪಂದದಲ್ಲಿ ಭಾರತದ ಕೃಷಿ ವಲಯವನ್ನು ರಕ್ಷಿಸಲಾಗುವುದು ಎಂದಿದ್ದಾರೆ. ಕೆಲ ಸೆಕ್ಟರ್​ಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಸರಕುಗಳಿಗೂ ಟ್ಯಾರಿಫ್ ತಡೆಯನ್ನು ನಿವಾರಿಸುವ ಅಥವಾ ಕಡಿಮೆ ಮಾಡುವ ಸಾಧ್ಯತೆಯ ಸುಳಿವು ಇದೆ.

ಇದನ್ನೂ ಓದಿ: Adani Green: ಭಾರತದ ಇತಿಹಾಸದಲ್ಲೇ ಅತಿಹೆಚ್ಚು ನವೀಕರಣ ಇಂಧನ ಉತ್ಪಾದನೆ: ಅದಾನಿ ಕಂಪನಿ ದಾಖಲೆ

ಭಾರತದ ಪ್ರಮುಖ ರಫ್ತು ಮಾರುಕಟ್ಟೆಗಳಲ್ಲಿ ಅಮೆರಿಕವೂ ಒಂದು. ಹೀಗಾಗಿ, ಭಾರತ ಟ್ಯಾರಿಫ್ ಹೇರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು ಬಹುತೇಕ ಅನಿವಾರ್ಯವಾಗಿದೆ.

ಟ್ಯಾರಿಫ್ ವಿಷಯದಲ್ಲಿ ಟ್ರಂಪ್ ಹಠಮಾರಿತನ

ವಿವಿಧ ದೇಶಗಳು ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು ಎನ್ನುವುದು ಡೊನಾಲ್ಡ್ ಟ್ರಂಪ್ ನಿರೀಕ್ಷೆಯಾಗಿದೆ. ಏಪ್ರಿಲ್​​ನಲ್ಲಿ ಅವರು ಭಾರತವನ್ನೂ ಒಳಗೊಂಡಂತೆ ಬಹುತೇಕ ಎಲ್ಲಾ ದೇಶಗಳ ಮೇಲೂ ದೊಡ್ಡ ಮಟ್ಟದಲ್ಲಿ ಆಮದು ಸುಂಕ ವಿಧಿಸಿದ್ದರು. ಕೆಲ ದಿನಗಳ ಬಳಿಕ ಅವರು 90 ದಿನಗಳ ವಿರಾಮ ಪ್ರಕಟಿಸಿದ್ದರು. ಈ ಗಡುವು ಜುಲೈ 9ಕ್ಕೆ ಮುಗಿಯುತ್ತದೆ. ಗಡುವನ್ನು ವಿಸ್ತರಿಸುವುದಿಲ್ಲ ಎಂದು ಟ್ರಂಪ್ ಬಾರಿ ಬಾರಿ ಹೇಳುತ್ತಿದ್ದಾರೆ.

ಇದನ್ನೂ ಓದಿ: ಶೇ. 5 ಅಲ್ಲ, ಶೇ. 3.5 ಅಲ್ಲ, ಶೇ. 1ಕ್ಕೆ ಇಳಿಯಲಿದೆ ರೆಮಿಟೆನ್ಸ್ ಟ್ಯಾಕ್ಸ್; ಅಮೆರಿಕದ ಎನ್​ಆರ್​​ಐಗಳಿಗೆ ಖುಷಿ ಸುದ್ದಿ

‘ಒಂದು ದೇಶವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ, ಅವರು ಒಳ್ಳೆಯವರಾ, ಅಲ್ಲವಾ ಎಂದು ನೋಡುತ್ತೇವೆ. ಕೆಲ ದೇಶಗಳ ಮೇಲೆ ನಮಗ್ಯಾವ ಕಾಳಜಿಯೂ ಇರುವುದಿಲ್ಲ. ಅಧಿಕ ಸಂಖ್ಯೆ (ಟ್ಯಾರಿಫ್) ಕಳುಹಿಸುತ್ತೇವೆ’ ಎಂದು ಫಾಕ್ಸ್ ನ್ಯೂಸ್ ವಾಹಿನಿ ಜೊತೆ ಟ್ರಂಪ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ