ಸೇವೆಯ ರಾಜಕಾರಣದ ಆಧಾರದ ಮೇಲೆ ಮತ ಗೆಲ್ಲಬಹುದೇ ಹೊರತು ಪೋಸ್ಟರ್ಗಳಿಂದಲ್ಲ: ನಿತಿನ್ ಗಡ್ಕರಿ
ಅಭಿವೃದ್ಧಿಯನ್ನು ಗ್ರಾಮಗಳಿಗೆ ಕೊಂಡೊಯ್ಯುವುದು ಮತ್ತು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಲಭ್ಯವಿರುವ ಸ್ಮಾರ್ಟ್ ಗ್ರಾಮಗಳನ್ನು ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಗಡ್ಕರಿ ಹೇಳಿದರು.
ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳಿಂದಲ್ಲ ಸೇವೆಯ ರಾಜಕಾರಣದ ಆಧಾರದ ಮೇಲೆ ಮತಗಳನ್ನು ಗೆಲ್ಲಲಾಗುತ್ತದೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿಯ (BJP) ಹಿರಿಯ ನಾಯಕ ನಿತಿನ್ ಗಡ್ಕರಿ (Nitin Gadkari)ಸೋಮವಾರ ಹೇಳಿದ್ದಾರೆ. ರಾಜಸ್ಥಾನದ ಸಿಕರ್ ಜಿಲ್ಲೆಯ ಖಚರಿಯಾವಾಸ್ ಗ್ರಾಮದಲ್ಲಿ ಮಾಜಿ ಉಪಾಧ್ಯಕ್ಷ ಭೈರೋನ್ ಸಿಂಗ್ ಶೇಖಾವತ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಗಡ್ಕರಿ ಮಾತನಾಡಿದರು. ಗಡ್ಕರಿ ಅವರು ಕಳೆದ ಚುನಾವಣೆಯಲ್ಲಿ ನಾಗ್ಪುರದಿಂದ ಸ್ಪರ್ಧಿಸಿದ್ದರು. ಜನರು ಅಲ್ಲಿಂದ ಸ್ಪರ್ಧಿಸಬೇಡಿ ಎಂದು ಹೇಳಿದ್ದರೂ ಅವರು ದೃಢಸಂಕಲ್ಪದಿಂದ ಮುನ್ನಡೆದರು. ಈಗ ನಾನು ಮುಂದಿನ ಚುನಾವಣೆಯಲ್ಲಿ ಯಾವುದೇ ಪೋಸ್ಟರ್ ಅಥವಾ ಬ್ಯಾನರ್ ಹಾಕುವುದಿಲ್ಲ, ಯಾರಿಗೂ ಚಹಾ ನೀಡುವುದಿಲ್ಲ ಅಥವಾ ಬೇರೆ ಏನನ್ನೂ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ. ನನಗೆ ಮತ ಹಾಕಲು ಬಯಸುವವರು ಹಾಗೆ ಮಾಡುತ್ತಾರೆ ಮತ್ತು ಬೇಡದವರು ಮಾಡುವುದಿಲ್ಲ ಎಂದಿದ್ದಾರೆ ಗಡ್ಕರಿ.
ಕಳೆದ ಬಾರಿ 3.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಕ್ಕಿಂತ ಹೆಚ್ಚಿನ ಅಂತರದಿಂದ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೇವೆಯ ರಾಜಕೀಯ ಪರಿಕಲ್ಪನೆಯನ್ನು ಆರ್‌ಎಸ್‌ಎಸ್ ಸಿದ್ಧಾಂತವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ತಂದರು. ಅವರು ಈ ಪರಿಕಲ್ಪನೆಯ ಮೇಲೆ ತಮ್ಮ ರಾಜಕೀಯವನ್ನು ವ್ಯಾಖ್ಯಾನಿಸಿದ್ದಾರೆ. ಉಪಾಧ್ಯಾಯ ಅವರು ಬಿಜೆಪಿಯ ರಾಷ್ಟ್ರೀಯತೆಯ ಸಿದ್ಧಾಂತವನ್ನು ನೀಡಿದರು, ಅದು ಪಕ್ಷದ ಆತ್ಮವಾಗಿದೆ. ರಾಷ್ಟ್ರ ಎಲ್ಲದಕ್ಕಿಂತಲೂ ಮೇಲೆ. ರಾಷ್ಟ್ರಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಗಡ್ಕರಿ ಹೇಳಿದ್ದಾರೆ. ಉತ್ತಮ ಆಡಳಿತ ಮತ್ತು ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಉಪಾಧ್ಯಾಯ ಅವರು ಅಂತ್ಯೋದಯ ಪರಿಕಲ್ಪನೆಯನ್ನು ನೀಡಿದರು, ಅಂದರೆ ಅಭಿವೃದ್ಧಿಯನ್ನು ಕೊನೆಯ ವ್ಯಕ್ತಿಗೆ ಕೊಂಡೊಯ್ಯುವುದು. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆಹಾರ, ವಸತಿ, ಬಟ್ಟೆ ಒದಗಿಸುವುದು ನಮ್ಮ ಗುರಿಯಾಗಿದೆ. ನಾವು ಅದನ್ನು ಮಾಡಲು ಸಾಧ್ಯವಾದಾಗ, ನಮ್ಮ ಧ್ಯೇಯವು ಪೂರ್ಣಗೊಳ್ಳುತ್ತದೆ.
ಭೈರೋನ್ ಸಿಂಗ್ ಶೇಖಾವತ್ ಅವರು ಮುಖ್ಯಮಂತ್ರಿಯಾಗಿ ಉಪಾಧ್ಯಾಯ ಅವರ ಪರಿಕಲ್ಪನೆಯನ್ನು ತೆಗೆದುಕೊಂಡು ರಾಜಸ್ಥಾನದಲ್ಲಿ ಕೆಲಸಕ್ಕಾಗಿ ಆಹಾರ ಯೋಜನೆಯ ಮೂಲಕ ಅದನ್ನು ನೆಲದ ಮೇಲೆ ಜಾರಿಗೆ ತಂದರು, ಇದಕ್ಕಾಗಿ ಅವರು ವಿಶ್ವಬ್ಯಾಂಕ್ ನಿಂದ ಪ್ರಶಂಸಿಸಲ್ಪಟ್ಟರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ, ಆದರೆ ಷರತ್ತು ಇದೆ: ವಿರೋಧ ಪಕ್ಷದ ಏಕತೆ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದೇನು?
ಅಭಿವೃದ್ಧಿಯನ್ನು ಗ್ರಾಮಗಳಿಗೆ ಕೊಂಡೊಯ್ಯುವುದು ಮತ್ತು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಲಭ್ಯವಿರುವ ಸ್ಮಾರ್ಟ್ ಗ್ರಾಮಗಳನ್ನು ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಗಡ್ಕರಿ ಹೇಳಿದರು.
ದೆಹಲಿ-ಜೈಪುರ ಎಲೆಕ್ಟ್ರಿಕ್ ಹೆದ್ದಾರಿಯ ಕಾಮಗಾರಿಯು ಚಾಲನೆಯಲ್ಲಿದೆ. ಎಲೆಕ್ಟ್ರಿಕ್ ಬಸ್‌ಗಳು ಓಡಿದಾಗ, ಟಿಕೆಟ್ ದರವು (ಇಂದಿನ) ದರಕ್ಕಿಂತ ₹ 30 ಕಡಿಮೆ ಇರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಜೇಂದ್ರ ರಾಥೋಡ್, ಪ್ರತಿಪಕ್ಷದ ಉಪ ನಾಯಕ ಸತೀಶ್ ಪೂನಿಯಾ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ