ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ, ಆದರೆ ಷರತ್ತು ಇದೆ: ವಿರೋಧ ಪಕ್ಷದ ಏಕತೆ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದೇನು?
ಎಲ್ಲೆಲ್ಲಿ ಪ್ರಾದೇಶಿಕ ಪಕ್ಷ ಬಲಿಷ್ಠವಾಗಿದೆಯೋ ಅಲ್ಲಿ ಬಿಜೆಪಿ ಹೋರಾಡಲು ಸಾಧ್ಯವಿಲ್ಲ. ನಿರ್ದಿಷ್ಟ ಪ್ರದೇಶದಲ್ಲಿ ಪ್ರಬಲವಾಗಿರುವ ಪಕ್ಷಗಳು ಒಟ್ಟಾಗಿ ಹೋರಾಡಬೇಕು. ನಾನು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇನೆ ಆದರೆ ಬಂಗಾಳದಲ್ಲಿ ನನ್ನ ವಿರುದ್ಧ ಹೋರಾಡಬಾರದು ಎಂದ ಮಮತಾ
ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಯಲ್ಲಿ (2024 Lok Sabha elections) ಎಲ್ಲಿ ಕಾಂಗ್ರೆಸ್ (Congress) ಪ್ರಬಲವಾಗಿದೆಯೋ ಅಲ್ಲಿ ತಮ್ಮ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಹೇಳಿದ್ದಾರೆ. ಮುಂಬರುವ ಚುನಾವಣಾ ಕದನದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಸಂಭಾವ್ಯ ಕಾರ್ಯತಂತ್ರದ ಕುರಿತು ತೃಣಮೂಲದ ನಿಲುವಿನ ಬಗ್ಗೆ ಮಮತಾ ಈ ರೀತಿ ಮಾತನಾಡಿದ್ದು ಇದೇ ಮೊದಲು.
ಕಾಂಗ್ರೆಸ್ ಎಲ್ಲೆಲ್ಲಿ ಪ್ರಬಲವಾಗಿದೆಯೋ ಅಲ್ಲಿ ಅವರು ಹೋರಾಡಲಿ. ನಾವು ಅವರಿಗೆ ಬೆಂಬಲ ನೀಡುತ್ತೇವೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರು ಇತರ ರಾಜಕೀಯ ಪಕ್ಷಗಳನ್ನು ಸಹ ಬೆಂಬಲಿಸಬೇಕು ಎಂದು ರಾಜ್ಯ ಸಚಿವಾಲಯದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಮಮತಾ ಹೇಳಿದ್ದಾರೆ.
#WATCH | Wherever a regional political party is strong there BJP cannot fight. The parties which are strong in a particular region should fight together. I am supporting Congress in Karnataka but it should not fight against me in Bengal: West Bengal CM Mamata Banerjee pic.twitter.com/wIazux6oKq
— ANI (@ANI) May 15, 2023
ಈ ರೀತಿ ಬೆಂಬಲ ಪಡೆಯಲು ಕಾಂಗ್ರೆಸ್ ಕೂಡ ಇತರ ಪಕ್ಷಗಳಿಗೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಎಲ್ಲೆಲ್ಲಿ ಪ್ರಾದೇಶಿಕ ಪಕ್ಷ ಬಲಿಷ್ಠವಾಗಿದೆಯೋ ಅಲ್ಲಿ ಬಿಜೆಪಿ ಹೋರಾಡಲು ಸಾಧ್ಯವಿಲ್ಲ. ನಿರ್ದಿಷ್ಟ ಪ್ರದೇಶದಲ್ಲಿ ಪ್ರಬಲವಾಗಿರುವ ಪಕ್ಷಗಳು ಒಟ್ಟಾಗಿ ಹೋರಾಡಬೇಕು. ನಾನು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇನೆ ಆದರೆ ಬಂಗಾಳದಲ್ಲಿ ನನ್ನ ವಿರುದ್ಧ ಹೋರಾಡಬಾರದು. ಸೀಟು ಹಂಚಿಕೆ ಸೂತ್ರವು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡುತ್ತದೆ ಎಂದು ತೃಣಮೂಲ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಬಲಿಷ್ಠ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ ಮಮತಾ.
ಇದನ್ನೂ ಓದಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ; ಒಂದು ತಿಂಗಳ ಕಾಲ ವಿಶೇಷ ಅಭಿಯಾನ ನಡೆಸಲು ಬಿಜೆಪಿ ಸಿದ್ಧತೆ
ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸದೆಯೇ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ರಾಜ್ಯದ ಜನತೆಗೆ ಧನ್ಯವಾದಗಳು ಎಂದು ಮಮತಾ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ