ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಚಿದಂಬರಂ ಮಾಡಿದ ಟೀಕೆ ಅಕ್ಷಮ್ಯ: ಜಗದೀಪ್ ಧನ್ಖರ್

ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನ್ಖರ್ ಬೆಳಿಗ್ಗೆ ನಾನು ಚಿದಂಬರಂ ಅವರು ಪ್ರಮುಖ ರಾಷ್ಟ್ರೀಯ ದೈನಿಕಕ್ಕೆ ನೀಡಿದ ಸಂದರ್ಶನವನ್ನು ಓದಿದೆ. ಅದರಲ್ಲಿ ಅವರು ಹೊಸ ಕಾನೂನುಗಳನ್ನು ಅರೆಕಾಲಿಕ ವ್ಯಕ್ತಿಗಳು ರಚಿಸಿದ್ದಾರೆ ಎಂದು ಹೇಳಿದ್ದು ನೋಡಿ ನನಗೆ ಅಚ್ಚರಿಯಾಯಿತು. ನಾವು ಸಂಸತ್ತಿನಲ್ಲಿ ಅರೆಕಾಲಿಕವೇ? ಇದು ಸಂಸತ್ತಿನ ಜ್ಞಾನಕ್ಕೆ ಅಕ್ಷಮ್ಯ ಅವಮಾನವಾಗಿದೆ ಎಂದಿದ್ದಾರೆ.

ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಚಿದಂಬರಂ ಮಾಡಿದ ಟೀಕೆ ಅಕ್ಷಮ್ಯ: ಜಗದೀಪ್ ಧನ್ಖರ್
ಜಗದೀಪ್ ಧನ್ಖರ್
Follow us
ರಶ್ಮಿ ಕಲ್ಲಕಟ್ಟ
|

Updated on:Jul 06, 2024 | 6:08 PM

ದೆಹಲಿ ಜುಲೈ 06: ಮೂರು ಹೊಸ ಕ್ರಿಮಿನಲ್ ಕಾನೂನುಗಳ (criminal laws)ಕುರಿತು ಪಿ ಚಿದಂಬರಂ (P Chidambaram) ಅವರ ಕುಟುಕು ಅವಲೋಕನಗಳ ಬಗ್ಗೆ ಪ್ರತಿಕ್ರಿಯಿಸಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ (Jagdeep Dhankhar) ಮಾಜಿ ಕೇಂದ್ರ ಸಚಿವರ ಹೇಳಿಕೆ ‘ಅಕ್ಷಮ್ಯ’ ಎಂದಿದ್ದಾರೆ. ಚಿದಂಬರಂ ಅವರು ತಮ್ಮ ‘ಅವಹೇಳನಕಾರಿ, ಮಾನಹಾನಿಕರ ಮತ್ತು ಅವಮಾನಕರ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಧನ್ಖರ್ ಒತ್ತಾಯಿಸಿದ್ದಾರೆ.

ಬೆಳಿಗ್ಗೆ ನಾನು ಚಿದಂಬರಂ ಅವರು ಪ್ರಮುಖ ರಾಷ್ಟ್ರೀಯ ದೈನಿಕಕ್ಕೆ ನೀಡಿದ ಸಂದರ್ಶನವನ್ನು ಓದಿದೆ. ಅದರಲ್ಲಿ ಅವರು ಹೊಸ ಕಾನೂನುಗಳನ್ನು ಅರೆಕಾಲಿಕ ವ್ಯಕ್ತಿಗಳು ರಚಿಸಿದ್ದಾರೆ ಎಂದು ಹೇಳಿದ್ದು ನೋಡಿ ನನಗೆ ಅಚ್ಚರಿಯಾಯಿತು. ನಾವು ಸಂಸತ್ತಿನಲ್ಲಿ ಅರೆಕಾಲಿಕವೇ? ಇದು ಸಂಸತ್ತಿನ ಜ್ಞಾನಕ್ಕೆ ಅಕ್ಷಮ್ಯ ಅವಮಾನವಾಗಿದೆ ಎಂದು ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನ್ಖರ್ ಹೇಳಿದ್ದಾರೆ.

ಚಿದಂಬರಂ ಹಿರಿಯ ಕಾಂಗ್ರೆಸಿಗರು, ಕೇಂದ್ರದ ಮಾಜಿ ಹಣಕಾಸು ಸಚಿವ ಮತ್ತು ದೀರ್ಘ ಕಾಲ ಸಂಸದರಾಗಿದ್ದವರು ಹೀಗೆ ಹೇಳಿದ್ದು ಆಘಾತವುಂಟು ಮಾಡಿದೆ ಎಂದಿದ್ದಾರೆ ಧನ್ಖರ್.

ತಿಳುವಳಿಕೆಯುಳ್ಳ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ನಿಮ್ಮನ್ನು ದಾರಿತಪ್ಪಿಸಿದಾಗ, ನಾವು ಎಚ್ಚರದಿಂದಿರಬೇಕು. ಹೊಸ ಶಾಸನಗಳು ಹೇಗೆ ‘ವಸಾಹತುಶಾಹಿ ಪರಂಪರೆಯಿಂದ ನಮ್ಮನ್ನು ಹೊರತಂದವು’ ಮತ್ತು ‘ಯುಗಮಾನದ ಆಯಾಮ’ ನೀಡಿದವು ಎಂಬುದನ್ನು ನಾವು ಗಮನಿಸಬೇಕು.

“ಇವುಗಳು ಸದನದಲ್ಲಿ ಚರ್ಚೆಯಾಗುತ್ತಿರುವಾಗ, ಹಣಕಾಸು ಸಚಿವರಾಗಿ ಉತ್ತಮ ಹಿನ್ನೆಲೆ ಹೊಂದಿರುವ ಈ ಮಹನೀಯರು (ಚಿದಂಬರಂ) ಸುಮ್ಮನಿದ್ದರು. ‘ಕರ್ತವ್ಯ ವೈಫಲ್ಯಕ್ಕೆ ಅವರು ಸ್ವತಃ ಜವಾಬ್ದಾರರಾಗಿರುತ್ತಾರೆ. ನಿಮ್ಮ ಕಡೆಯಿಂದ ಕಮಿಷನ್/ ಕರ್ತವ್ಯ ಲೋಪ ಇದನ್ನು ಎಂದಿಗೂ ವಿವರಿಸಲಾಗುವುದಿಲ್ಲ” ಎಂದು ಧನ್ಖರ್ ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ‘ಅಭಯ ಮುದ್ರೆ’ ಹೇಳಿಕೆಗೆ ಎಸ್‌ಜಿಪಿಸಿ ಖಂಡನೆ

ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಮತ್ತು ಭಾರತೀಯ ಸಾಕ್ಷಾ ಅಧಿನಿಯಮ್ (BAS) – ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಕಾನೂನುಗಳಾಗಿದ್ದು ಇದು ನಂತರ ಜುಲೈ 1 ರಂದು ಜಾರಿಗೆ ಬಂದಿತು. ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಇವುಗಳನ್ನು ಪರಿಚಯಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sat, 6 July 24

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ