Waqf Amendment Bill: ಓವೈಸಿ, ತೇಜಸ್ವಿ ಸೂರ್ಯ ಸೇರಿದಂತೆ 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚನೆ

|

Updated on: Aug 09, 2024 | 4:15 PM

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ (ತಿದ್ದುಪಡಿ) ಮಸೂದೆ, 2024 ಕುರಿತು ಚರ್ಚಿಸಲು ಜೆಪಿಸಿಯನ್ನು ರಚಿಸಲು ಲೋಕಸಭೆಯ 21 ಸಂಸದರ ಹೆಸರನ್ನು ಮುಂದಿಟ್ಟಿದ್ದಾರೆ. ಅದೇ ವೇಳೆ ಸಮಿತಿಗೆ 10 ಸದಸ್ಯರ ಹೆಸರನ್ನು ಶಿಫಾರಸು ಮಾಡುವಂತೆ ರಾಜ್ಯಸಭೆಗೆ ಕರೆ ನೀಡಿದ್ದಾರೆ.ಜಗದಾಂಬಿಕಾ ಪಾಲ್, ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಅಭಿಜಿತ್ ಗಂಗೋಪಾಧ್ಯಾಯ ಸೇರಿದಂತೆ ಲೋಕಸಭೆಯಿಂದ 21 ಸದಸ್ಯರು ಇದರಲ್ಲಿದ್ದಾರೆ.

Waqf Amendment Bill: ಓವೈಸಿ, ತೇಜಸ್ವಿ ಸೂರ್ಯ ಸೇರಿದಂತೆ 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚನೆ
ಓಂ ಬಿರ್ಲಾ
Follow us on

ದೆಹಲಿ ಆಗಸ್ಟ್ 09: ವಕ್ಫ್ ತಿದ್ದುಪಡಿ ಮಸೂದೆಯನ್ನು (Waqf Amendment Bill) ಪರಿಶೀಲಿಸಲು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ(Om Birla) ಅವರು ಶುಕ್ರವಾರ 31 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು(Joint Parliamentary Committee) ರಚಿಸಿದ್ದಾರೆ. 31 ಸದಸ್ಯರಲ್ಲಿ 21 ಸಂಸದರು ಲೋಕಸಭೆಯಿಂದ, ಉಳಿದ 10 ಮಂದಿ ರಾಜ್ಯಸಭೆಯಿಂದ ಇದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದು, ವಿರೋಧ ಪಕ್ಷಗಳು ಅದರ ನಿಬಂಧನೆಗೆ ವಿರೋಧ ವ್ಯಕ್ತಪಡಿಸಿದ ನಂತರ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಪ್ರಸ್ತಾಪಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ (ತಿದ್ದುಪಡಿ) ಮಸೂದೆ, 2024 ಕುರಿತು ಚರ್ಚಿಸಲು ಜೆಪಿಸಿಯನ್ನು ರಚಿಸಲು ಲೋಕಸಭೆಯ 21 ಸಂಸದರ ಹೆಸರನ್ನು ಮುಂದಿಟ್ಟಿದ್ದಾರೆ. ಅದೇ ವೇಳೆ ಸಮಿತಿಗೆ 10 ಸದಸ್ಯರ ಹೆಸರನ್ನು ಶಿಫಾರಸು ಮಾಡುವಂತೆ ರಾಜ್ಯಸಭೆಗೆ ಕರೆ ನೀಡಿದ್ದಾರೆ.

ಜಂಟಿ ಸಂಸದೀಯ ಸಮಿತಿಯ ಸದಸ್ಯರಾಗಿರುವ ರಾಜ್ಯಸಭೆಯ 10 ಸಂಸದರ ಪಟ್ಟಿ

ಬ್ರಿಜ್ ಲಾಲ್, ಮೇಧಾ ವಿಶ್ರಮ್ ಕುಲಕರ್ಣಿ, ಗುಲಾಂ ಅಲಿ, ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್, ಸಯ್ಯದ್ ನಸೀರ್ ಹುಸೇನ್, ಮೊಹಮ್ಮದ್ ನದೀಮುಲ್ ಹಖ್, ವಿಜಯಸಾಯಿ ರೆಡ್ಡಿ, ಎಂ. ಮೊಹಮ್ಮದ್ ಅಬ್ದುಲ್ಲಾ, ಸಂಜಯ್ ಸಿಂಗ್, ಡಾ. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ.

ಜೆಪಿಸಿ ಸ್ಥಾಪನೆಯು ಮಸೂದೆಯ ನಿಬಂಧನೆಗಳ ಸಂಪೂರ್ಣ ಪರಿಶೀಲನೆಗೆ ಅವಕಾಶ ನೀಡುವುದರ ಜತೆಗೆ ಎರಡೂ ಸದನಗಳ ಸಂಸದರು ಶಾಸನವನ್ನು ಪರಿಷ್ಕರಿಸಲು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಸಮಿತಿಯು ವಿವಿಧ ಮಧ್ಯಸ್ಥಗಾರರೊಂದಿಗೆ ತೊಡಗಿಸಿಕೊಳ್ಳಲು, ಅಭಿಪ್ರಾಯಗಳನ್ನು ಸಂಗ್ರಹಿಸಲು ಮತ್ತು ಸಂಸತ್ತಿನಲ್ಲಿ ಮತಕ್ಕಾಗಿ ಮಂಡಿಸುವ ಮೊದಲು ಮಸೂದೆಯ ಅಂತಿಮ ಆವೃತ್ತಿಯನ್ನು ರೂಪಿಸಲು ಸಹಾಯ ಮಾಡುವ ಶಿಫಾರಸುಗಳನ್ನು ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ರಿಯಲ್​ ಹಿಂದೂ ವರ್ಸಸ್ ರೀಲ್​ ಹಿಂದೂ ಚರ್ಚೆ ಹುಟ್ಟುಹಾಕಿದ ಬಿಜೆಪಿ

 ಜೆಪಿಸಿಯ ಸದಸ್ಯರಾಗಿರುವ ಲೋಕಸಭೆಯ 21 ಸಂಸದರು

ಜಗದಾಂಬಿಕಾ ಪಾಲ್, ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಅಭಿಜಿತ್ ಗಂಗೋಪಾಧ್ಯಾಯ, ಡಿಕೆ ಅರುಣಾ, ಗೌರವ್ ಗೊಗೋಯ್, ಇಮ್ರಾನ್ ಮಸೂದ್, ಮಹಮ್ಮದ್ ನವಾದ್, ಮೊಹಮ್ಮದ್ ನವಾದ್ , ಕಲ್ಯಾಣ್ ಬ್ಯಾನರ್ಜಿ, ಎ ರಾಜಾ, ಲವು ಶ್ರೀ ಕೃಷ್ಣ ದೇವರಾಯಲು, ದಿಲೇಶ್ವರ್ ಕಾಮೈತ್, ಅರವಿಂದ್ ಸಾವಂತ್, ಸುರೇಶ್ ಗೋಪಿನಾಥ್, ನರೇಶ್ ಗಣಪತ್ ಮ್ಹಾಸ್ಕೆ, ಅರುಣ್ ಭಾರತಿ ಮತ್ತು ಅಸಾದುದ್ದೀನ್ ಓವೈಸಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Fri, 9 August 24