ವಯನಾಡಿನಲ್ಲಿ ಕೇಳಿತು ನಿಗೂಢ ಶಬ್ದ, ಭೂಕಂಪದ ಭೀತಿ
ವಯನಾಡಿನಲ್ಲಿ ಕಂಪನದ ಅನುಭವವಾಗಿದೆ, ಆದರೆ ರಾಷ್ಟ್ರೀಯ ಭೂಕಂಪನ ಕೇಂದ್ರವು ಭೂಕಂಪ ಸಂಭವಿಸಿಲ್ಲ ಎಂದು ಹೇಳಿದೆ.ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕೇರಳದ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯ ಎಡಕ್ಕಲ್ ಪ್ರದೇಶದಲ್ಲಿ ವಾಸಿಸುವ ಜನರು ಶುಕ್ರವಾರ ಭೂಮಿಯ ಕೆಳಗಿನಿಂದ ಶಬ್ದ ಕೇಳಿದ್ದು, ನಿವಾಸಿಗಳಲ್ಲಿ ಭಯಭೀತರಾಗಿದ್ದಾರೆ. ಒಂದು ವಾರದ ಹಿಂದೆ ವಯನಾಡಿನಲ್ಲಿ ಗುಡ್ಡ ಕುಸಿತ ಸಂಭವಿಸಿ, 300ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಇತ್ತೀಚೆಗಷ್ಟೇ ಸರಣಿ ಗುಡ್ಡ ಕುಸಿತ, ಪ್ರವಾಹದಂತಹ ಸ್ಥಿತಿಯನ್ನು ಎದುರಿಸಿದ್ದ ವಯನಾಡಿನಲ್ಲಿ ಇಂದು ನಿಗೂಢ ಶಬ್ದವೊಂದು ಕೇಳಿಬಂದಿದೆ. ಆದರೆ ಇದು ಭೂಕಂಪವಲ್ಲ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. ಕಂಪನ ಸಂಭವಿಸಿದೆ ಎಂದು ಹೇಳಲಾದ ವಿವಿಧ ಪ್ರದೇಶಗಳಲ್ಲಿ ತನಿಖೆ ನಡೆಯುತ್ತಿದೆ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಕೋಳಿಕ್ಕೋಡ್ನ ಕುದರಂಜಿ ಸೇರಿದಂತೆ ವಿವಿಧೆಡೆ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ, ಭೂಕಂಪನ ಮಾಪಕದಲ್ಲಿ ಯಾವುದೇ ಭೂಕಂಪ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ವಯನಾಡಿನ ನಿವಾಸಿಗಳಿಗೆ ಕಂಪನದ ಅನುಭವವಾಗಿದೆ ಎಂದು ಹೇಳಲಾಗುತ್ತಿದ್ದು, ಆದರೆ ರಿಕ್ಟರ್ ಮಾಪಕದಲ್ಲಿ ಕಂಪನ ದಾಖಲಾಗಿಲ್ಲ. ಬೆಳಗ್ಗೆ 10 ಗಂಟೆಗೆ ಕಂಪನದ ಅನುಭವವಾಗಿದೆ.
ಮಾಹಿತಿ ಪಡೆದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಜನರು ಗಾಬರಿಯಾಗುತ್ತಿದ್ದಾರೆ. ಭೌಗೋಳಿಕ ಸಮೀಕ್ಷೆ ಆಫ್ ಇಂಡಿಯಾ ಘಟನೆಯನ್ನು ದೃಢಪಡಿಸಿದೆ. ದೊಡ್ಡ ಪ್ರಮಾಣದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಜನರು ಮನೆಯಿಂದ ಓಡಿ ಬಂದಿದ್ದಾರೆ. ಇದೇ ವೇಳೆ ಇಲ್ಲಿನ ಸ್ಥಳೀಯರು ಕೂಡ ಕುರಿಚ್ಯಾರ್ಮಳ, ಪಿಣಂಗೋಡು ಮುರಿಕಾಪ್, ಮೇಲ್ಮುರಿ, ಸೆಟ್ಕುಕುನ್, ಸುಧಾಂಗಿರಿ, ಚೆನ್ನೈಕ್ಕವಲಗಳಲ್ಲಿ ಇದೇ ರೀತಿಯ ಅನುಭವವಾಗಿದೆ.
ಮತ್ತಷ್ಟು ಓದಿ: ವಯನಾಡು ಭೂಕುಸಿತ: ನಿಧಿ ಸಂಗ್ರಹಿಸಲು ಸತತ 3 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿದ ಬಾಲಕಿ
ವಯನಾಡಿನ ವೈತ್ತಿರಿ, ಪೊಸುತಾನ, ವೆಂಗಪಲ್ಲಿ, ನೆನ್ಮೇನಿ ಮತ್ತು ಅಂಬಲವಾಯಲ್ ಪಂಚಾಯಿತಿಗಳಲ್ಲಿ ಭೂಕಂಪನದ ಅನುಭವವಾಗಿದೆ. ವೈತ್ತಿರಿ ತಾಲೂಕಿನ ಮೂರು ಹಾಗೂ ಬತ್ತೇರಿ ತಾಲೂಕಿನ ಎರಡು ಪಂಚಾಯಿತಿಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ.
ಕೇರಳದ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯ ಎಡಕ್ಕಲ್ ಪ್ರದೇಶದಲ್ಲಿ ವಾಸಿಸುವ ಜನರು ಶುಕ್ರವಾರ ಭೂಮಿಯ ಕೆಳಗಿನಿಂದ ಶಬ್ದ ಕೇಳಿದ್ದು, ನಿವಾಸಿಗಳಲ್ಲಿ ಭಯಭೀತರಾಗಿದ್ದಾರೆ. ಒಂದು ವಾರದ ಹಿಂದೆ ವಯನಾಡಿನಲ್ಲಿ ಗುಡ್ಡ ಕುಸಿತ ಸಂಭವಿಸಿ, 300ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Fri, 9 August 24