ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ: ಸಂಸತ್ತಿನಲ್ಲಿ ಜಗದೀಪ್ ಧನ್ಖರ್ ವಿರುದ್ಧ ಜಯಾ ಬಚ್ಚನ್ ವಾಗ್ದಾಳಿ

ಕಳೆದ ವಾರ ಜಯಾ ಅಮಿತಾಬ್ ಬಚ್ಚನ್ ಎಂದು ಕರೆದ ನಂತರ ನಟ-ರಾಜಕಾರಣಿ ಜಯಾ ಬಚ್ಚನ್, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. "ಸರ್, ಸಿರ್ಫ್ ಜಯಾ ಬಚ್ಚನ್ ಬೋಲ್ತೆ ತೋ ಕಾಫಿ ಹೋಜಾತಾ (ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು, ಸರ್)" ಎಂದು ಅವರು ಹೇಳಿದ್ದರು.

ನಿಮ್ಮ ಮಾತಿನ ಧಾಟಿ  ಸ್ವೀಕಾರಾರ್ಹವಲ್ಲ: ಸಂಸತ್ತಿನಲ್ಲಿ ಜಗದೀಪ್ ಧನ್ಖರ್ ವಿರುದ್ಧ ಜಯಾ ಬಚ್ಚನ್ ವಾಗ್ದಾಳಿ
ಜಗದೀಪ್ ಧನ್ಖರ್ -ಜಯಾ ಬಚ್ಚನ್
Follow us
ರಶ್ಮಿ ಕಲ್ಲಕಟ್ಟ
|

Updated on:Aug 09, 2024 | 2:22 PM

ದೆಹಲಿ ಆಗಸ್ಟ್ 09: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ (Jagdeep Dhankar) ಅವರು ಸಮಾಜವಾದಿ ಸಂಸದೆ ಜಯಾ ಬಚ್ಚನ್ (Jaya Bachchan) ಅವರನ್ನು ಶುಕ್ರವಾರ ಸಂಸತ್ತಿನಲ್ಲಿ “ಜಯಾ ಅಮಿತಾಭ್ ಬಚ್ಚನ್” ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಯಾ. “ನನ್ನನ್ನು ಕ್ಷಮಿಸಿ, ಆದರೆ ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ, ಸರ್” ಎಂದಿದ್ದಾರೆ. ಇದಕ್ಕೆ ಧನ್ಖರ್, “ನೀವು ಸೆಲೆಬ್ರಿಟಿಯಾಗಿರಬಹುದು.ಆದರೆ ನೀವು ಇಲ್ಲಿನ ಶಿಷ್ಟಾಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿಯ ನಂತರ, ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಜಯಾ ಬಚ್ಚನ್ ಅವರಿಗೆ ಬೆಂಬಲ ಸೂಚಿಸಿ ಸದನದಿಂದ ಹೊರನಡೆದಿವೆ.

ಈ ವಾರದ ಆರಂಭದಲ್ಲಿ ಜಯಾ ಬಚ್ಚನ್ ಅವರನ್ನು ಸಂಸತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಸಂಬೋಧಿಸಿದ್ದಕ್ಕೆ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕಳೆದ ವಾರ ಜಯಾ ಅಮಿತಾಬ್ ಬಚ್ಚನ್ ಎಂದು ಕರೆದ ನಂತರ ನಟ-ರಾಜಕಾರಣಿಯು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. “ಸರ್, ಸಿರ್ಫ್ ಜಯಾ ಬಚ್ಚನ್ ಬೋಲ್ತೆ ತೋ ಕಾಫಿ ಹೋಜಾತಾ (ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು, ಸರ್)” ಎಂದು ಅವರು ಹೇಳಿದ್ದರು.

ಧನ್ಖರ್- ಜಯಾ ಬಚ್ಚನ್ ವಾಕ್ಸಮರ

ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮೇಲ್ಮನೆಯಲ್ಲಿ ‘ಜಯಾ ಅಮಿತಾಭ್ ಬಚ್ಚನ್’ ಗದ್ದಲ ಪುನರಾವರ್ತನೆಯಾಗುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಶುಕ್ರವಾರ ಮಧ್ಯಾಹ್ನ ರಾಜ್ಯಸಭೆಯಿಂದ ಹೊರನಡೆದಿವೆ. ಈ ಸಂಸತ್ತಿನ ಅಧಿವೇಶನದಲ್ಲಿ ಎರಡು ಬಾರಿ  ಜಯಾ ಬಚ್ಚನ್ ಅವರನ್ನು ‘ಜಯಾ ಅಮಿತಾಭ್ ಬಚ್ಚನ್’ ಎಂದು ಪರಿಚಯಿಸಲಾಗಿದೆ.

ಸಭಾತ್ಯಾಗದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಾ, “ಇದು ತುಂಬಾ ಅವಮಾನಕರ ಅನುಭವ…” ಎಂದು ಹೇಳಿದರು.  ಅದೇ ವೇಳೆ ಆಢಳಿತಾರೂಢ ಪಕ್ಷ ವಿಪಕ್ಷದವರನ್ನು  ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ, ‘ಜಯಾ ಅಮಿತಾಬ್ ಬಚ್ಚನ್’ ಎಂದು ಉಲ್ಲೇಖಿಸಿದಾಗ  ಜಯಾ ಸಿಡಿಮಿಡಿಗೊಂಡಿದ್ದಾರೆ. ಇದಕ್ಕೆ , ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್  ನೀವು ನನಗೆ ಪಾಠ ಮಾಡಬೇಡಿ ಎಂದಿದ್ದಾರೆ.

ಆದರೆ, ಜಯಾ ಬಚ್ಚನ್ ದೃಢವಾಗಿ ನಿಂತು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಧನ್ಖರ್ ವಿರುದ್ಧ ಪ್ರತಿಭಟನೆಗಳು ಹೆಚ್ಚಾದಾಗ ಮತ್ತು ವಿರೋಧ ಪಕ್ಷದ ಸಂಸದರು ಹೊರನಡೆದಿದ್ದರಿಂದ “ನನಗೆ ಅಧ್ಯಕ್ಷರಿಂದ ಕ್ಷಮೆ ಬೇಕು” ಎಂದು ಹೇಳಿದರು.

ಇದನ್ನೂ ಓದಿ: 17 ತಿಂಗಳ ನಂತರ ಮನೀಶ್ ಸಿಸೋಡಿಯಾಗೆ ಜಾಮೀನು; ಭಾವುಕರಾದ ಸಚಿವೆ ಅತಿಶಿ

ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್ ನೇತೃತ್ವದಲ್ಲಿ ವಿಪಕ್ಷ ಸಂಸತ್ತಿನ ಹೊರಗೆ ಜಮಾಯಿಸಿದ್ದಾರೆ.

ಶಿವಸೇನೆಯ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಅವರು ಜಯಾ ಬಚ್ಚನ್ ಅವರು “ಅಗಾಧ ಸಂಸದೀಯ ಅನುಭವವನ್ನು ಹೊಂದಿದ್ದಾರೆ. ಉಪಾಧ್ಯಕ್ಷರಿಗಿಂತ ಹೆಚ್ಚು” ಎಂದು ಹೇಳಿದ್ದು, ಅವರ ತೃಣಮೂಲ ಕಾಂಗ್ರೆಸ್ ಸಹೋದ್ಯೋಗಿ ಡೋಲಾ ಸೇನ್, ಜಯಾ ಬಚ್ಚನ್ ನಾಲ್ಕು ಬಾರಿ ಸಂಸದರಾಗಿದ್ದಾರೆ. ಅವರು ಗೌರವಕ್ಕೆ ಅರ್ಹರು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Fri, 9 August 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್