ದೆಹಲಿ ಕೋರ್ಟ್​ ಆವರಣದಲ್ಲಿ ವಕೀಲರಿಂದ ಯುವತಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು

ಕೆಲಸ ಕೊಡಿಸುತ್ತೇನೆ ಅಂದು ಕೋರ್ಟ್​ಗೆ ಕರೆಸಿಕೊಂಡು ವಕೀಲರೊಬ್ಬರು 21 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.ಯುವತಿ ಕೂಗಲು ಯತ್ನಿಸಿದಾಗ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಬಳಿಕ ಆಕೆಗೆ 1,500 ಹಣ ನೀಡಿ ಅಲ್ಲಿಂದ ಹೋಗುವಂತೆ ಹೇಳಿದ್ದರು.

ದೆಹಲಿ ಕೋರ್ಟ್​ ಆವರಣದಲ್ಲಿ ವಕೀಲರಿಂದ ಯುವತಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು
ನ್ಯಾಯಾಲಯImage Credit source: India Today
Follow us
|

Updated on:Aug 09, 2024 | 3:12 PM

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡು ಕೋರ್ಟ್​ ಆವರಣದಲ್ಲೇ ವಕೀಲರೊಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ತೀಸ್ ಹಜಾರಿ ಕೋರ್ಟ್​ನಲ್ಲಿರುವ ಚೇಂಬರ್​ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು 21 ವರ್ಷದ ಯುವತಿ ದೂರು ನೀಡಿದ್ದಾರೆ. ಜುಲೈ 30ರಂದು ಯುವತಿಯ ಸಂಬಂಧಿ ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆ ದೂರಿನಲ್ಲಿ ಆಕೆ ಕೆಲಸ ಹುಡುಕುತ್ತಿದ್ದಳು, ಆ ಸಂದರ್ಭದಲ್ಲಿ ವಕೀಲರು ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು, ಆಕೆಯ ಶೈಕ್ಷಣಿಕ ಅರ್ಹತೆಯನ್ನು ತೋರಿಸಲು ಅವರ ಚೇಂಬರ್​ಗೆ ಬರುವಂತೆ ತಿಳಿಸಿದ್ದರು.

ಮುಂದಿನ 8-10 ದಿನಗಳೊಳಗಾಗಿ ಆಕೆಗೆ ಕೆಲಸ ಕೊಡಿಸುವುದಾಗಿ ವಕೀಲರು ಯುವತಿಗೆ ತಿಳಿಸಿದ್ದರು, 10 ದಿನಗಳ ನಂತರ ಆಕೆ ವಕೀಲರನ್ನು ಸಂಪರ್ಕಿಸಿದಾಗ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಳ್ಳೆಯ ಸ್ನೇಹಿತರು ಬೇಕು ಎಂದು ವಕೀಲರು ಹೇಳಿದ್ದರು. ಜುಲೈ 27ರಂದು ಮತ್ತೆ ಯುವತಿಯನ್ನು ವಕೀಲರ ಚೇಂಬರ್‌ಗೆ ಕರೆಸಲಾಗಿತ್ತು. ಕೆಲ ಹೊತ್ತು ಮಾತನಾಡಿದ ಬಳಿಕ ವಕೀಲರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಮತ್ತಷ್ಟು ಓದಿ: ನಂಬಿದವರು ಅಸಹಾಯಕ ಸ್ಥಿತಿಯಲ್ಲಿದ್ದಾಗಲೇ ಆ ಇಬ್ಬರು ವಿವಾಹಿತರ ಮಧ್ಯೆ ಪ್ರೇಮಾಂಕುರ! ಆಮೇಲೇನಾಯ್ತು?

ಯುವತಿ ಕೂಗಲು ಯತ್ನಿಸಿದಾಗ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಬಳಿಕ ಆಕೆಗೆ 1,500 ಹಣ ನೀಡಿ ಅಲ್ಲಿಂದ ಹೋಗುವಂತೆ ಹೇಳಿದ್ದರು.

ಮನೆಗೆ ಬಂದ ಬಳಿಕ ಯುವತಿ ನಡೆದಿರುವ ಎಲ್ಲಾ ವಿಚಾರವನ್ನು ತಿಳಿಸಿದ್ದಾಳೆ, ಕೂಡಲೇ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:18 pm, Fri, 9 August 24