ಪತಿ ಅಮಿತಾಬ್ ಬಚ್ಚನ್ ಬಗ್ಗೆ ಜಯಾ ಬಚ್ಚನ್ಗೆ ಇದೆ ಒಂದು ದೂರು
Amitabh Bachchan: ಬಾಲಿವುಡ್ನ ಮೇರು ನಟ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಜೊತೆ ಮದುವೆಯಾಗಿ 50 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಜಯಾ ಬಚ್ಚನ್ಗೆ ಅಮಿತಾಬ್ ಬಚ್ಚನ್ ಮೇಲೆ ಒಂದು ಮುಖ್ಯವಾದ ದೂರು ಇದೆಯಂತೆ.
ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರದ್ದು 50 ವರ್ಷಗಳ ದಾಂಪತ್ಯ. ಬಾಲಿವುಡ್ನ ತಾರಾ ಜೋಡಿಗಳಲ್ಲಿ ಒಂದು ಬಚ್ಚನ್ ಜೋಡಿ. ಜಯಾ ಬಚ್ಚನ್ ಒಳ್ಳೆಯ ನಟಿಯಾಗಿರುವ ಜೊತೆಗೆ ಖಡಕ್ ರಾಜಕಾರಣಿಯೂ ಹೌದು. ಜಯಾ ಬಚ್ಚನ್ ತುಸು ಗಂಭೀರ ಮತ್ತು ಶಿಸ್ತಿನ ವ್ಯಕ್ತಿತ್ವದವರು. ರಾಜಕಾರಣಿಯೂ ಆಗಿರುವ ಜಯಾ ಬಚ್ಚನ್ ಸಂಸತ್ನಲ್ಲಿ ಆಗಾಗ್ಗೆ ಗುಡುಗುವುದುಂಟು. ಪಾಪರಾಟ್ಜಿಗಳ ಮೇಲೂ ಸಹ ಹಲವು ಬಾರಿ ಜಗಳ ಮಾಡಿದ್ದಾರೆ. ಜಯಾ ಹಾಗೂ ಅಮಿತಾಬ್ರ ದಾಂಪತ್ಯಕ್ಕೆ 50 ವರ್ಷಗಳಾಗಿವೆ. ಆದರೆ ಜಯಾ ಬಚ್ಚನ್ಗೆ, ಅಮಿತಾಬ್ ಬಚ್ಚನ್ ಮೇಲೆ ಒಂದು ದೂರು ಇದೆಯಂತೆ.
ಅಮಿತಾಬ್ ಬಚ್ಚನ್ರ ಪುತ್ರಿ ಶ್ವೇತಾ ಬಚ್ಚನ್ ಮತ್ತು ಅವರ ಪುತ್ರಿ ನವ್ಯಾ ನಂದಾ ‘ಕೌನ್ ಬನೇಗ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶೋನಲ್ಲಿ ಜಯಾ ಬಚ್ಚನ್ ವಿಡಿಯೋ ಕಾಲ್ ಮೂಲಕ ಕಾಣಿಸಿಕೊಂಡರು. ಈ ಸಮಯದಲ್ಲಿ ಎಲ್ಲರೆದುರು ಜಯಾ ಬಚ್ಚನ್, ಅಮಿತಾಬ್ ಬಚ್ಚನ್ ಬಗ್ಗೆ ದೂರು ಹೇಳಲು ಆರಂಭಿಸಿದರು. ಅಮಿತಾಬ್ ಬಚ್ಚನ್ ಅದನ್ನು ಒಪ್ಪಲಿಲ್ಲವಾದರೂ, ಅಮ್ಮನಿಗೆ ಸಾಥ್ ಕೊಟ್ಟು ಮಗಳು ಸಹ ಅಮಿತಾಬ್ ಕುರಿತು ದೂರು ಹೇಳಿದರು.
ಜಯಾ ಬಚ್ಚನ್ ಹೇಳಿದಂತೆ, ‘ಅಮಿತಾಬ್ ಬಚ್ಚನ್ ಅವರ ಕರೆ ಸ್ವೀಕಾರ ಮಾಡುವುದಿಲ್ಲವಂತೆ. ಅಮಿತಾಬ್ ಬಚ್ಚನ್ ಅವರ ಬಳಿ 5-6 ಫೋನ್ಗಳಿವೆ. ಆದರೆ ಯಾವುದಕ್ಕೇ ಕರೆ ಮಾಡಿದರೂ ಸಹ ಅವರು ಫೋನ್ ರಿಸೀವ್ ಮಾಡುವುದಿಲ್ಲ’ ಎಂದಿದ್ದಾರೆ. ‘ಎಷ್ಟೋ ಬಾರಿ ಏನೋ ಗಂಭೀರ ಘಟನೆ ನಡೆದಿರುತ್ತದೆ. ಮನೆಯಲ್ಲಿ ಏನೋ ಸಮಸ್ಯೆ ಆಗಿರುತ್ತದೆ. ಅದನ್ನು ಹೇಳೊಣವೆಂದು ಕಾಲ್ ಮಾಡಿರುತ್ತೇವೆ ಆದರೆ ಅಮಿತಾಬ್ ಬಚ್ಚನ್ ಫೋನ್ ರಿಸೀವ್ ಮಾಡುವುದಿಲ್ಲ. ಆದರೆ ಅದಾದ ಮೇಲೆ ನೀವು ನನಗೆ ಏಕೆ ಹೇಳಲಿಲ್ಲ, ಮನೆಯಲ್ಲಿ ಎಷ್ಟೋಂದು ವಿಷಯ ನಡೆಯುತ್ತವೆ ನೀವು ಅದನ್ನು ನನಗೆ ಹೇಳುವುದಿಲ್ಲ ಎಂದು ನಮ್ಮನ್ನೇ ಬೈಯ್ಯುತ್ತಾರೆ’ ಎಂದು ದೂರಿದ್ದಾರೆ ಜಯಾ ಬಚ್ಚನ್.
ಇದನ್ನೂ ಓದಿ:ಕಚೇರಿ ಬಾಡಿಗೆಗೆ ನೀಡಿದ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆ ಎಷ್ಟು ಗೊತ್ತೆ?
ಈ ವಿಷಯಕ್ಕೆ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ನಂದ ಹಾಗೂ ಮೊಮ್ಮಗಳು ನವ್ಯಾ ನಂದಾ ಸಹ ಒಪ್ಪಿದ್ದಾರೆ. ಬಚ್ಚನ್ ಕುಟುಂಬದ್ದು ಒಂದು ವಾಟ್ಸ್ಆಪ್ ಗ್ರೂಫ್ ಇದೆಯಂತೆ. ಜಯಾ ಬಚ್ಚನ್ ಅದರಲ್ಲಿ ಒಮ್ಮೆ ಮೆಸೇಜ್ ಮಾಡಿ, ತಾವು ವಿಮಾನ ಹತ್ತಿದ್ದು ಮುಂಬೈಗೆ ಬರುತ್ತಿರುವುದಾಗಿ ಮೆಸೇಜ್ ಮಾಡಿದರಂತೆ. ಆ ಮೆಸೇಜ್ಗೆ ನಾಲ್ಕು ಗಂಟೆ ಬಳಿಕ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿದರಂತೆ. ಅಷ್ಟರಲ್ಲಾಗಲೇ ಜಯಾ ಬಚ್ಚನ್ ಮನೆಗೆ ಬಂದಾಗಿತ್ತಂತೆ! ಈ ವಿಷಯವನ್ನು ನವ್ಯಾ ಹೇಳಿದ್ದು, ಅಮಿತಾಬ್ ಅವರು ಹಲವು ಬಾರಿ ಹೀಗೆ ಮಾಡಿದ್ದಾರೆ ಎಂದು ಸಹ ಹೇಳಿದ್ದಾರೆ.
ಇನ್ನು ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ಸಹ ಇದನ್ನು ಒಪ್ಪಿದ್ದು, ಅಮಿತಾಬ್ ಅವರು ಮೊಬೈಲ್ ನಲ್ಲೇ ಮುಳುಗಿರುತ್ತಾರೆ ಆದರೆ ವಾಟ್ಸ್ ಆಫ್ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇನ್ಸ್ಟಾಗ್ರಾಂ ನೋಡುತ್ತಿರುತ್ತಾರೆ ಅಥವಾ ತಮ್ಮ ಬ್ಲಾಗ್ ಬರೆಯುತ್ತಿರುತ್ತಾರೆ ಆಗೆಲ್ಲ ಅವರು ವಾಟ್ಸ್ಆಫ್ ನೋಡುವುದೇ ಇಲ್ಲ’ ಎಂದಿದ್ದಾರೆ. ಅಮಿತಾಬ್ ಹಾಗೂ ಜಯಾ ಬಚ್ಚನ್ 1973 ರಲ್ಲಿ ವಿವಾಹವಾದರು. ಅವರಿಗೆ ಅಭಿಷೇಕ್ ಬಚ್ಚನ್ ಹಾಗೂ ಶ್ವೇತ ಬಚ್ಚನ್ ಇಬ್ಬರು ಮಕ್ಕಳು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ