Salman Khan: 2900 ಕೋಟಿ ರೂಪಾಯಿ ಒಡೆಯ ಸಲ್ಮಾನ್ ಖಾನ್: ಇವೆ ದುಬಾರಿ ವಸ್ತುಗಳು

Salman Khan: ಸಲ್ಮಾನ್ ಖಾನ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಅಂದಹಾಗೆ ಸಲ್ಮಾನ್ ಖಾನ್ ಬಳಿಯ ಒಟ್ಟು ಆಸ್ತಿ ಎಷ್ಟು? ಸಲ್ಮಾನ್ ಬಳಿ ಇವೆ ಹಲವು ಬಲು ದುಬಾರಿ ವಸ್ತುಗಳು.

Salman Khan: 2900 ಕೋಟಿ ರೂಪಾಯಿ ಒಡೆಯ ಸಲ್ಮಾನ್ ಖಾನ್: ಇವೆ ದುಬಾರಿ ವಸ್ತುಗಳು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Aug 06, 2024 | 5:31 PM

ಸಲ್ಮಾನ್ ಖಾನ್, ಬಾಲಿವುಡ್​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರು ಬಾಲಿವುಡ್​ನಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿದವರು. ಅವರು ಚಿತ್ರರಂಗಕ್ಕೆ 1988ರಲ್ಲಿ ಕಾಲಿಟ್ಟರು. ‘ಬೀವಿ ಹೋ ತೋ ಐಸಿ’ ಚಿತ್ರದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಅವರಿಗೆ ಇತ್ತೀಚೆಗೆ ಯಶಸ್ಸು ಸಿಕ್ಕಿಲ್ಲ. ಅವರ ಒಟ್ಟೂ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಸಲ್ಮಾನ್ ಖಾನ್ ಅವರ ಆಸ್ತಿ 2900 ಕೋಟಿ ರೂಪಾಯಿ. ಸಲ್ಮಾನ್ ಖಾನ್ ಬಳಿ ಹಲವು ದುಬಾರಿ ಪ್ರಾಪರ್ಟಿಗಳು ಇವೆ. ಅವರು ಸಮುದ್ರ ತೀರದತ್ತ ಮುಖ ಮಾಡಿದ ಗ್ಯಾಲಕ್ಸಿ ಅಪಾರ್ಟ್​​ಮೆಂಟ್​ನಲ್ಲಿ ಟ್ರಿಪ್ಲೆಕ್ಸ್ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇದು ಸಲ್ಮಾನ್ ಖಾನ್ ಅವರ ದುಬಾರಿ ಮನೆಗಳಲ್ಲಿ ಒಂದು. ಇದರ ಬೆಲೆ 100 ಕೋಟಿ ರೂಪಾಯಿ. ಮುಂಬೈನ ಹೊರಭಾಗದಲ್ಲಿ ಇವರು 150 ಎಕರೆ ಫಾರ್ಮ್​ಹೌಸ್ ಹೊಂದಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಇಲ್ಲಿಯೇ ಉಳಿದುಕೊಂಡಿದ್ದರು.

ಸಲ್ಮಾನ್ ಖಾನ್ ಅವರು ಕೇವಲ ಭಾರತ ಮಾತ್ರವಲ್ಲ ದುಬೈನಲ್ಲಿ ಜಾಗ ಹೊಂದಿದ್ದಾರೆ. ದುಬೈ ರಿಯಲ್​ ಎಸ್ಟೇಟ್​​ನಲ್ಲಿ ಕಾಲಿಟ್ಟ ಕೆಲವೇ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅವರು ಕೂಡ ಒಬ್ಬರು. ದುಬೈನ ಡೌನ್​ಟೌನ್​ನಲ್ಲಿ ಅವರು ಫ್ಲ್ಯಾಟ್ ಹೊಂದಿದ್ದಾರೆ. 51ನೇ ವರ್ಷದ ಬರ್ತ್​ಡೇ ಸಂದರ್ಭದಲ್ಲಿ ಇವರು ಗೊರಾಯಿಯಲ್ಲಿ ಬೀಚ್ ಹೌಸ್​ ಖರೀದಿ ಮಾಡಿದ್ದರು. ಇದರ ಬೆಲೆ 100 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ:ಸಲ್ಮಾನ್ ಖಾನ್​ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..

ಇಷ್ಟಕ್ಕೆ ನಿಂತಿಲ್ಲ. ಸಲ್ಮಾನ್ ಖಾನ್ ಅವರು ಖಾಸಗಿ ಯಾಚ್ ಹೊಂದಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿ. ಸಲ್ಮಾನ್ ಖಾನ್ ಅವರು 2012ರಲ್ಲಿ ಬೀಯಿಂಗ್ ಹ್ಯೂಮನ್ ಹೆಸರಿನ ಬ್ರ್ಯಾಂಡ್ ಆರಂಭಿಸಿದರು. ಈ ಕಂಪನಿಯ ಮೌಲ್ಯ 235 ಕೋಟಿ ರೂಪಾಯಿ. ಈ ಬ್ರ್ಯಾಂಡ್ ಅಡಿಯಲ್ಲಿ ಬಟ್ಟೆ, ಜ್ಯುವೆಲರಿ, ವಾಚ್​ಗಳು ಇವೆ.

ಸಲ್ಮಾನ್ ಖಾನ್ ಅವರು ‘ಸಲ್ಮಾನ್ ಖಾನ್ ಫಿಲ್ಮ್ಸ್’ ಹೊಂದಿದ್ದಾರೆ. ಇದರ ಅಡಿಯಲ್ಲಿ ಅವರು ಸಿನಿಮಾ ನಿರ್ಮಾಣ ಹಾಗೂ ಹಂಚಿಕೆ ಮಾಡುತ್ತಾರೆ. ‘ರೇಸ್ 3’, ‘ಭಾರತ್’, ‘ದಬಾಂಗ್ 3’ ಚಿತ್ರಗಳನ್ನು ಈ ನಿರ್ಮಾಣ ಸಂಸ್ಥೆಯ ಮೂಲಕ ಅವರು ತಯಾರಿಸಿದ್ದಾರೆ. ಹಲವು ಉದ್ಯಮಗಳ ಮೇಲೆ ಸಲ್ಮಾನ್ ಖಾನ್ ಅವರು ಹೂಡಿಕೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಬಳಿ ದುಬಾರಿ ಕಾರುಗಳು ಇವೆ. ಆದರೆ ಇವರು ಹೆಚ್ಚಾಗಿ ಬಳಕೆ ಮಾಡೋದು ಲ್ಯಾಂಡ್​ ಕ್ರ್ಯೂಸರ್. ಇದು ಬುಲೆಟ್ ಪ್ರೂಫ್ ಕಾರು. ಇದರ ಬೆಲೆ 2.26 ಕೋಟಿ ರೂಪಾಯಿ. ಇದಲ್ಲದೆ ಇನ್ನೂ ಹಲವು ದುಬಾರಿ ವಾಹನಗಳು ಅವರ ಬಳಿ ಇವೆ. ಆದರೆ, ಅವುಗಳನ್ನು ಅವರು ಹೊರಗೆ ತಂದಿದ್ದು ಕಡಿಮೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಅವರಿಗೆ ಬೆದರಿಕೆ ಇದೆ. ಇದಾದಾಗಿನಿಂದಲೂ ಅವರು ಲ್ಯಾಂಡ್ ಕ್ರ್ಯೂಸರ್​ನಲ್ಲಿ ಓಡಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ