Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನನ್ನು ಆ ಸಿನಿಮಾ ನಟಿ ಅಂತ ಕರೆಯಬೇಡಿ’: ಬೇಸರದಿಂದ ಹೇಳಿದ ಸನ್ನಿ ಲಿಯೋನ್​

ಸನ್ನಿ ಲಿಯೋನ್​ ಅವರು ನೀಲಿ ಚಿತ್ರಗಳಲ್ಲಿ ನಟಿಸುವುದು ನಿಲ್ಲಿಸಿ ಬಹಳ ವರ್ಷ ಆಗಿದೆ. ಆದರೂ ಕೂಡ ಅವರಿಗೆ ಆ ಹಣೆಪಟ್ಟಿ ಹೋಗಿಲ್ಲ. ಈ ಬಗ್ಗೆ ಸನ್ನಿ ಲಿಯೋನ್​ ಬೇಸರ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ನಲ್ಲಿ ಅನೇಕ ಸಿನಿಮಾ ಮಾಡಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ಹಲವು ಐಟಂ ಸಾಂಗ್​ಗಳಲ್ಲಿ ನರ್ತಿಸಿದರೂ ಸನ್ನಿ ಲಿಯೋನ್​ ಅವರ ಇತಿಹಾಸವನ್ನು ಜನರು ಮರೆಯುತ್ತಿಲ್ಲ.

‘ನನ್ನನ್ನು ಆ ಸಿನಿಮಾ ನಟಿ ಅಂತ ಕರೆಯಬೇಡಿ’: ಬೇಸರದಿಂದ ಹೇಳಿದ ಸನ್ನಿ ಲಿಯೋನ್​
ಸನ್ನಿ ಲಿಯೋನ್​
Follow us
ಮದನ್​ ಕುಮಾರ್​
|

Updated on: Aug 06, 2024 | 9:01 PM

ಒಂದು ಕಾಲದಲ್ಲಿ ನಟಿ ಸನ್ನಿ ಲಿಯೋನ್​ ಅವರು ನೀಲಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಅಶ್ಲೀಲ ಸಿನಿಮಾಗಳಲ್ಲಿ ಸ್ಟಾರ್​ ಪಟ್ಟ ಪಡೆದಿದ್ದ ಅವರು ನಂತರ ಬಾಲಿವುಡ್​ ಕಡೆಗೆ ಆಸಕ್ತಿ ತೋರಿಸಿದರು. ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಸನ್ನಿ ಲಿಯೋನ್​ ಅವರು ನೀಲಿ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. ಮತ್ತೆ ಎಂದಿಗೂ ಅವರು ಆ ಕಡೆ ತಲೆ ಹಾಕಲಿಲ್ಲ. ಹಾಗಿದ್ದರೂ ಕೂಡ ಸನ್ನಿ ಲಿಯೋನ್​ ಅವರನ್ನು ಕೆಲವರು ಬೇರೆ ದೃಷ್ಟಿಯಲ್ಲಿ ನೋಡುತ್ತಾರೆ. ಆ ಬಗ್ಗೆ ಅವರೀಗ ಮೌನ ಮುರಿದಿದ್ದಾರೆ. ಇಂದಿಗೂ ತಮ್ಮನ್ನು ಮಾಜಿ ನೀಲಿ ತಾರೆ ಎಂಬ ರೀತಿಯಲ್ಲಿ ಗುರುತಿಸುತ್ತಿರುವುದು ನಟಿಗೆ ಬೇಸರ ಮೂಡಿಸಿದೆ.

ಇತ್ತೀಚೆಗೆ ಸನ್ನಿ ಲಿಯೋನ್​ ಅವರು ಒಂದು ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ಇಮೇಜ್​ ಬಗ್ಗೆ ಪ್ರಶ್ನೆ ಎದುರಾಯಿತು. ಈ ಮೊದಲು ಮಾಡಿದ್ದ ಅಶ್ಲೀಲ ಸಿನಿಮಾಗಳ ಮೂಲಕ ಜನರು ಸನ್ನಿ ಲಿಯೋನ್​ ಅವರನ್ನು ಗುರುತಿಸುತ್ತಾರೆ. ಅದರಿಂದ ಅವರಿಗೆ ಯಾವ ರೀತಿ ಫೀಲ್ ಆಗುತ್ತದೆ ಎಂದು ಕೇಳಲಾಯಿತು. ಈ ಪ್ರಶ್ನೆಯೇ ಸನ್ನಿ ಲಿಯೋನ್​ ಅವರಿಗೆ ವಿಚಿತ್ರ ಎನಿಸಿತು.

‘ನಾವು ಇಂದಿಗೂ ಅದರ ಬಗ್ಗೆಯೇ ಮಾತನಾಡುತ್ತಿದ್ದೇವೆ ಎಂಬುದು ಹೆಚ್ಚು ಚಿಂತೆಗೆ ಕಾರಣವಾಗುತ್ತಿದೆ. ನಾನು ಬಾಲಿವುಡ್​ಗೆ ಬಂದು 13 ವರ್ಷ ಆಯಿತು. ಹಳೆಯದು ಹೋಗಲಿ ಬಿಡಿ. ನೀವೇ ಅದನ್ನು ಮರೆಯದಿದ್ದರೆ ನಾವು ಮುಂದೆ ಸಾಗುವುದು ಹೇಗೆ? ಮುಂದೆ ಸಾಗಲು ಇದು ಸರಿಯಾದ ಸಮಯ’ ಎಂದು ಸನ್ನಿ ಲಿಯೋನ್ ಅವರು ಹೇಳಿದ್ದಾರೆ. ಆ ದಿನಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸನ್ನಿ ಲಿಯೋನ್ ಅವರಿಗೆ ಕಿರಿಕಿರಿ ಆಗಿದೆ.

ಇದನ್ನೂ ಓದಿ: ಸನ್ನಿ ಲಿಯೋನಿ ನಟಿಯಷ್ಟೆ ಅಲ್ಲ ಉದ್ಯಮಿಯೂ ಹೌದು

ಹಿಂದಿ ಬಿಗ್​ ಬಾಸ್ ಸೀಸನ್​ 5 ಮೂಲಕ ಸನ್ನಿ ಲಿಯೋನ್​ ಅವರು ಭಾರತದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಬಳಿಕ ಅವರಿಗೆ ಬಾಲಿವುಡ್​ನಿಂದ ಅವಕಾಶಗಳು ಬರಲು ಆರಂಭಿಸಿದವು. ‘ಜಿಸ್ಮ್ 2’ ಸನ್ನಿ ಲಿಯೋನ್​ ನಟಿಸಿದ ಮೊದಲ ಬಾಲಿವುಡ್​ ಸಿನಿಮಾ. ನಂತರ, ‘ಜಾಕ್​ಪಾಟ್’, ‘ರಾಗಿಣಿ ಎಂಎಂಎಸ್​ 2’ ಮುಂತಾದ ಸಿನಿಮಾಗಳು ಕೂಡ ಸನ್ನಿ ಲಿಯೋನ್​ ಅವರಿಗೆ ಖ್ಯಾತಿ ತಂದುಕೊಟ್ಟವು. ಹಲವು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್​ ಮಾಡುವ ಮೂಲಕವೂ ಸನ್ನಿ ಲಿಯೋನ್​ ಫೇಮಸ್​ ಆದರು. ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟು ಸಹ ಜನರಿಗೆ ಹತ್ತಿರವಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!