ರಾಹುಲ್​ ಮೋದಿ ಜೊತೆ ಶ್ರದ್ಧಾ ಕಪೂರ್​ ಬ್ರೇಕಪ್​? ನಟಿಯ ಲವ್​ ಸ್ಟೋರಿಗೆ ಪೂರ್ಣವಿರಾಮ

ಬಾಲಿವುಡ್​ನ ಜನಪ್ರಿಯ ನಟಿ ಶ್ರದ್ಧಾ ಕಪೂರ್​ ಅವರು ರಾಹುಲ್​ ಮೋದಿ ಜೊತೆ ಆಪ್ತವಾಗಿದ್ದರು. ಇಬ್ಬರ ಫೋಟೋಗಳು ವೈರಲ್​ ಆಗಿದ್ದವು. ಈಗ ಈ ಜೋಡಿಯ ನಡುವೆ ವೈಮನಸ್ಸು ಉಂಟಾದಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ. ಈ ಬಗ್ಗೆ ಫ್ಯಾನ್ಸ್​ ಚರ್ಚೆ ಮಾಡುತ್ತಿದ್ದಾರೆ.

ರಾಹುಲ್​ ಮೋದಿ ಜೊತೆ ಶ್ರದ್ಧಾ ಕಪೂರ್​ ಬ್ರೇಕಪ್​? ನಟಿಯ ಲವ್​ ಸ್ಟೋರಿಗೆ ಪೂರ್ಣವಿರಾಮ
ಶ್ರದ್ಧಾ ಕಪೂರ್​, ರಾಹುಲ್​ ಮೋದಿ
Follow us
ಮದನ್​ ಕುಮಾರ್​
|

Updated on: Aug 05, 2024 | 11:00 PM

ನಟಿ ಶ್ರದ್ಧಾ ಕಪೂರ್​ ಅವರು ‘ಸ್ತ್ರೀ 2’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ವಿಚಾರಗಳಿಂದಲೂ ಶ್ರದ್ಧಾ ಕಪೂರ್​ ಅವರು ಆಗಾಗ ಸುದ್ದಿ ಆಗುತ್ತಾರೆ. ಚಿತ್ರರಂಗದಲ್ಲಿ ಸಹ-ನಿರ್ದೇಶಕನಾಗಿ ಗುರುತಿಸಿಕೊಂಡ ರಾಹುಲ್​ ಮೋದಿ ಜೊತೆ ಶ್ರದ್ಧಾ ಕಪೂರ್​ ಡೇಟಿಂಗ್​ ಮಾಡುತ್ತಿದ್ದರು. ಆ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಈಗ ಶ್ರದ್ಧಾ ಕಪೂರ್​ ಮತ್ತು ರಾಹುಲ್​ ಮೋದಿ ನಡುವೆ ಬ್ರೇಕಪ್​ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಿಬ್ಬರು ಬಹಿರಂಗವಾಗಿ ಮಾತನಾಡಿಲ್ಲವಾದರೂ ಸೋಶಿಯಲ್​ ಮೀಡಿಯಾದಲ್ಲಿ ಸಾಕ್ಷಿ ಸಿಕ್ಕಿದೆ.

2023ರಲ್ಲಿ ಶ್ರದ್ಧಾ ಕಪೂರ್​ ಹಾಗೂ ರಾಹುಲ್​ ಮೋದಿ ಅವರು ಬಹಳ ಆಪ್ತವಾಗಿದ್ದರು. ತಮ್ಮಿಬ್ಬರ ಸೆಲ್ಫಿಯನ್ನು ಶ್ರದ್ಧಾ ಕಪೂರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳಿಗೆ ಎಲ್ಲವೂ ಖಚಿತ ಆಗಿತ್ತು. ಕೆಲವು ಸಂದರ್ಭದಲ್ಲಿ ಶ್ರದ್ಧಾ ಕಪೂರ್​ ಅವರು ರಾಹುಲ್​ ಮೋದಿ ಜೊತೆ ಕಾಣಿಸಿಕೊಂಡಿದ್ದರು. ಆದರೆ ಈಗ ಅವರ ಸಂಬಂಧದಲ್ಲಿ ಬಿರುಕು ಮೂಡಿದಂತಿದೆ.

ಸೆಲೆಬ್ರಿಟಿಗಳ ಎಲ್ಲ ಚಲನವಲನಗಳನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ. ಶ್ರದ್ಧಾ ಕಪೂರ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ರಾಹುಲ್​ ಮೋದಿಯವರನ್ನು ಫಾಲೋ ಮಾಡುತ್ತಿಲ್ಲ. ಅಲ್ಲದೇ, ರಾಹುಲ್ ಮೋದಿಯ ಪ್ರೊಡಕ್ಷನ್​ ಹೌಸ್​, ಆತ್ಮೀಯರು ಹಾಗೂ ಮುದ್ದಿನ ಶ್ವಾನದ ಪೇಜ್​ಗಳನ್ನೂ ಕೂಡ ಶ್ರದ್ಧಾ ಕಪೂರ್​ ಅನ್​​ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಬ್ರೇಕಪ್​ ಕಾರಣದಿಂದಲೇ ಅವರು ಈ ರೀತಿ ಮಾಡಿದ್ದಾರೆ ಎಂಬುದು ನೆಟ್ಟಿಗರ ವಾದ.

ಇದನ್ನೂ ಓದಿ: ಹೊಸ ಹಾಡಿನಲ್ಲಿ ತಮನ್ನಾ ಭರ್ಜರಿ ಡ್ಯಾನ್ಸ್; ‘ಸ್ತ್ರೀ 2’ ಚಿತ್ರದಲ್ಲಿ ಐಟಂ ಸಾಂಗ್

ಸಿನಿಮಾ ಬಗ್ಗೆ ಮಾತನಾಡುವುದಾದರೆ, ಶ್ರದ್ಧಾ ಕಫೂರ್​ ಅಭಿನಯದ ‘ಸ್ತ್ರೀ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದಲ್ಲಿ ಹಾರರ್​ ಕಹಾನಿ ಇದೆ. ರಾಜ್​ಕುಮಾರ್​ ರಾವ್​, ಪಂಕಜ್​ ತ್ರಿಪಾಠಿ, ಅಭಿಷೇಕ್​ ಬ್ಯಾನರ್ಜಿ, ತಮನ್ನಾ ಭಾಟಿಯಾ ಮುಂತಾದ ಜನಪ್ರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್​ ಮತ್ತು ಹಾಡುಗಳು ಈಗಾಗಲೇ ಕ್ರೇಜ್​ ಸೃಷ್ಟಿ ಮಾಡಿವೆ. ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದರಿಂದ ಶ್ರದ್ಧಾ ಕಪೂರ್​ ಅವರ ವೃತ್ತಿಜೀವನಕ್ಕೆ ಹೊಸ ಮೆರುಗು ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.